Asianet Suvarna News Asianet Suvarna News

PFIಗೆ ಮತ್ತೊಂದು ಸ್ಟ್ರೋಕ್, KSRTCಗೆ ಆದ 5.20 ಕೋಟಿ ರೂ ನಷ್ಟ ಭರಿಸುವಂತೆ ಹೈಕೋರ್ಟ್ ತಾಕೀತು!

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮೇಲಿನ ದಾಳಿ ವಿರೋಧಿಸಿ ಕೇರಳದಲ್ಲಿ ದಿಢೀರ್ ಪ್ರತಿಭಟನೆಗೆ ನೆಡಸಲಾಗಿತ್ತ. ಈ ಪ್ರತಿಭಟನೆಯಲ್ಲಿ ಕೇರಳ ಸಾರಿಗೆ ಸಂಸ್ಥೆಯ 75ಕ್ಕೂ ಹೆಚ್ಚು ಬಸ್‌ಗಳನ್ನು ಪುಡಿ ಮಾಡಲಾಗಿತ್ತು. ಹಲವು ಬಸ್‌ಗಳಿಗೆ ಬೆಂಕಿ ಹಚ್ಚಲಾಗಿತ್ತು. ಇದರಿಂದ ಪಿಎಫ್ಐ ಸಂಘಟನೆ  5.06 ಕೋಟಿ ರೂಪಾಯಿ ನಷ್ಟಭರಿಸಬೇಕು ಎಂದು ಕೆಎಸ್‌ಆರ್‌ಟಿಸಿ ಹೈಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

Kerala High Court order PFI to Deposit RS 5 20 crore for damages of KSRTC bus during flash protest against NIA Raids ckm
Author
First Published Sep 29, 2022, 3:28 PM IST

ತಿರುವನಂತಪುರಂ(ಸೆ.29):  ಪಿಎಫ್ಐ ಸಂಘಟನೆ ಹಾಗೂ ಅದರ ಅಂಗ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಕೇಂದ್ರದ ಮಾಸ್ಟರ್ ಸ್ಟ್ರೋಕ್‌ಗೆ ಭಯೋತ್ಪದನೆಗೆ ನೆರವು ನೀಡುತ್ತಿದ್ದ, ಉಗ್ರವಾದ ಬಿತ್ತುತ್ತಿರುವ ಪಿಎಫ್ಐ ಸಂಘಟನೆ, ನಾಯಕರು ಹಾಗೂ ಕಾರ್ಯಕರ್ತರು ಹಲ್ಲು ಕಿತ್ತ ಹಾವಿನಂತಾಗಿದ್ದಾರೆ. ಇದರ ಬೆನ್ನಲ್ಲೇ ಕೇರಳ ಹೈಕೋರ್ಟ್‌ಗೆ ಮತ್ತೊಂದು ಸ್ಟ್ರೋಕ್ ನೀಡಿದೆ. ಪಿಎಪ್ಐ ಮೇಲಿನ ದಾಳಿ ವಿರೋಧಿಸಿ ಕೇರಳದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ನಡೆಸಿದ ದಿಢೀರ್ ಪ್ರತಿಭಟನೆಯಿಂದ ಕೇರಳ ಸಾರಿಗ ಸಂಸ್ಥೆಗೆ ಆಗಿರುವ 5.20 ಕೋಟಿ ರೂಪಾಯಿ ನಷ್ಟವನ್ನು ಭರಿಸಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ. ಪ್ರತಿಭಟನೆಯಲ್ಲಿ ಕೆಎಸ್ಆರ್‌ಟಿಸಿಗೆ ಆಗಿರುವ ನಷ್ಟವನ್ನು ಭರಿಸಬೇಕು ಎಂದು ಸಾರಿಗೆ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಕುರಿತು ವಿಚಾರಣೆ ನಡೆಸಿದ ಜಸ್ಟೀಸ್ ಎಕೆ ಜಯಶಂಕರನ್ ನಂಬಿಯಾರ್ ಹಾಗೂ ಜಸ್ಟೀಸ್ ಮೊಹಮ್ಮದ್ ನಿಯಾಸ್ ಸಿಪಿ ಮಹತ್ವದ ಆದೇಶ ನೀಡಿದ್ದಾರೆ. ದಿಢೀರ್ ಪ್ರತಿಭಟನೆಯಿಂದಾದ ಆಸ್ತಿ ಪಾಸ್ತಿ ನಷ್ಟಕ್ಕೆ ಪಿಎಫ್ಐ ಸಂಘಟನೆ ಕಾರಣ ಎಂದಿರುವ ಕೇರಳ ಹೈಕೋರ್ಟ್ ದ್ವಿಸದಸ್ಯ ಪೀಠ, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಖಾತೆಗೆ 5.20 ಕೋಟಿ ರೂಪಾಯಿ ನಷ್ಟಪರಿಹಾರ ಜಮೆ ಮಾಡುವಂತೆ ಪಿಎಫ್ಐಗೆ ತಾಕೀತು ಮಾಡಿದೆ.

