Asianet Suvarna News Asianet Suvarna News

ನಾಗರಿಕ ಸಂಹಿತೆ ವಿರುದ್ಧ ಕೇರಳ ವಿಧಾನಸಭೆಯಲ್ಲಿ ಗೊತ್ತುವಳಿ ಅಂಗೀಕಾರ

ಕೇಂದ್ರ ಸರ್ಕಾರದ ಉದ್ದೇಶಿತ ಏಕರೂಪ ನಾಗರಿಕ ಸಂಹಿತೆಯ ಜಾರಿ ವಿರುದ್ಧ ಕೇರಳ ವಿಧಾನಸಭೆ ನಿರ್ಣಯ ಅಂಗೀಕರಿಸಿದೆ. ಈ ಕುರಿತು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಮಂಡಿಸಿದ ಗೊತ್ತುವಳಿಯನ್ನು ಕೇರಳ ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು

Kerala Legislative Assembly passes resolution against Civil Code akb
Author
First Published Aug 9, 2023, 12:57 PM IST

ತಿರುವನಂತಪುರ: ಕೇಂದ್ರ ಸರ್ಕಾರದ ಉದ್ದೇಶಿತ ಏಕರೂಪ ನಾಗರಿಕ ಸಂಹಿತೆಯ ಜಾರಿ ವಿರುದ್ಧ ಕೇರಳ ವಿಧಾನಸಭೆ ನಿರ್ಣಯ ಅಂಗೀಕರಿಸಿದೆ. ಈ ಕುರಿತು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಮಂಡಿಸಿದ ಗೊತ್ತುವಳಿಯನ್ನು ಕೇರಳ ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು.‘ಕೇಂದ್ರ ಸರ್ಕಾರ ಏಕರೂಪ ನಾಗರಿಕ ಸಂಹಿತೆಯನ್ನು ಏಕಪಕ್ಷೀಯವಾಗಿ ಹಾಗೂ ಆತುರದಿಂದ ಜಾರಿ ಮಾಡುತ್ತಿದೆ. ಇದು ಸಂಘ ಪರಿವಾರದ ಉದ್ದೇಶವಾಗಿದ್ದು, ಇದರಲ್ಲಿ ಸಂವಿಧಾನದ ಅಂಶವನ್ನು ಬಿಟ್ಟು ಹಿಂದು ಗ್ರಂಥ ಮನುಸ್ಮೃತಿಯ ಅಂಶಗಳನ್ನು ಅಳವಡಿಸಲಾಗಿದೆ’. ಹೀಗಾಗಿ ಅದನ್ನು ರಾಜ್ಯದಲ್ಲಿ ಹೇರಿಕೆ ಮಾಡುವುದನ್ನು ವಿರೋಧಿಸಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಈ ನಿರ್ಣಯವನ್ನು ಮಂಡಿಸಿದರು. ಇದಕ್ಕೆ ವಿರೋಧ ಪಕ್ಷ ಕಾಂಗ್ರೆಸ್‌ ಹಾಗೂ ಅದರ ಮೈತ್ರಿ ಯುಡಿಎಫ್‌ ಬೆಂಬಲ ಸೂಚಿಸಿ ಗೊತ್ತುವಳಿ ಸರ್ವಾನುಮತದಿಂದ ಅಂಗೀಕರಿಸಲಾಯಿತು.

