Asianet Suvarna News Asianet Suvarna News

ಕೇರಳ : ತೇಲುವ ಸೇತುವೆ ಮುರಿದು ಸಮುದ್ರಕ್ಕೆ ಬಿದ್ದ ಪ್ರವಾಸಿಗರು: ಇಬ್ಬರ ಸ್ಥಿತಿ ಗಂಭೀರ

ಕೇರಳದ ವರ್ಕಲಾದಲ್ಲಿ ಸಮುದ್ರದಲ್ಲಿ ನಿರ್ಮಿಸಲಾಗಿದ್ದ ತೇಲುವ ಸೇತುವೆ  ಮುರಿದ ಪರಿಣಾಮ ಸೇತುವೆ ಮೇಲೆ ಇದ್ದ ಎಲ್ಲರೂ ಸಮುದ್ರಕ್ಕೆ ಬಿದ್ದ ಘಟನೆ ನಡೆದಿದೆ. 

Kerala Tourists fall into sea after floating bridge collapse in Varkala condition of two is critical akb
Author
First Published Mar 10, 2024, 1:22 PM IST

ವರ್ಕಲಾ: ಕೇರಳದ ವರ್ಕಲಾದಲ್ಲಿ ಸಮುದ್ರದಲ್ಲಿ ನಿರ್ಮಿಸಲಾಗಿದ್ದ ತೇಲುವ ಸೇತುವೆ  ಮುರಿದ ಪರಿಣಾಮ ಸೇತುವೆ ಮೇಲೆ ಇದ್ದ ಎಲ್ಲರೂ ಸಮುದ್ರಕ್ಕೆ ಬಿದ್ದ ಘಟನೆ ನಡೆದಿದೆ. ಬೀಚ್‌ಗಳಿಗೆ ಬರುವ ಪ್ರವಾಸಿಗರಿಗೆ ಸಮುದ್ರವನ್ನು ಹತ್ತಿರದಿಂದ ನೋಡಲು ಅವಕಾಶ ನೀಡುವ ಉದ್ದೇಶದಿಂದ ಈ ತೇಲುವ ಸೇತುವೆಯನ್ನು ನಿರ್ಮಿಸಲಾಗಿತ್ತು. ಪ್ಲಾಸ್ಟಿಕ್ ಬ್ಲಾಕ್‌ಗಳಿಂದ ನಿರ್ಮಿಸಿದ ಈ ತೇಲುವ ಸೇತುವೆಯಲ್ಲಿ ಜನ ಸಮುದ್ರದ ಮಧ್ಯಕ್ಕೆ ಹೋಗಿ ಸಮುದ್ರದ ಮನೋಹರವಾದ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದಿತ್ತು.

ಈ ಸೇತುವೆ ಮೇಲೆ ನಿನ್ನೆ 15 ಜನರು ಹೋಗುತ್ತಿದ್ದಾಗ ಸೇತುವೆ ಕಳಚಿಕೊಂಡಿದ್ದು ಎಲ್ಲರೂ ನೀರಿಗೆ ಬಿದ್ದಿದ್ದಾರೆ. ಅದೃಷ್ಟವಶಾತ್ ಎಲ್ಲರೂ ಲೈಫ್ ಜಾಕೆಟ್ ಧರಿಸಿದ್ದರಿಂದ ಪ್ರಾಣ ಹಾನಿ ಸಂಭವಿಸಿಲ್ಲ, ಆದರೆ ಕೆಲವರು ಗಾಯಗೊಂಡಿದ್ದು, ಅದರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಬಲವಾದ ಅಲೆಗಳು ಅಪ್ಪಳಿಸಿದ್ದರಿಂದ ಈ ಘಟನೆ ನಡೆದಿದ್ದು, ಅಲೆಗಳಿಂದಾಗಿ ಸಮುದ್ರಕ್ಕೆ ಬಿದ್ದವರಿಗೆ ಈಜಿ ದಡ ಸೇರಲು ಸಾಧ್ಯವಾಗಿರಲಿಲ್ಲ,  ಕೂಡಲೇ ಪ್ರವಾಸಿಗರ ನೆರವಿಗೆ ಜೀವರಕ್ಷಕರು ಹಾಗೂ ಕರಾವಳಿ ಕಾವಲು ಪಡೆ ಸಿಬ್ಬಂದಿ ಆಗಮಿಸಿ ಸಮುದ್ರಕ್ಕೆ ಬಿದ್ದವರ ರಕ್ಷಣೆ ಮಾಡಿದ್ದಾರೆ.  ಅಲ್ಲದೇ ಕೂಡಲೇ ಎಲ್ಲರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. 

ನಿನ್ನೆ ಸಂಜೆ ಈ ಘಟನೆ ನಡೆದಿದೆ. 100 ಮೀಟತ್ ಉದ್ದ ಮೂರು ಮೀಟರ್ ಅಗಲದಲ್ಲಿ ಈ ತೇಲುವ ಪ್ಲಾಸ್ಟಿಕ್ ಸೇತುವೆಯನ್ನು ನಿರ್ಮಿಸಲಾಗಿತ್ತು. ಇದು ಸಮುದ್ರ  ತೀರದಿಂದ ಸಮುದ್ರದ ಮೇಲೆ ನಡೆದಾಡುವುದಕ್ಕೆ ಅವಕಾಶ ನೀಡುತ್ತಿತ್ತು.  700 ಕೇಜಿ ತೂಕದ  ಆಂಕರ್‌ನ  ಬಲದ ಮೇಲೆ  1400 ಪ್ಲಾಸ್ಟಿಕ್ ಬ್ಲಾಕ್ ಬಳಸಿ ಈ ಸೇತುವೆ ತಯಾರಿಸಲಾಗಿತ್ತು. ಜಿಲ್ಲಾ ಪ್ರವಾಸೋದ್ಯಮ ಪ್ರಮೋಷನ್ ಕೌನ್ಸಿಲ್, ಕೇರಳ ಅಡ್ವೆಂಚರ್ ಟೂರಿಸಂ ಪ್ರಮೋಷನ್ ಸೊಸೈಟಿ ಮತ್ತು ವರಕಲಾ ಪುರಸಭೆಯ ಸಹಯೋಗದಲ್ಲಿ ಈ ಸೇತುವೆಯನ್ನು ಸ್ಥಾಪಿಸಲಾಗಿತ್ತು.
 

Follow Us:
Download App:
  • android
  • ios