ಭಾರತದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೋನಾ ವೈರಸ್ ತಡೆಯಲು ಕೇರಳ ವಿನೂತನ ಕ್ರಮಗಳನ್ನು ಕೈಗೊಳ್ಳುವ ಮೂಲಕ ಮುಂಚೂಣಿಯಲ್ಲಿದೆ. ಇದೀಗ ಹೌಸ್‌ಬೋಟ್‌ಗಳನ್ನೇ ಐಸೋಲೇಷನ್ ವಾರ್ಡ್‌ಗಳನ್ನಾಗಿ ಮಾರ್ಪಡಿಸಲು ಕೇರಳ ಸರ್ಕಾರ ಮುಂದಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ತಿರುವನಂತಪುರಂ(ಏ.17) ಕೇರಳದ ಐಷಾರಾಮಿ ಹೌಸ್‌ಬೋಟ್‌ ಒಂದನ್ನು ಕೊರೋನಾ ವೈರಸ್‌ ಸೋಂಕಿತರ ಚಿಕಿತ್ಸೆಗಾಗಿ ಐಸೋಲೇಷನ್‌ ವಾರ್ಡ್‌ ಆಗಿ ಪರಿವರ್ತಿಸಲಾಗುತ್ತಿದೆ! 

ಹೌದು, ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೂರ್ವ ಸಿದ್ಧತೆ ಮಾಡಿಕೊಳ್ಳಲು ಇಲ್ಲಿನ ಸರ್ಕಾರ ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಕೇಂದ್ರವಾದ ಅಲೆಪ್ಪಿಯ ಹಿನ್ನೀರಿನಲ್ಲಿ ಬಳಕೆಯಾಗುತ್ತಿರುವ ಹೌಸ್‌ ಬೋಟ್‌ನಲ್ಲಿ ಐಸೋಲೇಷನ್‌ ವಾರ್ಡ್‌ಗೆ ಬೇಕಾದ ಎಲ್ಲಾ ಅಗತ್ಯ ವಸ್ತುಗಳನ್ನು ಜೋಡಿಕೊಳ್ಳುವ ಕಾರ್ಯ ಆರಂಭಗೊಂಡಿದೆ. ಅಂದಾಜು 2000 ಐಸೋಲೇಷನ್‌ ವಾರ್ಡ್‌ಗಳನ್ನು ಸಿದ್ಧಪಡಿಸಲಾಗುತ್ತಿದೆ. ಈಗಾಗಲೇ ಸರಿ ಸುಮಾರು 700 ಹೌಸ್‌ಬೋಟ್‌ಗಳನ್ನೂ ಪರಿಶೀಲನೆ ನಡೆಸಲಾಗಿದೆ ಎಂದು ಸಚಿವ ಜಿ. ಸುಧಾಕರನ್‌ ತಿಳಿಸಿದ್ದಾರೆ. 

ಫೇಸ್‌ಬುಕ್ ನೋಡಿ 14 ಸಾವಿರ ಕೆಜಿ ಕುಂಬಳ ಖರೀದಿಗೆ ಮುಂದಾದ ಸರ್ಕಾರ

ಹೌಸ್‌ಬೋಟನ್ನು ಐಸೋಲೇಷನ್‌ ವಾರ್ಡ್‌ ಆಗಿ ಪರಿವರ್ತಿಸುವ ಜಿಲ್ಲಾಡಳಿತದ ಪ್ರಸ್ತಾಪವನ್ನು ಬೋಟ್ ಮಾಲೀಕರು ಒಪ್ಪಿಕ್ಕೊಂಡಿದ್ದಾರೆ. ಏಪ್ರಿಲ್ ಅಂತ್ಯದ ವೇಳೆಗೆ ವಾರ್ಡ್‌ಗಳು ಬಳಕೆ ಸಿದ್ಧವಾಗಲಿವೆ ಎಂದು ಸಮಾಜ ಕಲ್ಯಾಣ ಸಚಿವ ಜಿ. ಸುಧಾಕರನ್ ತಿಳಿಸಿದ್ದಾರೆ.