ಉಗ್ರವಾದ ಬಿತ್ತುವ, ಭಯೋತ್ಪಾದನೆಗೆ ನೆರವು ನೀಡುತ್ತಿದ್ದ ಪಿಎಫ್ಐ(PFI Ban) ಹಾಗೂ ಅದರ ಅಂಗ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಇದಕ್ಕೂ ಮೊದಲು ಪಿಎಫ್ಐ ಸಂಘಟನೆ ಕಚೇರಿ, ನಾಯಕರು, ಕಾರ್ಯಕರ್ತರ ಮನೆ ಮೇಲೆ ರಾಷ್ಟ್ರೀಯ ತನಿಖಾ ದಳ(NIA Raids), ಆಯಾ ರಾಜ್ಯ ಪೊಲೀಸರು(Police Raids) ದಾಳಿ ಮಾಡಿ 100ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದರು. ಈ ದಾಳಿಯನ್ನು ವಿರೋಧಿಸಿ ದೇಶಾದ್ಯಂತ ಪಿಎಫ್ಐ ಸಂಘಟನೆ ದಿಢೀರ್ ಪ್ರತಿಭಟನೆಗೆ(PFI Protest) ಕರೆ ನೀಡಿತ್ತು. ಕೇರಳದಲ್ಲಿ ಸೆಪ್ಟೆಂಬರ್ 23ರಂದುಪಿಎಫ್ಐ ಹಾಗೂ ಅದರ ಅಂಗ ಸಂಸ್ಥೆಗಳು ದಿಢೀರ್ ಹಿಂಸಾತ್ಮಕ ಪ್ರತಿಭಟನೆ ನಡೆಸಿತ್ತು. ಈ ವೇಳೆ ಕೆಎಸ್‌ಆರ್‌ಟಿಸಿ ಬಸ್‌ಗಳ(KSRTC Bus) ಮೇಲೆ ದಾಳಿ ಮಾಡಲಾಗಿತ್ತು. ಭಾರಿ ಪ್ರಮಾಣದ ಸಾರ್ವಜನಿಕ ಹಾಗೂ ಖಾಸಗಿ ಆಸ್ತಿ ಪಾಸ್ತಿ ನಷ್ಟವಾಗಿತ್ತು. 75ಕ್ಕೂ ಹೆಚ್ಚು ಬಸ್‌ಗಳನ್ನು ಧ್ವಂಸಗೊಂಡಿತ್ತು. ಪ್ರತಿಭಟನೆ ಬಳಿಕ ಕೆಎಸ್‌ಆರ್‌ಟಿಸಿ ಆಗಿರುವ(Kerala Public transport) ಅಂದಾಜು ನಷ್ಟವನ್ನು ತಿಳಿಸಿತ್ತು. ಇಷ್ಟೇ ಅಲ್ಲ ಈ ಕುರಿತು ಕೇರಳ ಹೈಕೋರ್ಟ್‌ಗೆ ಮನವಿ ಸಲ್ಲಿಸಿತ್ತು. ನಷ್ಟ ಪರಿಹಾರ ನೀಡುವಂತೆ ಕೇರಳ ಹೈಕೋರ್ಟ್(Kerala High Court) ಪಿಎಫ್ಐ ಸಂಘಟನೆಗೆ ಆದೇಶಿಸಬೇಕು ಎಂದು ಮನವಿಯಲ್ಲಿ ಕೋರಿತ್ತು.

ನಿಷೇಧಿತ ಸಿಮಿ ಸಂಘಟನೆ ನಾಯಕರಿಂದ ಹುಟ್ಟಿದ ಪಿಎಫ್ಐ ಬ್ಯಾನ್, 2017ರಲ್ಲಿ ನೀಡಿತ್ತು ವರದಿ!

ಕೇರಳದಲ್ಲಿ(Kerala) ದಿಢೀರ್ ಪ್ರತಿಭಟನೆಗೆ(Flash hartal) ಅವಕಾಶವಿಲ್ಲ. ರಾಜಕೀಯ, ಪಕ್ಷ ಅಥವಾ ಇನ್ಯಾವುದೇ ಕಾರಣಕ್ಕೆ ದಿಡೀರ್ ಪ್ರತಿಭಟನೆ ಘೋಷಿಸುವುದು, ಸಾರ್ವಜನಿಕರಿಗೆ ತೊಂದರೆ ಕೊಡಲು ಅವಕಾಶವಿಲ್ಲ. ಪ್ರತಿಭಟನೆ ಕುರಿತು 2019ರಲ್ಲಿ ಕೋರ್ಟ್ ನೀಡಿರುವ ಆದೇಶ ಸ್ಪಷ್ಟವಾಗಿದೆ. ಈ ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಿದೆ. ನಿಮಗೆ ಸಂಘಟನೆ ಕಟ್ಟುವ, ವಿಸ್ತರಿಸುವ, ಪ್ರತಿಭಟಿಸುವ ಹಕ್ಕಿದೆ. ಆದರೆ ಅದಕ್ಕೊಂದು ನಿಯವಿದೆ. ಇಷ್ಟಬಂದಂತೆ, ನಿಮ್ಮ ಮೂಗಿನ ನೇರಕ್ಕೆ ಪ್ರತಿಭಟಿಸಿ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಉಂಟುಮಾಡುವುದು. ಸಾರ್ವಜನಿಕರಿಗೆ ಸಮಸ್ಯೆ ತಂದೊಡ್ಡಲು ಅವಕಾಶವಿಲ್ಲ ಎಂದು ಕೇರಳ ದ್ವಿಸದಸ್ಯ ಪೀಠ ಹೇಳಿದೆ. 

