ಪಿಎಫ್ಐ ಮೇಲಿನ ದಾಳಿ, ಮುಖಂಡರ ಬಂಧನ ವಿರೋಧಿಸಿ ಕೇರಳದಲ್ಲಿ ಹಿಂಸಾತ್ಮಕ ಪ್ರತಿಭಟನೆಗೆ ಕರೆ ನೀಡಿ ತಲೆಮರೆಸಿಕೊಂಡಿದ್ದ ನಿಷೇಧಿತ ಸಂಘಟನೆ ಕಾರ್ಯದರ್ಶಿ ಅಬ್ದುಲ್ ಸತ್ತಾರ್ ಅರೆಸ್ಟ್ ಆಗಿದ್ದಾನೆ. ಫೇಸ್‌ಬುಕ್‌ನಲ್ಲಿ ಓವರ್ ಸ್ಮಾರ್ಟ್ ಆದ ಅಬ್ದುಲ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ತಿರುವನಂತಪುರಂ(ಸೆ.28): ಭಯೋತ್ಪಾದನೆ, ದೇಶ ವಿರೋಧಿ ಚಟುವಟಿಕೆ ನಡೆಸುತ್ತಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ಸಂಘಟನೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಆದರೆ ಪಿಎಫ್ಐ ಮುಖಂಡರು, ಕಾರ್ಯಕರ್ತರ ಮೇಲಿನ ಕಾರ್ಯಾಚರಣೆ ನಿಂತಿಲ್ಲ. ತಲೆಮರೆಸಿಕೊಂಡಿರುವ ನಾಯಕರಿಗಾಗಿಗಿ ಹುಡುಕಾಟ ತೀವ್ರಗೊಂಡಿದೆ. ಕೇರಳದಲ್ಲಿ ಹಿಂಸಾತ್ಮಕ ಪ್ರತಿಭಟನೆಗೆ ಕರೆ ನೀಡಿ ತಲೆಮರೆಸಿಕೊಂಡಿದ್ದ ಪಿಎಫ್ಐ ಕಾರ್ಯದರ್ಶಿ ಅಬ್ದುಲ್ ಸತ್ತಾರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಕೇಂದ್ರ ಸರ್ಕಾರ ಪಿಎಫ್ಐ ನಿಷೇಧಿಸಿದ ಬಳಿಕ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ ಅಬ್ಬುಲ್ ಸತ್ತಾರ್ ತನ್ನು ಸ್ಥಳದ ಮಾಹಿತಿಯನ್ನು ಪರೋಕ್ಷವಾಗಿ ಪೊಲೀಸರಿಗೆ ನೀಡಿದ್ದ. ಇದೇ ಜಾಡನ್ನು ಹಿಡಿದ ಪೊಲೀಸರು ಕರುಂಗಪಲ್ಲಿಯಿಂದ ಅಬ್ದುಲ್ ಸತ್ತಾರ್‌ನನ್ನು ಬಂಧಿಸಿದ್ದಾರೆ. ಪಿಎಫ್ಐ ನಿಷೇಧಿಸಲಾಗಿದೆ. ದೇಶದ ಕಾನೂನು ಗೌರವಿಸುವ ಪ್ರಜೆಗಳಾಗಿರುವ ನಾವು ನಿರ್ಧಾರವನ್ನು