Asianet Suvarna News Asianet Suvarna News

ಪ್ರತಿ ರಸ್ತೆ, ಪ್ರತಿ ಮೂಲೆಯಲ್ಲೂ ಮಸೀದಿ ಬೇಕು ಎಂದು ಕುರಾನ್‌ ಹೇಳೋದಿಲ್ಲ: ಕೇರಳ ಹೈಕೋರ್ಟ್‌

ಅಕ್ರಮವಾಗಿರುವ ಎಲ್ಲಾ ರೀತಿಯ ಧಾರ್ಮಿಕ ಸ್ಥಳಗಳು ಹಾಗೂ ಪ್ರಾರ್ಥನಾ ಮಂದಿರಗಳನ್ನು ತಕ್ಷಣವೇ ಸರ್ಕಾರ ಮುಚ್ಚಬೇಕು. ಅಕ್ರಮವಾಗಿರುವ ಇಂಥ ಕೇಂದ್ರಗಳನ್ನು ಮುಚ್ಚಲು ಅನುಮತಿ ಕೂಡ ಅಗತ್ಯವಿಲ್ಲ. ಕೋಮು ಸೌಹಾರ್ದತೆ ಕಾಪಾಡಲು ಎಲ್ಲಾ ರೀತಿಯ ಕ್ರಮಕೈಗೊಳ್ಳುವಂತೆ ರಾಜ್ಯ ಸರ್ಕಾರ ಮತ್ತು ಪೊಲೀಸ್ ಅಧಿಕಾರಿಗಳಿಗೆ ಕೇರಳ ಹೈಕೋರ್ಟ್‌ ನಿರ್ದೇಶನ ನೀಡಿದೆ.
 

Kerala High Court says Quran does not say mosque is needed in every nook and cranny declined permission san
Author
First Published Aug 26, 2022, 4:53 PM IST

ತಿರುವನಂತಪುರ (ಆ.26): ಈಗಾಗಲೇ ಹಲವು ಮಸೀದಿಗಳನ್ನು ಹೊಂದಿರುವ ಪ್ರದೇಶದಲ್ಲಿ ಮತ್ತೊಂದು ಮಸೀದಿ ನಿರ್ಮಿಸಲು ಅನುಮತಿ ನೀಡಲು ಕೇರಳ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ, ರಾಜ್ಯವು ಈಗಾಗಲೇ ಹೆಚ್ಚಿನ ಸಂಖ್ಯೆಯ ಧಾರ್ಮಿಕ ರಚನೆಗಳು ಹಾಗೂ ಕೇಂದ್ರಗಳನ್ನು ಹೊಂದಿದೆ ಮತ್ತು ಜನಸಂಖ್ಯೆಗೆ ಧಾರ್ಮಿಕ ರಚನೆಗಳ ಅನುಪಾತವು ತುಂಬಾ ಹೆಚ್ಚಾಗಿದೆ ಎನ್ನುವುದನ್ನು ಕೋರ್ಟ್‌ ಗಮನಿಸಿದ್ದಾಗಿ ತಿಳಿಸಿದೆ. ‘ದೇವರ ಸ್ವಂತ ನಾಡು’ ಎಂದು ವ್ಯಾಪಕವಾಗಿ ಹೇಳಲಾಗುವ ಕೇರಳವು ಧಾರ್ಮಿಕ ಸ್ಥಳಗಳು, ಅಂಥ ಕೇಂದ್ರಗಳಿಂದಲೇ ತುಂಬಿ ತುಳುಕುತ್ತಿದೆ ಎಂದು ನ್ಯಾಯಮೂರ್ತಿ ಪಿವಿ ಕುಂಞಿಕೃಷ್ಣನ್ ಅಭಿಪ್ರಾಯಪಟ್ಟಿದ್ದಾರೆ. "ಕೇರಳದ ವಿಶಿಷ್ಟ ಭೌಗೋಳಿಕ ಪರಿಸ್ಥಿತಿಯಿಂದಾಗಿ ಇದನ್ನು 'ದೇವರ ಸ್ವಂತ ನಾಡು' ಎಂದು ಕರೆಯಲಾಗುತ್ತದೆ. ಆದರೆ ನಾವು ಧಾರ್ಮಿಕ ಸ್ಥಳಗಳು ಮತ್ತು ಪ್ರಾರ್ಥನಾ ಮಂದಿರಗಳಿಂದ ತುಂಬಿ ಹೋಗಿದ್ದೇವೆ ಮತ್ತು ತೀರಾ ಅಪರೂಪದ ಪ್ರಕರಣಗಳನ್ನು ಹೊರತುಪಡಿಸಿ ಯಾವುದೇ ಹೊಸ ಧಾರ್ಮಿಕ ಸ್ಥಳಗಳು ಮತ್ತು ಪ್ರಾರ್ಥನಾ ಮಂದಿರಗಳನ್ನು ಅನುಮತಿಸುವ ಸ್ಥಿತಿಯಲ್ಲಿ ನಾವು ಇಲ್ಲ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ. ಹೌದು ಮುಸ್ಲಿಂ ಸಮುದಾಯಕ್ಕೆ ಮಸೀದಿಗಳು ಬಹಳ ಮುಖ್ಯ ಎನ್ನುವುದನ್ನು ಒಪ್ಪುತ್ತೇವೆ. ಆದರೆ, ಕುರಾನ್‌ನಲ್ಲಿ ಪ್ರತಿ ರಸ್ತೆ, ಪ್ರತಿ ಮೂಲೆಯಲ್ಲೂ ಮಸೀದಿ ಇರಬೇಕು ಎಂದು ಎಲ್ಲಿಯೂ ಹೇಳಿಲ್ಲ ಎನ್ನುವುದನ್ನು ನ್ಯಾಯಾಲಯ ಗಮನಿಸಿದೆ ಎಂದು ಹೇಳಿದ್ದಾರೆ.