2019ರ ಜನವರಿ 7 ರಂದು ಕೇರಳ ಹೈಕೋರ್ಟ್ ದಿಢೀರ್ ಪ್ರತಿಭಟನೆ ಕುರಿತು ಮಹತ್ವದ ಆದೇಶ ನೀಡಿದೆ. ಕೇರಳ ದಿಢೀರ್ ಹರ್ತಾಳ್‌ಗೆ ಹೆಚ್ಚು ಪ್ರಸಿದ್ಧವಾಗಿದೆ. ಇದರಿಂದ ಆಗುವ ಸಮಸ್ಯೆಗಳಿಗೆ ಮುಕ್ತಿ ನೀಡಲು ಕೇರಳ ಹೈಕೋರ್ಟ್ ಆದೇಶ ನೀಡಿದೆ. ಕೇರಳದಲ್ಲಿ ಯಾವುದೇ ಸಂಘಟನೆ, ಯಾವುದೇ ಪಕ್ಷ ಪ್ರತಿಭಟನೆ ಮಾಡಲು 7 ದಿನದ ಮೊದಲೇ ನೋಟಿಸ್ ನೀಡಬೇಕು. ಈ ನೋಟಿಸ್‌ನಲ್ಲಿ ಪ್ರತಿಭಟನೆ, ಎಲ್ಲಿ, ಯಾವ ಕಾರಣಕ್ಕೆ, ಜನರ ಸಂಖ್ಯೆ, ಸಾಗುವ ದಾರಿ ಎಲ್ಲವನ್ನು ಉಲ್ಲೇಖಿಸಬೇಕು. ಯಾವುದೋ ಕಾರಣಕ್ಕೆ ತಕ್ಷಣವೇ ಪ್ರತಿಭಟನೆಗೆ ಕರೆ ನೀಡುವುದು ಸಾಧ್ಯವಿಲ್ಲ. ಈ ಆದೇಶವನ್ನು ಉಲ್ಲಂಘಿಸಿ ಪಿಎಫ್ಐ ಸೆಪ್ಟೆಬಂರ್ 23 ರಂದು ಪ್ರತಿಭಟನೆ ನಡೆಸಿತ್ತು. ಹಿಂಸಾತ್ಮಕ ಪ್ರತಿಭಟನೆಯಿಂದ ಸಾರಿಗೆ ಸಂಸ್ಥೆಗೆ 5 ಕೋಟಿ ರೂಪಾಯಿ ನಷ್ಟವಾಗಿತ್ತು. ಇದೀಗ ಈ ಹಣ ಭರಿಸಲು ತಾಕೀತು ಮಾಡಿದೆ.

ಪ್ರತಿಭಟನೆಗೆ ಕರೆ ನೀಡಿ ತಲೆಮರೆಸಿಕೊಂಡಿದ್ದ ಪಿಎಫ್ಐ ಅಬ್ದುಲ್ ಸತ್ತಾರ್ ಬಂಧನ!

ಈ ಪ್ರತಿಭಟನೆಯಲ್ಲಿ ಹಲವು ಖಾಸಗಿ ವಾಹನಗಳು, ಅಂಗಡಿ ಮುಂಗಟ್ಟುಗಳು ಧ್ವಂಸಗೊಂಡಿದೆ. ಇದೀಗ ಪ್ರತಿಭಟನೆಯಿಂದ ಹಾನಿಗೊಳಗಾದವರೆಲ್ಲಾ ಹೈಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದಾರೆ. ಹೀಗಾದಲ್ಲಿ ಪಿಎಫ್ಐ 10 ರಿಂದ 30 ಕೋಟಿ ರೂಪಾಯಿ ನಷ್ಟ ಪರಿಹಾರಕ್ಕೆ ತೆಗೆದಿಡಬೇಕಾದ ಅನಿವಾರ್ಯತೆ ಎದುರಾಗಿದೆ.

Follow Us:
Download App:
  • android
  • ios