ಒಪ್ಪಿಕೊಂಡಿದ್ದೇವೆ ಎಂದು ಬರೆದುಕೊಂಡಿದ್ದಾನೆ. ಈ ಪೋಸ್ಟ್ ಹಾಕಿದ ಕೆಲವೇ ಗಂಟೆಗಳಲ್ಲಿ ಅಬ್ದುಲ್ ಸತ್ತರ್‌ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಪಿಎಫ್ಐ(PFI) ಕಚೇರಿ, ನಾಯಕರು, ಕಾರ್ಯಕರ್ತರ ಮೇಲಿನ ದಾಳಿ(NIA Raids) ವಿರೋಧಿಸಿ ಸೆಪ್ಟೆಂಬರ್ 23 ರಂದು ಕೇರಳದಲ್ಲಿ ಹಿಂಸಾತ್ಮಕ ಪ್ರತಿಭಟನೆಗೆ(Kerala Protest) ಅಬ್ದುಲ್ ಸತ್ತರ್ ಕರೆ ನೀಡಿದ್ದ. ಈ ಪ್ರತಿಭಟನೆ ಭಾರಿ ಹಿಂಸಾರೂಪಕ್ಕೆ ತಿರುಗಿತ್ತು. ಕೇರಳ ಸಾರಿಗೆ ಸಂಸ್ಥೆಯ 75ಕ್ಕೂ ಹೆಚ್ಚು ಬಸ್‌ಗಳು ಧ್ವಂಸಗೊಂಡಿತ್ತು. ಹಲವು ಬಸ್‌ಗಳು ಹೊತ್ತಿ ಉರಿದಿತ್ತು. ಈ ಹಿಂಸಾತ್ಮಕ ಪ್ರತಿಭಟನೆ ನಡೆಸಿ ಬಂಧನ ಭೀತಿಯಿಂದ ಅಬ್ದುಲ್ ತಲೆಮರೆಸಿಕೊಂಡಿದ್ದ. ಆದರೆ ಕೇಂದ್ರ ಸರ್ಕಾರ ಪಿಎಫ್ಐನ(PFI) ಎಲ್ಲಾ ರೆಕ್ಕೆಗಳನ್ನು ಕತ್ತರಿಸಿತ್ತು. ಇಂದು ಮುಂಜಾನೆ ಸಂಘಟನೆಯನ್ನೇ ನಿಷೇಧಿಸಿತ್ತು. ಹೀಗಾಗಿ ಇನ್ನೇನು ಸಾಧ್ಯವಿಲ್ಲ ಎಂದು ಅರಿತಾಗ ನಾವು ಕಾನೂನಿಗೆ ಗೌರವ ನೀಡುವ ಪ್ರಜೆಗಳು ಎಂದು ಪೋಸ್ ನೀಡಿದ್ದಾನೆ. ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿ ಸಾಚಾ ಎಂದು ಬಿಂಬಿಸಲು ಹೊರಟಿದ್ದ. ಆದರೆ ತನ್ನ ಹಿಂದೆ ಪೊಲೀಸರು ಇದ್ದಾರೆ ಅನ್ನೋದನ್ನು ಪೋಸ್ ನೀಡುವ ವೇಳೆ ಮರೆತಿದ್ದ. ಇದರ ಬೆನ್ನಲ್ಲೇ ಅಬ್ದುಲ್ ಸತ್ತಾರ್ ಬಂಧನವಾಗಿದೆ.

ಪಿಎಫ್‌ಐ ಬ್ಯಾನ್‌ ಆಗಿರುವ ಸಂಘಟನೆ, ಪ್ರತಿಭಟನೆ ಮಾಡಿದ್ರೆ ಕ್ರಮ: ಪೊಲೀಸ್‌ ಹಿರಿಯ ಅಧಿಕಾರಿಗಳ ಎಚ್ಚರಿಕೆ!

