ಯಾರಾದರೇನು? ದಾರಿ ನಮ್ಮದೆ, ಮಹಿಳೆ ರೈಟ್ ಟರ್ನ್‌ನಿಂದ ಸಿಎಂ ಕಾರಿಗೆ ಬೆಂಗಾವಲು ವಾಹನ ಡಿಕ್ಕಿ!
ಮಹಿಳೆಯೊಬ್ಬರು ಸ್ಕೂಟರ್ ಮೂಲಕ ತೆರಳಿದ್ದಾರೆ. ಬಳಿಕ ಬಲ ತಿರುವು ಪಡೆದಿದ್ದಾರೆ. ಇಷ್ಟೇ ನೋಡಿ, ಹಿಂದಿನಿಂದ ವೇಗವಾಗಿ ಬಂದ ಮುಖ್ಯಮಂತ್ರಿ ವಾಹನ ಹಾಗೂ ಬೆಂಗಾವಲು ವಾಹನಗಳ ನಡುವೆ ಸರಣಿ ಅಪಘಾತವಾಗಿದೆ. ಈ ವಿಡಿಯೋ ಚರ್ಚೆಗೆ ಗ್ರಾಸವಾಗಿದೆ.
ತಿರುವನಂತಪುರಂ(ನ.20) ಮುಖ್ಯಮಂತ್ರಿ, ಸಚಿವರು ಹಾಗೂ ಬೆಂಗಾವಲು ವಾಹನ ಯಾವತ್ತೂ ವೇಗವಾಗಿ ಸಾಗುತ್ತದೆ. ಕಾರಣ ಟ್ರಾಫಿಕ್ ಪೊಲೀಸರು ಮೊದಲೇ ಝೀರೋ ಟ್ರಾಫಿಕ್ ಮಾಡಿರುತ್ತಾರೆ. ಇದು ಪ್ರೊಟೋಕಾಲ್. ಆದರೆ ಕೆಲವೊಮ್ಮೆ ಝೀರೋ ಟ್ರಾಫಿಕ್ ಮಾಡದಿದ್ದರೂ ವಾಹನಗಳು ಅದೇ ವೇಗದಲ್ಲಿ ಸಾಗುತ್ತದೆ. ಹೀಗೆ ಮುಖ್ಯಮಂತ್ರಿ ಕಾರು ವೇಗವಾಗಿ ಸಾಗಿದ ಪರಿಣಾಮ ಸರಣಿ ಅಪಘಾತವಾಗಿದೆ. ಸ್ಕೂಟರ್ ಮೂಲಕ ತೆರಳುತ್ತಿದ್ದ ಮಹಿಳೆ ದಿಢೀರ್ ಬಲಕ್ಕೆ ತಿರುವು ಪಡೆದಿದ್ದಾರೆ. ಇದರ ಪರಿಣಾಮ ವೇಗವಾಗಿ ಬಂದ ಪೊಲೀಸ್ ವಾಹನ ಹಾಗೂ ಮುಖ್ಯಮಂತ್ರಿ ವಾಹನ್ ಬ್ರೇಕ್ ಹಾಕಿದೆ. ಆದರೆ ಸಾಲಾಗಿ ಬಂದ ಬೆಂಗಾವಲು ವಾಹನ ಆ್ಯಂಬಲೆನ್ಸ್ ಒಂದರ ಹಿಂದೆ ಒಂದರಂತೆ ಸರಣಿ ಅಪಘಾತ ಸೃಷ್ಟಿಸಿದ ಘಟನೆ ಕೇರಳದಲ್ಲಿ ನಡೆದಿದೆ.
