ತಿರಂಗ ಹಾರಿಸಲು ಮಸೀದಿಯಲ್ಲಿ ಜಟಾಪಟಿ, 4 ತಿಂಗಳ ವಾಗ್ವಾದ ಸ್ವಾತಂತ್ರ್ಯ ದಿನಾಚರಣೆಗೆ ಸ್ಫೋಟ!

77ನೇ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ಮಾಡುವ ವಿಚಾರದಲ್ಲಿ ಮಸೀದಿಯ ಸಮಿತಿಯ ಎರಡು ಗುಂಪುಗಳ ನಡುವೆ ಕಳೆದ ನಾಲ್ಕು ತಿಂಗಳಿನಿಂದ ವಾಗ್ವಾದ, ವಾಕ್ಸಮರ ನಡೆಯುತ್ತಲೇ ಬಂದಿದೆ. ಕೊನೆಗೆ ಜಂಟಿಯಾಗಿ ಧ್ವಜಾರೋಹಣ ಮಾಡಲು ನಿರ್ಧರಿಸಲಾಗಿತ್ತು. ಆದರೆ ಧ್ವಜಾರೋಹಣದ ಮೇಲೆ ಮಸೀದಿಯಲ್ಲಿ ಜಟಾಪಟಿಯೇ ನಡೆದು ಹೋಗಿದೆ.

Kerala Jamaat mosque committee member fight each over hoisting national flag in Independence day ckm

ಕಾಸರಗೋಡು(ಆ.16) ಭಾರತದ 77ನೇ ಸ್ವಾತಂತ್ರ್ಯ ದಿನಾಚರಣೆಗೆ ದೇಶದ ಮೂಲೆ ಮೂಲೆ ತಿರಂಗ ಹಾರಾಡಿದೆ. ಶಾಲಾ ಕಾಲೇಜು, ಸಂಘಟನೆ, ಮೈದಾನ, ಸಂಸ್ಥೆ, ಕಚೇರಿ, ದೇವಸ್ಥಾನ, ಮಸೀದಿ, ಚರ್ಚ್ ಸೇರಿದಂತೆ ಎಲ್ಲಾ ಕಡೆ ಧ್ವಜಾರೋಹಣ ನೆರವೇರಿಸಲಾಗಿದೆ. ಆದರೆ ಮಸೀದಿಯೊಂದರಲ್ಲಿ ಧ್ವಜಾರೋಹಣ ನೆರವೇರಿಸುವ ಕುರಿತು ಕಳೆದ ನಾಲ್ಕು ತಿಂಗಳಿನಿಂದ ವಾಗ್ವಾದ ನಡೆದಿದೆ. ಕಾಸರಗೋಡಿನ ಜಮಾತ್ ಮಸೀದಿ ಸಮಿತಿಯ 2 ಗಂಪುಗಳ ನಡುವಿನ ವಾಗ್ವಾದ ತೀವ್ರ ಸ್ವರೂಪ ತಲುಪಿತ್ತು. ಕೊನೆಗೆ ಎರಡೂ ಗುಂಪು ಜಂಟಿಯಾಗಿ ಧ್ವಜಾರೋಹಣಕ್ಕೆ ಒಪ್ಪಿಕೊಂಡಿತ್ತು. ಆದರೆ ಆಗಸ್ಟ್ 15ರ ಬೆಳಗ್ಗೆ ಧ್ವಜಾರೋಹಣ ಮಾಡುವಾಗ ಎರಡು ಗಂಪಿನ ನಡುವೆ ಮಾರಾಮಾರಿ ನಡೆದಿದೆ. 

ಜಮಾತ್ ಮಸೀದಿ ಸಮಿತಿಯಲ್ಲಿ ನಾಲ್ಕು ತಿಂಗಳಿನಿಂದ ವಾಗ್ವಾದ ಶುರುವಾಗಿದೆ. ಈ ಬಾರಿ ಸ್ವಾತಂತ್ರ್ಯ ದಿನಾಚರಣೆಗೆ ಯಾರು ಧ್ವಜಾರೋಹಣ ನೆರವೇರಿಸಬೇಕು ಅನ್ನೋ ವಿಚಾರದಲ್ಲಿ ವಾಗ್ವಾದ ಶುರುವಾಗಿದೆ. ಎರಡು ಗುಂಪುಗಳು ತಮ್ಮ ತಮ್ಮ ನಾಯಕರು ಧ್ವಜಾರೋಹಣ ಮಾಡಬೇಕು ಎಂದು ಪಟ್ಟು ಹಿಡಿದಿತ್ತು.ಹಲವು ಸುತ್ತಿನ ಮಾತುಕತೆ, ಸಂಧಾನ ವಿಫಲಗೊಂಡಿದೆ. ಆದರೆ ಮನಸ್ತಾಪ ಹಾಗೂ ವಾಗ್ವಾದ ಮುಂದುವರಿದಿದೆ.