ಕುರಾನ್‌ ಉಲ್ಲೇಖ: ಈ ನಿಟ್ಟಿನಲ್ಲಿ, ನ್ಯಾಯಾಲಯವು ಪವಿತ್ರ ಓರ್-ಆನ್‌ನ ಜುಜ್ 10 ಸೂರಾ 18 ಮತ್ತು ಜುಜ್ 1 ಸೂರಾ 114 ಮತ್ತು ರಿಯಾದಸ್ ಸಾಲಿಹೀನ್ ಅವರ ಷರತ್ತು 10 64 ಅನ್ನು ಉಲ್ಲೇಖ ಮಾಡಿದೆ. "ಕುರಾನ್‌ನ ಮೇಲಿನ ಸಾಲುಗಳು, ಮುಸ್ಲಿಂ ಸಮುದಾಯಕ್ಕೆ ಮಸೀದಿಯ ಮಹತ್ವವನ್ನು ಸ್ಪಷ್ಟವಾಗಿ ಎತ್ತಿ ತೋರಿಸುತ್ತವೆ. ಆದರೆ ಪವಿತ್ರ ಕುರಾನ್‌ನ ಮೇಲಿನ ಸಾಲುಗಳಲ್ಲಿ ಪ್ರತಿಯೊಂದು ಮೂಲೆ ಮತ್ತು ಮೂಲೆಯಲ್ಲಿ ಮಸೀದಿ ಅಗತ್ಯ ಎಂದು ಹೇಳಿಲ್ಲ. "ಹದೀಸ್" ಅಥವಾ ಪವಿತ್ರ ಕುರ್-ಆನ್‌ನಲ್ಲಿ ಮಸೀದಿಯು ಪ್ರತಿಯೊಬ್ಬ ಮುಸ್ಲಿಂ ಸಮುದಾಯದ ಸದಸ್ಯರ ಮನೆಯ ಪಕ್ಕದಲ್ಲಿದೆ ಎಂದು ಹೇಳಲಾಗಿಲ್ಲ. ದೂರವು ಮಾನದಂಡವಲ್ಲ, ಆದರೆ ಮಸೀದಿಯನ್ನು ತಲುಪುವುದು ಮುಖ್ಯ' ಎನ್ನುವುದನ್ನು ನ್ಯಾಯಾಲಯ ಗಮನಿಸಿದೆ.

2011 ರ ಜನಗಣತಿಯ ಆಧಾರದ ಮೇಲೆ ಧಾರ್ಮಿಕ ರಚನೆಗಳ ಮೇಲಿನ ಅಧ್ಯಯನವನ್ನು ಉಲ್ಲೇಖಿಸಿದ ನ್ಯಾಯಾಲಯವು "ಆತಂಕಕಾರಿ" ಎಂದು ಕರೆದಿದೆ. ಕೇರಳದ ಗ್ರಾಮಗಳಲ್ಲಿ ಅಂದಾಜು 10ರಷ್ಟು ಧಾರ್ಮಿಕ ರಚನೆಗಳಿವೆ. ಇದು ಆಸ್ಪತ್ರೆಗಳ ಸಂಖ್ಯೆಗಿಂತ 3.5 ಪಟ್ಟು ಹೆಚ್ಚಳ ಎಂದು ಕೋರ್ಟ್‌ ಹೇಳಿದೆ.

