ರೋಡ್ ಶೋ ನಡುವೆ ಆ್ಯಂಬುಲೆನ್ಸ್ ಸಾಗಲು ತಮ್ಮ ಕಾನ್ವಾಯ್ ನಿಲ್ಲಿಸಿದ ಪ್ರಧಾನಿ ಮೋದಿ!
ವಿವಿದ ಕಾರ್ಯಕ್ರಮ, ಯೋಜನೆಗಳ ಉದ್ಘಾಟನೆಗಾಗಿ ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಗೆ ತೆರಳಿರುವ ಮೋದಿ ರೋಡ್ ಶೋ ನಡೆಸಿದ್ದಾರೆ. ಈ ವೇಳೆ ಸಾಗಿ ಬಂದ ಆ್ಯಂಬುಲೆನ್ಸ್ ಸಾಗಲು ಪ್ರಧಾನಿ ಮೋದಿ ತಮ್ಮ ಬೆಂಗಾವಲು ವಾಹನವನ್ನು ನಿಲ್ಲಿಸಿದ ಘಟನೆ ನಡೆದಿದೆ.
ವಾರಣಾಸಿ(ಡಿ.17) ವಿವಿಧ ಕಾರ್ಯಕ್ರ, ಯೋಚನೆಗಳ ಶಂಕುಸ್ಥಾಪನೆಗಾಗಿ ಪ್ರಧಾನಿ ಮೋದಿ ತಮ್ಮ ಲೋಕಸಭಾ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಎರಡು ದಿನಗಳ ಭೇಟಿಯಲ್ಲಿ ಪ್ರಧಾನಿ ಮೋದಿ ಹಲವು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ವಾರಣಾಸಿಗೆ ಆಗಮಿಸಿದ ಪ್ರಧಾನಿ ಮೋದಿಗೆ ಜನ ಅದ್ಧೂರಿ ಸ್ವಾಗತ ನೀಡಿದ್ದಾರೆ. ವಾರಣಾಸಿಯಲ್ಲಿ ರೋಡ್ ಶೋ ನಡೆಸಿದ ಮೋದಿಗೆ ಜನ ಹೂಮಳೆ ಸ್ವಾಗತ ನೀಡಿದ್ದಾರೆ. ರೋಡ್ ಶೋ ವೇಳೆ ತುರ್ತು ಅಗತ್ಯದ ಆ್ಯಂಬುಲೆನ್ಸ್ ಸಾಗಿ ಬಂದಿದೆ.ತಕ್ಷಣವೇ ಬೆಂಗಾವಲು ವಾಹನಕ್ಕೆ ಸೂಚನೆ ನೀಡಿದ ಮೋದಿ, ಆ್ಯಂಬುಲೆನ್ಸ್ ತೆರಳಲು ಅನುವು ಮಾಡಿಕೊಟ್ಟಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಮೋದಿ ರೋಡ್ ಶೋ, ತಾವು ಸಾಗುತ್ತಿದ್ದ ದಾರಿಯಲ್ಲಿ ಆ್ಯಂಬುಲೆನ್ಸ್‌ಗೆ ದಾರಿ ಬಿಟ್ಟುಕೊಟ್ಟಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಗುಜರಾತ್‌ನಲ್ಲಿ ರೋಡ್ ಶೋ ನಡೆಸುತ್ತಿರುವ ಸಾಗಿ ಬಂದ ಆ್ಯಂಬುಲೆನ್ಸ್‌ಗೆ ಮೋದಿ ದಾರಿ ಮಾಡಿಕೊಟ್ಟಿದ್ದರು. ಇನ್ನು 2022ರಲ್ಲಿ ಹಿಮಾಚಲ ಪ್ರದೇಶ ನಡೆಸಿದ ರ್ಯಾಲಿ ವೇಳೆ ತುರ್ತು ಅಗತ್ಯದ ಆ್ಯಂಬುಲೆನ್ಸ್‌ಗೆ ಪ್ರದಾನಿ ಮೋದಿ ದಾರಿ ಮಾಡಿಕೊಟ್ಟಿದ್ದರು.