ಸ್ವಾತಂತ್ರ್ಯ ದಿನಾಚರಣೆಗೆ ಪಾಕಿಸ್ತಾನ ಜಿಂದಾಬಾದ್ ಘೋಷಣೆ, ಇಬ್ಬರ ಬಂಧನ!

ವಾಗ್ವಾದ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಈ ವಿಚಾರ ಜಿಲ್ಲಾ ಮೌಲ್ವಿಗಳ ಗಮನಕ್ಕೂ ಬಂದಿದೆ. ಮಸೀದಿ ಸಮಿತಿಯ ಎರಡು ಗುಂಪುಗಳು ಮೌಲ್ವಿ ಬಳಿ ತೆರಳಿದೆ. ಜೊತೆಗೆ ಗ್ರಾಮದ ಮುಸ್ಲಿಂ ಭಾಂಧವರೂ ತೆರಳಿದ್ದಾರೆ. ಬಳಿಕ ಎರಡು ಗುಂಪುಗಳು ಜಂಟಿಯಾಗಿ ಧ್ವಜಾರೋಹಣ ನೆರವೇರಿಸವಂತೆ ಸೂಚನೆ ನೀಡಿದ್ದಾರೆ. ಇದರಂದೆ ಆಗಸ್ಟ್ 15 ರಂದು ಮಸೀದಿ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಲು ಎರಡು ಗುಂಪುಗಳು ತಯಾರಾಗಿದೆ.

ಆಗಸ್ಟ್ 15 ರಂದು ಮಸೀದಿಯ ಆಡಳಿತದಲ್ಲಿರುವ ಮದರಸಾ ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ಮಸೀದಿ ಆವರಣದಲ್ಲಿ ನೆರೆದಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಗೆ ಧ್ವಜಾರೋಹಣ ಮಾಡಲು ಮಸೀದಿಯ ಎರಡು ಗುಂಪುಗಳು ಹಾಜರಾಗಿದೆ. ಆದರೆ ಧ್ವಜಾರೋಹಣದ ವೇಳೆ ಮತ್ತೊಂದು ಗುಂಪು ಅಧಿಪತ್ಯ ಸಾಧಿಸುತ್ತಿದೆ ಎಂದು ಫ್ಲಾಗ್ ಹೋಸ್ಟ್ ನಡುವೆ ಜಟಾಪಟಿ ನಡೆದಿದೆ. ಕೈಕೈ ಮಿಲಾಯಿಸಿದ ಸದಸ್ಯರು ಬಡಿದಾಟ ಶುರುಮಾಡಿದ್ದಾರೆ.

 

ಶೂಸ್​ ಧರಿಸಿ ಧ್ವಜ ಹಾರಿಸಿದ ನಟಿ ಶಿಲ್ಪಾ ಶೆಟ್ಟಿ: ಟ್ರೋಲ್​ ಆಗ್ತಿದ್ದಂತೆಯೇ ಕೊಟ್ಟ ಉತ್ತರವೇನು ನೋಡಿ!

ಧ್ವಜಾರೋಹಣಕ್ಕೆ ಆಗಮಿಸಿದ ವಿದ್ಯಾರ್ಥಿಗಳು ದೂರ ಸರಿದಿದ್ದಾರೆ. ಈ ಜಗಳ ಕೆಲ ಹೊತ್ತು ನಡೆದಿದೆ. ಆದರೆ ಈ ವಿಡಿಯೋ ಭಾರಿ ವೈರಲ್ ಆಗಿದೆ. ಈ ಕುರಿತು ದೂರು ಕೂಡ ದಾಖಲಾಗಿದೆ. ಭಾರತದ ಧ್ವಜಕ್ಕೆ ಅಪಮಾನ ಮಾಡಲಾಗಿದೆ ಅನ್ನೋ ದೂರು ಇದೀಗ ಮಸೀದಿ ಸಮಿತಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಇದೀಗ ಮಸೀದಿ ಸಮಿತಿ ಒಬ್ಬರಿಗೊಬ್ಬರ ಮೇಲೆ ಆರೋಪ ಮಾಡುತ್ತಿದೆ. ವಿಡಿಯೋ ಆಧರಿಸಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಸಮಿತಿ ಸದಸ್ಯರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. 

Latest Videos
Follow Us:
Download App:
  • android
  • ios