ಸೌಹಾರ್ದತೆಗೆ ಧಕ್ಕೆ ಬರುತ್ತೆ: “ಕೇರಳವು ಧಾರ್ಮಿಕ ಸಂಸ್ಥೆಗಳು ಮತ್ತು ಪ್ರಾರ್ಥನಾ ಮಂದಿರಗಳಿಂದ ದಣಿದು ಹೋಗಿದೆ. ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ, ಯಹೂದಿಗಳು, ಪಾರ್ಸಿಗಳು ಇತ್ಯಾದಿ ಪ್ರತಿಯೊಬ್ಬ ಭಕ್ತರು ತಮ್ಮ ಮನೆಯ ಬಳಿಯೇ ಧಾರ್ಮಿಕ ಸ್ಥಳಗಳು ಮತ್ತು ಪ್ರಾರ್ಥನಾ ಮಂದಿರಗಳನ್ನು ನಿರ್ಮಿಸಲು ಪ್ರಾರಂಭಿಸಿದರೆ, ರಾಜ್ಯವು ಕೋಮು ಸೌಹಾರ್ದತೆ ಸೇರಿದಂತೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಈ ಪ್ರಕರಣದಲ್ಲಿ ಗುಪ್ತಚರ ವರದಿ ಮತ್ತು ಪೊಲೀಸ್ ವರದಿಯು ಪ್ರಕಾರ,  ಪ್ರಸ್ತುತ ವಾಣಿಜ್ಯ ಕಟ್ಟಡವನ್ನು ಧಾರ್ಮಿಕ ಪ್ರಾರ್ಥನಾ ಮಂದಿರವಾಗಿ ಪರಿವರ್ತಿಸಲು ಅನುಮತಿ ನೀಡಿದರೆ, ಕೋಮು ಸೌಹಾರ್ದತೆಗೆ ಧಕ್ಕೆ ಬರುವ ಅವಕಾಶವಿದೆ ಎಂದು ಹೇಳುತ್ತದೆ, ಇದು ಸೂಕ್ಷ್ಮ ವಿಷಯವಾಗಿದೆ, ”ಎಂದು ನ್ಯಾಯಾಲಯ ಹೇಳಿದೆ.

ಪತ್ನಿಯನ್ನು ಬೇರೆ ಮಹಿಳೆಯರಿಗೆ ಹೋಲಿಸುವುದು ಕ್ರೌರ್ಯ: ಕೇರಳ ಹೈಕೋರ್ಟ್

ಪ್ರದೇಶದಲ್ಲಿ 36 ಮಸೀದಿಗಳಿವೆ:
ಇನ್ನು ಈ ಪ್ರಕರಣದಲ್ಲಿಯೇ ಹೇಳುವುದಾದರೆ, ಇದೇ ಪ್ರದೇಶದ ಅಕ್ಕಪಕ್ಕದಲ್ಲಿ 36 ಮಸೀದಿಗಳು ಅಸ್ತಿತ್ವದಲ್ಲಿದೆ. ಇಸ್ಲಾಂ ಧರ್ಮದ ಅನುಯಾಯಿಗಳು ಹತ್ತಿರದ ಇತರ ಮಸೀದಿಗಳಿಗೆ ಹೋಗುವ ಅವಕಾಶವಿದೆ. ಹೆಚ್ಚು ಜನರಿದ್ದಾರೆ ಎನ್ನುವ ಕಾರಣಕ್ಕೆ ಇನ್ನೊಂದು ಮಸೀದಿಯ ಅಗತ್ಯ ಈ ಪ್ರದೇಶದಲ್ಲಿಲ್ಲ. ಅದಲ್ಲದೆ, ಹೆಚ್ಚಿನ ನಾಗರೀಕರ ಬಳಿಯಲ್ಲಿ ಈಗ ವಾಹನಗಳಿವೆ ಸಮೀಪದ ಮಸೀದಿಗಳಿಗೆ ಸುಲಭವಾಗಿ ಹೋಗಬಹುದು ಎಂದು ಹೇಳಿದೆ.

ಅವಿವಾಹಿತೆಯ ಮಕ್ಕಳಿಗೂ ದೇಶದಲ್ಲಿ ಜೀವಿಸುವ ಹಕ್ಕಿದೆ: ಕೇರಳ ಹೈಕೋರ್ಟ್‌

ಸಂವಿಧಾನ ಹಕ್ಕು ಕೊಟ್ಟ ಮಾತ್ರಕ್ಕೆ ಎಲ್ಲೆಡೆ ಧಾರ್ಮಿಕ ರಚನೆ ಮಾಡೋಕಾಗಲ್ಲ: "ಭಾರತದ ಸಂವಿಧಾನದ 26 (ಎ) ವಿಧಿಯು ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಮತ್ತು ಆರೋಗ್ಯಕ್ಕೆ ಒಳಪಟ್ಟು, ಪ್ರತಿ ಧಾರ್ಮಿಕ ಪಂಗಡ ಅಥವಾ ಅದರ ಯಾವುದೇ ವಿಭಾಗವು ಧಾರ್ಮಿಕ ಮತ್ತು ದತ್ತಿ ಉದ್ದೇಶಗಳಿಗಾಗಿ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಹಕ್ಕನ್ನು ಹೊಂದಿರುತ್ತದೆ ಎಂದು ಹೇಳುತ್ತದೆ ಎನ್ನುವುದು ನಿಜ. ಇದರರ್ಥ ದೇಶದ ಮೂಲೆಮೂಲೆಗಳು ಧಾರ್ಮಿಕ ಸ್ಥಳವನ್ನು ನಿರ್ಮಾಣ ಮಾಡಬಹುದು ಎಂದರ್ಥವಲ್ಲ. ಕೇರಳ ಬಹಳ ಚಿಕ್ಕ ರಾಜ್ಯ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ.

Follow Us:
Download App:
  • android
  • ios