ಕೇರಳದ ವಾಮನಪುರದಲ್ಲಿ ಈ ಘಟನೆ ನಡೆದಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಾರ್ಯಕ್ರಮ ನಿಮಿತ್ತ ತೆರಳುವಾಗ ಈ ಘಟನೆ ನಡೆದಿದೆ. ಸಂಜೆ ವೇಳೆ ತಿರುನಂತಪುರಂ ನಗರದ ವಾಮನಪುರದ ರಸ್ತೆ ಮೂಲಕ ಮುಖ್ಯಮಂತ್ರಿ ಕಾರು ಬೆಂಗಾವಲು ವಾಹನ ವೇಗವಾಗಿ ಸಾಗಿದೆ. ಸೈರನ್ ಹೊಡೆಯುತ್ತಾ ವಾಹನಗಳು ಸಾಲಾಗಿ ಸಂಚರಿಸಿದೆ. ಇದ್ಯಾವುದರ ಪರಿವೇ ಇಲ್ಲದ ಮಹಿಳೆಯೊಬ್ಬರು ಸ್ಕೂಟರ್ ಮೂಲಕ ಸಾಗಿದ್ದಾರೆ. ಆದರೆ ಮಹಿಳೆ ದಿಢೀರ್ ರೈಟ್ ಟರ್ನ್ ತೆಗೆದಿದ್ದಾರೆ.
ಬೆಂಗಾವಲು ಕಾರಿನಿಂದ ಹಾರಿದ ಗರಿ ಗರಿ ನೋಟು, ಹೆದ್ದಾರಿ ಸಂಪೂರ್ಣ ಟ್ರಾಫಿಕ್ ಜಾಮ್!
ಮಹಿಳೆಯ ಪ್ರಾಣ ಉಳಿಸಲು ಮುಂಭಾಗದಲ್ಲಿದ್ದ ಎರಡು ಬೊಲೆರೋ ಜೀಪು ಹಾಗೂ ಅದರ ಹಿಂಭಾಗದಲ್ಲಿದ್ದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಾರು ದಿಢೀರ್ ಬ್ರೇಕ್ ಹಾಕುವ ಅನಿವಾರ್ಯತೆ ಎದುರಾಗಿದೆ. ಪೊಲೀಸರ ಜೀಪು ಬ್ರೇಕ್ ಹಾಕಿದ ಬೆನ್ನಲ್ಲೇ ಪಿಣರಾಯಿ ವಿಜಯನ್ ಕಾರು ಚಾಲಕ ಕೂಡ ಬ್ರೇಕ್ ಹಾಕಿದ್ದಾನೆ. ಆದರೆ ಈ ಕಾರಗಳ ಹಿಂದಿದ್ದ ಬೆಂಗಾವಲು ವಾಹನ, ಪೊಲೀಸ್ ವಾಹನ, ಆ್ಯಂಬುಲೆನ್ಸ್ ವಾಹನ ಒಂದರ ಹಿಂದೆ ಒಂದರಂತೆ ಮುಖ್ಯಮಂತ್ರಿ ಕಾರಿಗೆ ಡಿಕ್ಕಿಯಾಗಿದೆ.
ತಕ್ಷಣವೇ ಮುಖ್ಯಮಂತ್ರಿ ಭದ್ರತಾ ಪಡೆ ಕಾರಿನಿಂದ ಇಳಿದಿದ್ದಾರೆ, ಆರೋಗ್ಯ ಸಿಬ್ಬಂದಿಗಳು ಮುಖ್ಯಮಂತ್ರಿ ಕಾರಿನತ್ತ ಧಾವಿಸಿದ್ದಾರೆ. ಮುಖ್ಯಮಂತ್ರಿಗೆ ಗಾಯವಾಗಿದೆಯಾ ಅನ್ನೋದು ಪರಿಶೀಲಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ತಕ್ಷಣವೆ ಟ್ರಾಫಿಕ್ ಕ್ಲಿಯರರ್ ಮಾಡಿ ಮುಖ್ಯಮಂತ್ರಿ ಕಾರು ಬೆಂಗಾವಲು ವಾಹನ ಸಾಗಿದೆ.
