ಕೊರೋನಾದಿಂದ ಉದ್ಭವಿಸಿರುವ ಬಿಕ್ಕಟ್ಟಿನಿಂದ ಜನರ ಪರದಾಟ| ಅತ್ತ ಕೇರಳದಲ್ಲಿ  90 ದಿನದಲ್ಲಿ 350 ಆನ್‌ಲೈನ್‌ ಕೋರ್ಸ್‌ ಮಾಡಿ ವಿಶ್ವ ದಾಖಲೆ  ಮಾಡಿದ ಮಹಿಳೆ

ಕೊಚ್ಚಿ(ಸೆ.30): ಕೊರೋನಾದಿಂದ ಉದ್ಭವಿಸಿರುವ ಬಿಕ್ಕಟ್ಟಿನಿಂದಾಗಿ ಜನರು ನಿತ್ಯದ ಜೀವನಕ್ಕೆ ಪರದಾಡುತ್ತಿದ್ದರೆ, ಅತ್ತ ಕೇರಳದ ಎಲಾಮಕ್ಕರದ ಮಹಿಳೆಯೊಬ್ಬರು 90 ದಿನದಲ್ಲಿ 350 ಆನ್‌ಲೈನ್‌ ಕೋರ್ಸ್‌ ಮಾಡಿ ವಿಶ್ವ ದಾಖಲೆ ಬರೆದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆರತಿ ರಘುನಾಥ್‌ ಅವರೇ ಈ ಸಾಧನೆ ಮಾಡಿದ ಗಟ್ಟಿಗಿತ್ತಿ. ಎರಡನೇ ವರ್ಷದ ಎಂಎಸ್‌ಸಿ ವ್ಯಾಸಂಗ ಮಾಡುತ್ತಿರುವ ಆರತಿ ಕಳೆದ ಮೂರು ತಿಂಗಳಿನಲ್ಲಿ ‘ಕೋರ್ಸೆರಾ’ ಎಂಬ ಆನ್‌ಲೈನ್‌ ವೇದಿಕೆ ಮೂಲಕ 350 ಆನ್‌ಲೈನ್‌ ಕೋರ್ಸ್‌ ಪೂರ್ಣಗೊಳಿಸಿದ್ದಾರೆ.

ವಿಶ್ವಪ್ರಸಿದ್ಧ ವಿಶ್ವವಿದ್ಯಾಲಯಗಳಾದ ಜಾನ್‌ ಹಾಕಿನ್ಸ್‌ ಯುನಿವರ್ಸಿಟಿ, ಟೆಕ್ನಿಕಲ್‌ ಯುನಿವರ್ಸಿಟಿ ಆಫ್‌ ಡೆನ್ಮಾರ್ಕ್, ಯುನಿವರ್ಸಿಟಿ ಆಫ್‌ ವರ್ಜಿನಿಯಾ ಮುಂತಾದ ವಿವಿಗಳಿಂದ ಕೋರ್ಸ್‌ ಪಡೆದಿದ್ದಾರೆ.