ಕೇರಳ(ಜು.09): ಕೊರೋನಾ ವೈರಸ್ ಅಟ್ಟಹಾಸದಲ್ಲಿ ಮಾನವೀಯತೆ ಮುಖಗಳ ಪರಿಚಯ ಬಹುತೇಕರಿಗೆ ಆಗಿದೆ. ಹಲವರು ಸಂಕಷ್ಟದಲ್ಲಿದ್ದವರಿಗೆ ನೆರವಾಗಿದ್ದಾರೆ. ತಮ್ಮ ಕೈಲಾದ ಸಹಾಯ ನೀಡಿ ಮಾನವೀಯತೆ ಮೆರೆದಿದ್ದಾರೆ. ಇದೀಗ ಕೇರಳದಲ್ಲಿ ಮಹಿಳೆಯೊಬ್ಬರ ವಿಡಿಯೋ ವೈರಲ್ ಆಗಿದೆ.

ಗಾಯಗೊಂಡು ಖುದ್ದು ಆಸ್ಪತ್ರೆಗೆ ಬಂದ ಕೋತಿ, ಹಠ ಹಿಡಿದು ಚಿಕಿತ್ಸೆ ಪಡೆದೇ ಹೋಯ್ತು!.

ಅಂಧರೊಬ್ಬರು ಬಸ್ ಏರಲು ನಿಲ್ದಾಣಕ್ಕೆ ಆಗಮಿಸಿದ್ದಾರೆ. ಈ ವೇಳೆ ಬಸ್ ಹೊರಡಲು ಆರಂಭಿಸಿದೆ. ಈ ವೇಳೆ ಮಹಿಳೆಯೊಬ್ಬರು ಓಡೋಡಿ ಬಂದು ಬಸ್ ನಿಲ್ಲಿಸಿದ್ದಾರೆ. ಬಳಿಕ ಅದೇ ವೇಗದಲ್ಲಿ ಮತ್ತೆ ಅಂಧರ ಬಳಿ ತೆರಳಿ ಅವರನ್ನು ಕೈಹಿಡಿದು ಕರೆದುಕೊಂಡು ಬಂದಿದ್ದಾರೆ. ಬಳಿಕ ಬಸ್ ಹತ್ತಿಸಿ ಕಳುಹಿಸಿಕೊಟ್ಟಿದ್ದಾರೆ. ಮಹಿಳೆಯ ತೋರಿದ ಮಾನವೀಯತೆ ವಿಡಿಯೋ ವೈರಲ್ ಆಗಿದೆ.

ಕ್ವಾರಂಟೈನ್‌ನಲ್ಲಿ ಸಿಕ್ಕ ವಿಶೇಷ ಚೇತನ ಸ್ನೇಹಿತನ ಟ್ರೈಸಿಕಲ್‌ 350 ಕಿ.ಮೀ. ತಳ್ಳಿದ ಯುವಕ!.

ಮಾನವೀಯತೆ ತೋರಿದ ಮಹಿಳೆ ತಿರುವಲ್ಲದಲ್ಲಿ ಸೇಲ್ಸ್ ವುವೆನ್ ಆಗಿ ಕಾರ್ಯನಿರ್ವಹಿಸುತ್ತಿರುವ ಸುಪ್ರಿಯಾ ಎಂದು ಗುರುತಿಸಲಾಗಿದೆ. ಕೇರಳ ಐಪಿಎಲ್ ಅಧಿಕಾರಿ ವಿಜಯ್ ಕುಮಾರ್ ಮಹಿಳೆ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಸ್ ನಿಲ್ದಾಣದ ಪಕ್ಕದ ಕಟ್ಟದಿಂದ ಮಹಿಳೆ ಓಡೋಡಿ ಬರುತ್ತಿರುವುದನ್ನು ಗಮನಿಸಿದ ವ್ಯಕ್ತಿ ವಿಡಿಯೋ ಸೆರೆ ಹಿಡಿದ್ದಾರೆ. ಮಹಿಳೆಯ ಕಾರ್ಯಕ್ಕೆ ಎಲ್ಲೆಡೆಗಳಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.