ಏಕರೂಪ ನಾಗರಿಕ ಸಂಹಿತೆಗೆ ಶೇ.67ರಷ್ಟು ಮುಸ್ಲಿಂ ಮಹಿಳೆಯರ ಬೆಂಬಲ, ಸರ್ವೇಯಲ್ಲಿ ಬಹಿರಂಗ

ಏಕರೂಪ ನಾಗರಿಕ ಸಂಹಿತೆ ಜಾರಿ ವಿಚಾರವಾಗಿ ಗೊಂದಲಗಳು ಹಾಗೂ ವಿವಾದಗಳು ಎದ್ದಿರುವಂತೆ, ಖಾಸಗಿ ನ್ಯೂಸ್‌ ಚಾನೆಲ್‌ ಈ ಕುರಿತಾಗಿ ಮೆಗಾ ಸರ್ವೇ ಮಾಡಿದೆ. ಇದರಲ್ಲಿ ಶೇ. 60ರಷ್ಟು ಮುಸ್ಲಿಂ ಮಹಿಳೆಯರು ಏಕರೂಪ ನಾಗರಿಕ ಸಂಹಿತೆಗೆ ಬೆಂಬಲ ಸೂಚಿಸಿದ್ದಾರೆ. ದೇಶದ 25 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶದ 8035 ಮುಸ್ಲಿಂ ಮಹಿಳೆಯರಿಂದ ಸರ್ವೇಗೆ ವಿವರ ಪಡೆಯಲಾಗಿದೆ. ಶೇ. 79ರಷ್ಟು ಮುಸ್ಲಿಂ ಮಹಿಳೆಯರು ಪುರುಷರಾಗಲಿ, ಮಹಿಳೆಯರಾಗಲಿ ಮದುವೆಯ ವಯಸ್ಸು 21 ಆಗಿರಬೇಕು ಎನ್ನುವ ವಿಚಾರದಲ್ಲಿ ಸಹಮತ ಹೊಂದಿದ್ದಾರೆ. ಮದುವೆ, ವಿಚ್ಛೇದನ ಹಾಗೂ ಉತ್ತರಾಧಿಕಾರಕ್ಕಾಗಿ ಹೆಚ್ಚಿನ ಮುಸ್ಲಿಂ ಮಹಿಳೆಯರು ಏಕರೂಪ ನಾಗರಿಕ ಸಂಹಿತೆಯನ್ನು ಬೆಂಬಲಿಸುವುದಾಗಿ ತಿಳಿಸಿದ್ದಾರೆ.

ಅಂದಾಜು 8035 ನಹಿಳೆಯರ ಪೈಕಿ, 5403 ಮಹಿಳೆಯರು ಮದುವೆ, ವಿಚ್ಛೇದನ, ಉತ್ತರಾಧಿಕಾರ ಹಾಗೂ ದತ್ತು ಸ್ವೀಕಾರದ ಕುರಿತು ಸಮಾನ ಕಾನೂನಿನ ಅಗತ್ಯವಿದೆ ಎಂದು ಹೇಳಿದ್ದಾರೆ. ಈ ಸಮೀಕ್ಷೆಯಲ್ಲಿ ಕೇಳಲಾದ ಏಳು ಪ್ರಮುಖ ಪ್ರಶ್ನೆಗಳು ಯುಸಿಸಿ ಕುರಿತು ಯಾವುದೇ ಉಲ್ಲೇಖವನ್ನು ಮಾಡಿಲ್ಲ ಆದರೆ, ಯುಸಿಸಿ ಒಳಗೊಂಡಿರುವ ವಿಷಯಗಳಿಗೆ ಕಟ್ಟುನಿಟ್ಟಾಗಿ ಸೀಮಿತವಾಗಿದ್ದವು.

ಏಕರೂಪ ನಾಗರಿಕ ಸಂಹಿತೆ ಬಗ್ಗೆ ನೆಹರೂ ಸಲಹೆ ಹಂಚಿಕೊಂಡ ಶಶಿ ತರೂರ್‌: ಕಾಂಗ್ರೆಸ್‌ ನಿಲುವು ಹೀಗಿದೆ..

