Asianet Suvarna News Asianet Suvarna News

ಕೇರಳ ಮಳೆ ಭೀಕರತೆ: ತಬ್ಬಿದ ಸ್ಥಿತಿಯಲ್ಲಿ ತಾಯಿ, ಮಗು ಶವಪತ್ತೆ!

* ಈ ದೃಶ್ಯ ನೋಡಿ ಕಣ್ಣೀರು ಹಾಕಿದ ರಕ್ಷಣಾ ತಂಡ​ಗ​ಳು, ತೊಟ್ಟಿಲಲ್ಲೇ ಸಾವನ್ನಪ್ಪಿತ್ತು ಮಗು

* ಕೇರಳದ ಭಾರೀ ಮಳೆ ಪ್ರವಾಹ, ಭೂಕುಸಿತ ಅವಶೇಷ ತೆರವು ವೇಳೆ ಮನಕಲಕುವ ದೃಶ್ಯಗೋಚರ

* ಕೇರಳ ಮಳೆ ಭೀಕರತೆ: ತಬ್ಬಿದ ಸ್ಥಿತಿಯಲ್ಲಿ ತಾಯಿ, ಮಗು ಶವಪತ್ತೆ!

Kerala Rains Bodies Of Mother Son Hugging Each Other Infant In Cradle Found Under Debris pod
Author
Bangalore, First Published Oct 19, 2021, 7:48 AM IST

ಇಡುಕ್ಕಿ(ಅ.19): ಕೇರಳದಲ್ಲಿ(Kerala) ಸುರಿದ ಭಾರೀ ಮಳೆ(Rain), ಪ್ರವಾಹ(Flood), ಭೂಕುಸಿತದಿಂದ(Landslide) ಭಾರೀ ಸಾವು ನೋವು ಉಂಟಾಗಿದೆ. ಕೇರಳ ರಣಮಳೆ ಹಲವು ಅವಾಂತರಗಳನ್ನು ಸೃಷ್ಟಿಸಿದೆ. ರಾಜ್ಯ ಮತ್ತು ಕೇಂದ್ರ ರಕ್ಷಣಾ ತಂಡಗಳು(Rescue Teams) ನಡೆಸುತ್ತಿರುವ ರಕ್ಷಣಾ ಕಾರ್ಯಾಚರಣೆ ವೇಳೆ ಮಳೆ ಸೃಷ್ಟಿಸಿರುವ ಭೀಕರತೆ ಗೋಚರವಾಗುತ್ತಿದೆ. ಅವಶೇಷ ತೆರವು ವೇಳೆ ಪತ್ತೆಯಾಗಿರುವ ಶವಗಳು ಮನಕಲಕುವ ಕತೆಗಳನ್ನು ಹೇಳುತ್ತಿವೆ.

ಭಾನುವಾರ ಮೂರು ಮಕ್ಕಳು ಪರಸ್ಪರ ಕೈ ಹಿಡಿದ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿತ್ತು. ಸೋಮವಾರ ತಾಯಿ(Mother) ಹಾಗೂ ಮಗು​ವಿನ ಶವವು ತಪ್ಪಿ​ಕೊಂಡ ಸ್ಥಿತಿ​ಯಲ್ಲೇ ಪತ್ತೆ​ಯಾ​ಗಿದೆ. ಈ ದೃಶ್ಯವನ್ನು ಕಂಡು ಖುದ್ದು ರಕ್ಷಣಾ ತಂಡ​ಗಳೇ ಕಣ್ಣೀರು ಹಾಕಿ​ವೆ.

ಸಂಬಂಧಿಕರ ಮದುವೆಗೆ ಬಂದಿದ್ದ ತಾಯಿ ಹಾಗೂ ಮಳೆಗೆ ಕುಸಿದ ಮನೆಯ ಅವಶೇಷಗಳ ಅಡಿ ಸಿಲುಕಿ ಸಾವನ್ನಪ್ಪಿರುವ ಈ ದಾರುಣ ಘಟನೆ ಕೇರಳದ ಇಡುಕ್ಕಿ(Idukki) ಜಿಲ್ಲೆಯಲ್ಲಿ ನಡೆದಿದೆ. ಅವಶೇಷಗಳನ್ನು ತೆಗೆ​ಯು​ವ ಸಮಯದಲ್ಲಿ ತಾಯಿ-ಮಗ ಇಬ್ಬರೂ ತಬ್ಬಿಕೊಂಡು ಮಲಗಿರುವ ಸ್ಥಿತಿ​ಯ​ಲ್ಲಿ​ದ್ದರು. ಇದೇ ವೇಳೆ, ಮತ್ತೊಂದು ಮಗು ತೊಟ್ಟಿಲಿನಲ್ಲೇ ಸಾವನ್ನಪ್ಪಿರುವ ದಾರುಣ ದೃಶ್ಯ ಕಂಡು​ಬಂತು.

ಮೃತ ತಾಯಿ ಮಗನನ್ನು ಫೌಝಿಯಾ (28) ಮತ್ತು ಅಮೀನ್‌(10) ಎಂದು ಗುರುತಿಸಲಾಗಿದೆ. ಕಟ್ಟಡ ಕುಸಿಯುವ ಮೊದಲು ಮನೆಯ ಒಳಗೆ ನೀರು ನುಗ್ಗುತ್ತಿರುವ ದೃಶ್ಯವನ್ನು ವಿಡಿಯೋ ಮಾಡಿ ಸಂಬಂಧಿಕರೊಬ್ಬರಿಗೆ ಇವರು ಕಳಿ​ಸಿ​ದ್ದ​ರು. ಆದರೆ ಕೆಲವು ಹೊತ್ತಿ​ನಲ್ಲೇ ಜಲ​ಪ್ರ​ಳ​ಯವು ಇವ​ರನ್ನು ಆಪೋ​ಶನ ತೆಗೆ​ದು​ಕೊಂಡಿ​ದೆ.

Follow Us:
Download App:
  • android
  • ios