ಕೆಲವೇ ಕ್ಷಣಗಳಲ್ಲಿ ಈ ಘಟನೆ ನಡೆದುಹೋಗಿದೆ. ಆದರೆ ಮಹಿಳೆ ತಾನು ರೈಟ್ ಟರ್ನ್ ಪಡೆದ ಕಾರಣ ಹಿಂದೆ ದೊಡ್ಡ ಸರಣಿ ಅಪಘಾತ ನಡೆದಿದೆ ಅನ್ನೋದು ಗೊತ್ತೆ ಆಗಿಲ್ಲ. ಮಹಿಳೆ ತನ್ನ ಪಾಡಿಗೆ ರೈಟ್ ಟರ್ನ್ ತೆಗೆದು ಸಾಗಿದ್ದಾರೆ. ಹಾಗಂತ ಇಲ್ಲಿ ತಪ್ಪು ಮಹಿಳೆಯದಲ್ಲ. ಕಾರಣ ಮಹಿಳೆ ರೈಟ್ ಟರ್ನ್ ತೆಗೆಯುವಾಗ ಇಂಡಿಕೇಟರ್ ಬಳಸಿದ್ದಾರೆ. ದಿಢೀರ್ ರೈಟ್ ಟರ್ನ್ ಪಡೆದಿದ್ದಾರೆ ನಿಜ. ಹಾಗಂತ ಮೋಟಾರು ವಾಹನ ಕಾಯ್ದೆಯನ್ನು ಉಲ್ಲಂಘಿಸಿಲ್ಲ. ಇಲ್ಲಿ ನಗರ ಪ್ರದೇಶವಾಗಿದ್ದರೂ, ಟ್ರಾಫಿಕ್, ಜನಸಂದಣಿ ಹೆಚ್ಚಿದ್ದರೂ ಮುಖ್ಯಮಂತ್ರಿ ವಾಹನ ಹಾಗೂ ಬೆಂಗಾವಲು ವಾಹನ ಅತೀ ವೇಗವಾಗಿ ಸಾಗಿದ್ದೇ ಈ ಅಪಘಾತಕ್ಕೆ ಕಾರಣವಾಗಿದೆ.
ಮುಖ್ಯಮಂತ್ರಿ ವಾಹನ ಸಾಗಲು ಇಲ್ಲಿ ಝೀರೋ ಟ್ರಾಫಿಕ್ ಮಾಡಿಲ್ಲ. ಹೀಗಿರುವಾಗ ಪಟ್ಟಣ, ನಗರ ಪ್ರದೇಶದಲ್ಲಿ ಕೊಂಚ ನಿಧಾನವಾಗಿ ಸಾಗಿದ್ದರೆ ಈ ಸರಣಿ ಅಪಘಾತ ತಪ್ಪಿಸಲು ಸಾಧ್ಯವಿತ್ತು ಅನ್ನೋ ಅಭಿಪ್ರಾಯಗಳು ವ್ಯಕ್ತವಾಗಿದೆ. ಇತ್ತ ಮಹಿಳೆ ದಿಢೀರ್ ರೈಟ್ ಟರ್ನ್ ಪಡೆದಿದ್ದು ಆ ಅಪಘಾತಕ್ಕೆ ಕಾರಣ ಎಂದು ಹಲವರು ಹೇಳಿದ್ದಾರೆ. ಎಲ್ಲರು ಸುಲಭವಾಗಿ ಮಹಿಳೆ ತಪ್ಪು ಎಂದು ಹೇಳುತ್ತಾರೆ. ಆದರೆ ವಿಡಿಯೋ ಸರಿಯಾಗಿ ನೋಡಿ ನಗರ ಪ್ರದೇಶ, ವಾಹನದ ವೇಗ, ಟ್ರಾಫಿಕ್ ನಿಯಮ ಎಲ್ಲವನ್ನು ಓದಿಕೊಂಡು ಈ ವಿಡಿಯೋ ನೋಡಿ. ಎಲ್ಲ ಅಪಘಾತಗಳಿಗೆ ಮಹಿಳೆಯನ್ನು ಗುರಯಾಗಿಸಬೇಡಿ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಈ ಘಟನೆ ನಡೆದಿದ್ದು ಅಕ್ಟೋಬರ್ ಕೊನೆಯ ವಾರದಲ್ಲಿ.
ರೋಡ್ ಶೋ ನಡುವೆ ಆ್ಯಂಬುಲೆನ್ಸ್ ಸಾಗಲು ತಮ್ಮ ಕಾನ್ವಾಯ್ ನಿಲ್ಲಿಸಿದ ಪ್ರಧಾನಿ ಮೋದಿ!