Asianet Suvarna News Asianet Suvarna News

3ನೇ ಅಲೆ ಭೀತಿ, ಕೇರಳದಲ್ಲಿ 22 ಸಾವಿರ ಕೋವಿಡ್‌ ಕೇಸು!

* ಕೇರಳ ರಾಜ್ಯದಲ್ಲಿ ಮೂರನೇ ಅಲೆ ಆತಂಕ

* ಕೇರಳದಲ್ಲಿ 22 ಸಾವಿರ ಕೋವಿಡ್‌ ಕೇಸು: 156 ಬಲಿ

* ಪಾಸಿಟಿವಿಟಿ ರೇಟ್‌ ಶೇ.12ಕ್ಕಿಂತಲೂ ಹೆಚ್ಚು

Kerala reports over 22000 fresh Covid cases highest daily spike since May 29 pod
Author
Bangalore, First Published Jul 28, 2021, 8:41 AM IST
  • Facebook
  • Twitter
  • Whatsapp

ತಿರುವನಂತಪುರಂ(ಜು.28): 3ನೇ ಅಲೆಗೆ ಮುನ್ನುಡಿ ಬರೆಯುತ್ತಿದೆ ಎಂದು ಹೇಳಲಾಗಿರುವ ಕೇರಳ ರಾಜ್ಯದಲ್ಲಿ ಮಂಗಳವಾರ 22,129 ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗಿವೆ ಹಾಗೂ 156 ಜನರು ಕೋವಿಡ್‌ಗೆ ಬಲಿಯಾಗಿದ್ದಾರೆ.

ಪಾಸಿಟಿವಿಟಿ ರೇಟ್‌ ಶೇ.12ಕ್ಕಿಂತಲೂ ಹೆಚ್ಚಾಗಿದೆ. 13,145 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.

5 ಜಿಲ್ಲೆಗಳಲ್ಲಿ ಹೊಸದಾಗಿ 2000ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಮಲ್ಲಾಪುರಂ(4037), ತ್ರಿಶೂರ್‌(2623), ಕೋಳಿಕೋಡ್‌(2397), ಎರ್ನಾಕುಲಂ(2352) ಹಾಗೂ ಕೊಲ್ಲಂ(1914) ಜಿಲ್ಲೆಗಳಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕಳೆದ 24 ಗಂಟೆಗಳಲ್ಲಿ 1,79,130 ಪರೀಕ್ಷೆಗಳನ್ನು ನಡೆಸಲಾಗಿದ್ದು, ಶೇ.12.35ರಷ್ಟುಪ್ರಕರಣಗಳು ಪಾಸಿಟಿವ್‌ ಆಗಿವೆ. ರಾಜ್ಯದ 626 ಪ್ರದೇಶಗಳಲ್ಲಿ ಪಾಸಿಟಿವಿಟಿ ರೇಟ್‌ ಶೇ.10ಕ್ಕಿಂತಲೂ ಅಧಿಕವಾಗಿದೆ.

ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 33,05,245ಕ್ಕೆ ಏರಿದೆ. ಒಟ್ಟು ಗುಣಮುಖರಾದವರ ಸಂಖ್ಯೆ 31,43,043ಕ್ಕೆ ಏರಿಕೆಯಾಗಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.

Follow Us:
Download App:
  • android
  • ios