ಬ್ರಿಟನ್‌ನಿಂದ ಬಂದ 8 ಮಂದಿಯಲ್ಲಿ ಕೊರೋನಾ: ಕೇರಳದಲ್ಲಿ ಹೈ ಅಲರ್ಟ್

ಬ್ರಿಟನ್‌ನಿಂದ ಕೇರಳಕ್ಕೆ ಬಂದ 8 ಮಂದಿಯಲ್ಲಿ ಕೊರೋನಾ: ಆತಂಕ | ರೂಪಾಂತರಗೊಂಡ ಕೊರೋನಾ ಬಗ್ಗೆ ಜನರಲ್ಲಿ ಭೀತಿ

Kerala on High Alert as 8 from UK Found Covid positive dpl

ತಿರುವನಂತಪುರ(ಡಿ.27): ಇತ್ತೀಚೆಗಷ್ಟೇ ಬ್ರಿಟನ್‌ನಿಂದ ಕೇರಳಕ್ಕೆ ಆಗಮಿಸಿದ್ದ 8 ಮಂದಿಯಲ್ಲಿ ಕೊರೋನಾ ವೈರಸ್‌ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಬ್ರಿಟನ್‌ನಲ್ಲಿ ಭಾರೀ ಆತಂಕ ಸೃಷಿಸಿರುವ ರೂಪಾಂತರದ ಕೊರೋನಾ ಪ್ರಭೇದ ಕೇರಳಕ್ಕೂ ವ್ಯಾಪಿಸಿದೆಯೇ ಎಂಬ ಭೀತಿ ವ್ಯಕ್ತವಾಗಿದೆ.

ಈ 8 ಮಂದಿಯಲ್ಲಿ ಪತ್ತೆಯಾಗಿರುವ ವೈರಸ್‌ ಕೊರೋನಾ ರೂಪಾಂತರದ್ದೇ ಎಂಬ ಗುಮಾನಿ ಹುಟ್ಟಿಕೊಂಡಿದೆ. ಅದರ ನಿಖರತೆಗಾಗಿ ಅವರ ಪರೀಕ್ಷಾ ಮಾದರಿಯನ್ನು ರಾಷ್ಟ್ರೀಯ ಸೂಕ್ಷ್ಮರೋಗಾಣು ಅಧ್ಯಯನ ಸಂಸ್ಥೆ(ಎನ್‌ಐವಿ)ಗೆ ರವಾನಿಸಲಾಗಿದೆ.

ರೂಪಾಂತರಗೊಂಡ ವೈರಸ್‌ ಭಾರತದಲ್ಲಿ ಮಾರ್ಚ್‌ನಲ್ಲೇ ಇತ್ತು: ಜೀನೋಮಿಕ್ಸ್

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಕೇರಳ ಆರೋಗ್ಯ ಸಚಿವೆ ಕೆ.ಕೆ ಶೈಲಜಾ, ‘ಬ್ರಿಟನ್‌ನಿಂದ ಬಂದವರ 8 ಮಂದಿಯಲ್ಲಿ ವೈರಸ್‌ ಪತ್ತೆಯಾಗಿದೆ. ಅವರ ಪರೀಕ್ಷಾ ವರದಿಯ ಹೆಚ್ಚಿನ ತಪಾಸಣೆಗಾಗಿ ಎನ್‌ಐವಿಗೆ ರವಾನಿಸಲಾಗಿದೆ’ ಎಂದಿದ್ದಾರೆ.

ರವಾನಿಸಿಕೊಡಲಾಗಿದೆ. ಜೊತೆಗೆ, ವಿದೇಶದಿಂದ ಬರುವವರ ಮೇಲಿನ ಹೆಚ್ಚಿನ ನಿಗಾಕ್ಕಾಗಿ ರಾಜ್ಯದಲ್ಲಿರುವ 4 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ’ ಎಂದರು. ಸ್ಥಳೀಯ ಸಂಸ್ಥೆಗಳ ಚುನಾವಣೆಯಿಂದಾಗಿ ಹೆಚ್ಚು ಮಂದಿಗೆ ಸೋಂಕು ವ್ಯಾಪಿಸಲಿದೆ ಎಂಬ ಭೀತಿಯಿಂದ ಸದ್ಯ ಪಾರಾಗಿದ್ದೇವೆ ಎಂದರು.

Latest Videos
Follow Us:
Download App:
  • android
  • ios