ವಿಮಾನ ದರ ವಿಪರೀತ ಏರಿಕೆಯಾಗುತ್ತಿರುವ ಹಿನ್ನೆಲೆ ಕೇರಳ ಸರ್ಕಾರವು ಕೊಲ್ಲಿ ರಾಷ್ಟ್ರಗಳಲ್ಲಿ ನೆಲೆಸಿರುವ ತನ್ನ ಜನರಿಗೆ ಸಹಾಯವಾಗಲು ನೇರ ಹಡಗು ಸಂಪರ್ಕ ಕಲ್ಪಿಸಲು ನಿರ್ಧರಿಸಿದೆ.

ತಿರುವನಂತಪುರ: ವಿಮಾನ ದರ ವಿಪರೀತ ಏರಿಕೆಯಾಗುತ್ತಿರುವ ಹಿನ್ನೆಲೆ ಕೇರಳ ಸರ್ಕಾರವು ಕೊಲ್ಲಿ ರಾಷ್ಟ್ರಗಳಲ್ಲಿ ನೆಲೆಸಿರುವ ತನ್ನ ಜನರಿಗೆ ಸಹಾಯವಾಗಲು ನೇರ ಹಡಗು ಸಂಪರ್ಕ ಕಲ್ಪಿಸಲು ನಿರ್ಧರಿಸಿದೆ.

ಈ ಕುರಿತು ಬುಧವಾರ ಮಲಬಾರ್‌ ಅಭಿವೃದ್ಧಿ ಮಂಡಳಿ(Malabar Development Board), ಕೇರಳ ಕಡಲು ಮಂಡಳಿ (Kerala Maritime Board)ಹಾಗೂ ಇನ್ನಿತರೆ ಉನ್ನತ ದರ್ಜೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ರಾಜ್ಯದ ಬಂದರು ಸಚಿವ ಅಹಮದ್‌ ದೇವರ್‌ಕೋವಿಲ್‌ (State Ports Minister Ahmed Devarkovil), ಕೊಲ್ಲಿ ದೇಶಗಳಿಗೆ ವಿಮಾನ ದರವು ವಿಪರೀತ ಏರಿಕೆಯಾಗುತ್ತಿದ್ದು, ಸಾಮಾನ್ಯ ಜನರು ತಮ್ಮ ಬಹುಪಾಲು ಉಳಿತಾಯವನ್ನು ವಿಮಾನ ಪ್ರಯಾಣಕ್ಕೆಂದೇ ಎತ್ತಿಡಬೇಕಾಗಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಕೇರಳದಿಂದ ಕೊಲ್ಲಿ ರಾಷ್ಟ್ರಗಳಿಗೆ ನೇರ ಹಡಗು ಸೇವೆ ಅರಂಭ ಮಾಡುವ ಚಿಂತನೆ ನಡೆಸಲಾಗುತ್ತಿದೆ ಎಂದಿದ್ದಾರೆ.

ಹಡಗು ಸಚಿವಾಲಯಕ್ಕೆ ಹೊಸ ಹೆಸರು!

ಹಡಗು ಸೇವೆ ಆರಂಭದಿಂದ ಕೊಲ್ಲಿಯಲ್ಲಿ ನೆಲೆಸಿರುವ ಕೇರಳಿಗರಿಗೆ (Keralites) ಸಹಾಯವಾಗುತ್ತದೆ. ಇದಕ್ಕಾಗಿಯೇ ವಾರ್ಷಿಕ ಆಯವ್ಯಯದಲ್ಲಿ 15 ಕೋಟಿ ಹಣವನ್ನು ತೆಗೆದಿಡಲಾಗಿದೆ. ಈ ಹಣದಿಂದ ಹಡಗು ಸಂಪರ್ಕ ಕಲ್ಪಿಸುವ ವ್ಯವಸ್ಥೆ ಉದ್ದೇಶ ಇದೆ ಎಂದು ಅವರು ತಿಳಿಸಿದರು. ಈ ಯೋಜನೆ ಪೂರ್ಣಗೊಂಡರೆ ಕೇರಳವು ಕೊಲ್ಲಿ ರಾಷ್ಟ್ರಕ್ಕೆ (Gulf nation) ನೇರ ಪ್ರಯಾಣಿಕರ ಹಡಗು ಸಂಪರ್ಕ ಕಲ್ಪಿಸಿದ ಮೊದಲ ರಾಜ್ಯವಾಗಲಿದೆ. ಇದರಿಂದಾಗಿ ವಾರ್ಷಿಕವಾಗಿ ಸುಮಾರು 20 ಲಕ್ಷ ಪ್ರಯಾಣಿಕರಿಗೆ ಸಹಾಯವಾಗಲಿದೆ.

ಭಾರತ-ಕೊಲ್ಲಿ ರಾಷ್ಟ್ರಗಳ ನಡುವೆ ಕೊಳ್ಳಿ ಇಟ್ಟವರು ಯಾರು..?

ಈ ಹಿಂದೆ ಹಜ್ ಯಾತ್ರಿಕರಿಗೆ ಹಡಗು ಸೇವೆಯನ್ನು ಪುನಾರಂಭಿಸುವ ಕುರಿತು ಕೇಂದ್ರ ಅಲ್ಪ ಸಂಖ್ಯಾತ ಸಚಿವಾಲಯದ ಬೇಡಿಕೆಗೆ ಸೌದಿ ಅರೇಬಿಯಾ ಒಪ್ಪಿಗೆ ಸೂಚಿಸಿತ್ತು. ಇದರಿಂದಾಗಿ ಪ್ರಯಾಣ ವೆಚ್ಚ ಭಾರೀ ಪ್ರಮಾಣದಲ್ಲಿ ಇಳಿಕೆಯಾಗುವ ನಿರೀಕ್ಷೆ ಇತ್ತು. ಆದರೆ ಈ ಯೋಜನೆ ಪ್ರಾರಂಭವಾಗಲೇ ಇಲ್ಲ.