ಮದುವೆ, ವಿಚ್ಛೇದನ, ಉತ್ತರಾಧಿಕಾರ, ದತ್ತು, ನಿರ್ವಹಣೆ, ಇತರ ವಿಷಯಗಳಲ್ಲಿ ಎಲ್ಲಾ ಧಾರ್ಮಿಕ ಸಮುದಾಯಗಳಿಗೆ ಅನ್ವಯವಾಗುವ ಒಂದು ಕಾನೂನು ಎನ್ನುವುದು ಯುಸಿಸಿಯ ಅರ್ಥವಾಗಿದೆ. "ಪ್ರತ್ಯೇಕ ಸಮುದಾಯಗಳಿಗೆ ಪ್ರತ್ಯೇಕ ಕಾನೂನು" ಎಂಬ ದ್ವಂದ್ವ ವ್ಯವಸ್ಥೆಯೊಂದಿಗೆ ದೇಶವು ನಡೆಯಲು ಸಾಧ್ಯವಿಲ್ಲದ ಕಾರಣ ಭಾರತಕ್ಕೆ ಯುಸಿಸಿ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಹೇಳಿದ್ದರು.

ಮುಂದಿನ ಸಂಸತ್‌ ಅಧಿವೇಶನದ ವೇಳೆ ಯುಸಿಸಿ ಬಗ್ಗೆಯೂ ಕೇಂದ್ರ ಚರ್ಚೆ ಮಾಡುವ ಸಾಧ್ಯತೆ ಇದೆ. ಇದರ ನಡುವೆ 18 ರಿಂದ 65 ವರ್ಷ ವಯಸ್ಸಿನ ಹೆಚ್ಚಿನ ಮುಸ್ಲಿಂ ಮಹಿಳೆಯರು ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು. ಮದುವೆ, ವಿಚ್ಛೇದನ, ದತ್ತು ಸ್ವೀಕಾರ ಮತ್ತು ಉತ್ತರಾಧಿಕಾರದಂಥ ವೈಯಕ್ತಿಕ ವಿಷಯಗಳಿಗಾಗಿ ಎಲ್ಲಾ ಭಾರತೀಯರಿಗೂ ಸಮಾನ ಕಾನೂನು ಇರಬೇಕು ಎನ್ನುವ ವಿಚಾರವನ್ನು ನೀವು ಬೆಂಬಲಿಸುತ್ತೀರಾ ಎಂದು ಸಮೀಕ್ಷೆಯಲ್ಲಿ ಕೇಳಿದ ಪ್ರಶ್ನೆಗೆ 5403 ಮಹಿಳೆಯರು ಹೌದು ಎಂದು ಹೇಳಿದ್ದರೆ, 2039 ಮಹಿಳೆಯರು ಇಲ್ಲ ಎಂದು ಹೇಳಿದ್ದಾರೆ.
ಇನ್ನು ಸ್ನಾತಕೋತ್ತರ ಪದವಿ ಹಾಗೂ ಅದಕ್ಕಿಂತ ಹೆಚ್ಚಿನ ವಿದ್ಯಾಭ್ಯಾಸ ಮಾಡಿದ ಮಹಿಳೆಯರಲ್ಲಿ ಶೇ. 68 ಮಂದಿ ಅಂದರೆ 2076 ಮಹಿಳೆಯರು ಸಾಮಾನ್ಯ ಕಾನೂನನ್ನು ಬೆಂಬಲಿಸಿದ್ದಾರೆ. ಇನ್ನು ಪ್ರತಿಶತ 27ರಷ್ಟು ಜನರು (820) ಮಂದಿ ಇಲ್ಲ ಎಂದಿದ್ದಾರೆ. ಇನ್ನು ಶೇ.7.4ರಷ್ಟು ಮಂದಿ ತಮಗೆ ಗೊತ್ತಿಲ್ಲ ಅಥವಾ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.

One Life One wife: ಅಸ್ಸಾಂನಲ್ಲಿ ಶೀಘ್ರದಲ್ಲೇ ಬಹುಪತ್ನಿತ್ವ ನಿಷೇಧ ಮಸೂದೆ

 

Follow Us:
Download App:
  • android
  • ios