ಅಜಿತ್‌ ದೋವಲ್‌ ಆಪರೇಷನ್‌
ಪಿಎಫ್‌ಐ ವಿರುದ್ಧದ ಕಾರ್ಯಾಚರಣೆಗೆ ಮೂರ್ನಾಲ್ಕು ತಿಂಗಳ ಹಿಂದೆಯೇ ಯೋಜನೆ ರೂಪಿತವಾದರೂ, ಅದನ್ನು ಜಾರಿಗೆ ತರುವ ಪ್ರಕ್ರಿಯೆಯನ್ನು ಪ್ರಮುಖವಾಗಿ ನಿರ್ವಹಿಸಿದವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌. ದೋವಲ್‌ ಅವರು ಕಾರಾರ‍ಯಚರಣೆ ಆರಂಭಿಸಿದ್ದು ಸೆಪ್ಟೆಂಬರ್‌ ಮೊದಲ ವಾರ. ಪ್ರಧಾನಿ ನರೇಂದ್ರ ಮೋದಿ ಅವರು ಐಎನ್‌ಎಸ್‌ ವಿಕ್ರಾಂತ್‌ ಯುದ್ಧವಿಮಾನಗಳ ನೌಕೆಯನ್ನು ಲೋಕಾರ್ಪಣೆ ಮಾಡಲು ಸೆ.2ರಂದು ಕೇರಳದ ಕೊಚ್ಚಿಗೆ ಆಗಮಿಸಿದ್ದರು. ಆ ವೇಳೆ, ಅಜಿತ್‌ ದೋವಲ್‌ ಅವರು ಪಿಎಫ್‌ಐ ಸಾಕಷ್ಟುಪ್ರಭಾವ ಹೊಂದಿರುವ ಕೇರಳದಲ್ಲಿ, ಕೇರಳ ಪೊಲೀಸರ ಜತೆ ಸಭೆಗಳನ್ನು ನಡೆಸಿ, ಪಿಎಫ್‌ಐ ಬಗ್ಗೆ ಸಮಾಲೋಚನೆ ನಡೆಸಿದ್ದರು. ಬಳಿಕ ಮಹಾರಾಷ್ಟ್ರದಲ್ಲೂ ಹಲವು ಕೃತ್ಯಕ್ಕೆ ಪಿಎಫ್‌ಐ ಸಂಚು ರೂಪಿಸಿತ್ತು ಎನ್ನಲಾಗಿದ್ದು, ಮುಂಬೈನ ರಾಜಭವನದಲ್ಲಿ ಉಳಿದುಕೊಂಡು ಅಲ್ಲೂ ಅಧಿಕಾರಿಗಳ ಜತೆಗೆ ಸಭೆ ನಡೆಸಿದ್ದರು. ಅದು ಈಗ ಫಲ ನೀಡಿದೆ.

ಪಿಎಫ್ಐ ನಿಷೇಧಕ್ಕೂ ಮೊದಲು ಮುಸ್ಲಿಂ ಸಂಘಟನೆ ಜೊತೆ ಸಭೆ ನಡೆಸಿದ್ದ ಕೇಂದ್ರ ಸರ್ಕಾರ!

ಭಯೋತ್ಪಾದನೆ ಕೃತ್ಯ ಮತ್ತು ಅದಕ್ಕೆ ಹಣಕಾಸಿನ ನೆರವು ನೀಡಿದ ಪ್ರಕರಣದಲ್ಲಿ 5 ದಿನಗಳ ಹಿಂದಷ್ಟೇ ಎನ್‌ಐಎ ನೇತೃತ್ವದಲ್ಲಿ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ (ಪಿಎಫ್‌ಐ) 100ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದ ಪೊಲೀಸರು, ಮಂಗಳವಾರ ಎರಡನೇ ಸುತ್ತಿನಲ್ಲಿ ದೇಶದ 8 ರಾಜ್ಯಗಳಲ್ಲಿ ದಾಳಿ ನಡೆಸಿ 250ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ. ಇತ್ತೀಚಿನ ಎನ್‌ಐಎ ದಾಳಿಗೆ ಪ್ರತಿಕಾರವಾಗಿ ದೇಶವ್ಯಾಪಿ ಕೋಮುಗಲಭೆ ಸೃಷ್ಟಿಸಲು ಪಿಎಫ್‌ಐ ಸಂಚು ರೂಪಿಸಿತ್ತು ಎಂಬ ಕಾರಣಕ್ಕಾಗಿ ಈ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.