370ನೇ ವಿಧಿ ವಾಪಾಸ್ ತರುವ ಯಾವ ಶಕ್ತಿ ಕೂಡ ಜಗತ್ತಿನಲ್ಲಿಲ್ಲ, ಸಂಸತ್ತಿನಲ್ಲಾದ ಘಟನೆ ಕಳವಳಕಾರಿ: ಪ್ರಧಾನಿ ಮೋದಿ
ಎರಡು ದಿನ ಭೇಟಿಗಾಗಿ ಪ್ರಧಾನಿ ಮೋದಿ ವಾರಣಾಸಿಗೆ ಆಗಮಿಸಿದ್ದಾರೆ. ವಾರಣಾಸಿಯಲ್ಲಿ ಮೋದಿ ಬರೋಬ್ಬರಿ 19,000 ಕೋಟಿ ರೂಪಾಯಿ ಮೌಲ್ಯದ 37 ವಿವಿಧ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ʻಕಟಿಂಗ್ ಮೆಮೋರಿಯಲ್ ಶಾಲೆʼಯ ಮೈದಾನದಲ್ಲಿ ನಡೆಯಲಿರುವ ʻವಿಕಸಿತ ಭಾರತ ಸಂಕಲ್ಪ ಯಾತ್ರೆʼಯಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ. ಅಲ್ಲಿ ಪ್ರಧಾನಮಂತ್ರಿಯವರು ʻಪ್ರಧಾನಮಂತ್ರಿ ಆವಾಸ್ʼ, ʻಪಿಎಂ ಸ್ವನಿಧಿʼ, ʻಪಿಎಂ ಉಜ್ವಲʼ ಮುಂತಾದ ವಿವಿಧ ಸರ್ಕಾರಿ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ
ʻಏಕ ಭಾರತ-ಶ್ರೇಷ್ಠ ಭಾರತʼದ ಆಶಯಕ್ಕೆ ಅನುಗುಣವಾಗಿ ಪ್ರಧಾನಮಂತ್ರಿಯವರು ʻನಮೋ ಘಾಟ್ʼನಲ್ಲಿ ʻಕಾಶಿ ತಮಿಳು ಸಂಗಮಂ-2023ʼ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ʻಕನ್ಯಾಕುಮಾರಿ-ವಾರಣಾಸಿ ತಮಿಳು ಸಂಗಮಂʼ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ.
ದೇಶದ ಜನರಿಗೆ ಮೋದಿ ಮೇಲೆ ವಿಶ್ವಾಸ ಹೆಚ್ಚಿದೆ : ಮತ್ತೊಮ್ಮೆ ಪ್ರಧಾನಿ ಖಚಿತ: ಕೃಷ್ಣಪಾಲ್ ಗುರ್ಜರ್
ಡಿಸೆಂಬರ್ 18ರಂದು ಪ್ರಧಾನಮಂತ್ರಿಯವರು ವಾರಣಾಸಿಯ ಉಮರಾಹದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ʻಸ್ವರವೇದ ಮಹಾಮಂದಿರʼವನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಮಹಾಮಂದಿರದ ಭಕ್ತರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.
ನಂತರ, ಪ್ರಧಾನಮಂತ್ರಿಯವರು ತಮ್ಮ ಕ್ಷೇತ್ರದ ಗ್ರಾಮೀಣ ಪ್ರದೇಶವಾದ ಸೇವಾಪುರಿಯಲ್ಲಿ ನಡೆಯುವ ʻವಿಕಸಿತ ಭಾರತ ಸಂಕಲ್ಪ ಯಾತ್ರೆʼಯಲ್ಲಿ ಭಾಗವಹಿಸಲಿದ್ದಾರೆ. ʻಕಾಶಿ ಸಂಸದ್ ಖೇಲ್ ಪ್ರತಿಯೋಗಿತಾ-2023ʼ ಕಾರ್ಯಕ್ರಮದಲ್ಲಿ ಭಾಗವಹಿಸುವವರ ಕೆಲವು ಲೈವ್ ಕ್ರೀಡಾ ಕಾರ್ಯಕ್ರಮಗಳಿಗೂ ಅವರು ಸಾಕ್ಷಿಯಾಗಲಿದ್ದಾರೆ. ನಂತರ ಅವರು ಕಾರ್ಯಕ್ರಮದ ವಿಜೇತರೊಂದಿಗೆ ಸಂವಾದ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ಕಳೆದ ಒಂಬತ್ತು ವರ್ಷಗಳಲ್ಲಿ, ವಾರಣಾಸಿಯ ಭೂದೃಶ್ಯವನ್ನು ಪರಿವರ್ತಿಸಲು ಮತ್ತು ವಾರಣಾಸಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುವ ಜನರ ಜೀವನವನ್ನು ಸುಗಮಗೊಳಿಸಲು ಪ್ರಧಾನಿ ವಿಶೇಷ ಗಮನ ಹರಿಸಿದ್ದಾರೆ. ಈ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಇಟ್ಟಿರುವ ಪ್ರಧಾನಮಂತ್ರಿಯವರು ಸುಮಾರು 19,150 ಕೋಟಿ ರೂ.ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.