ಚೀನಾ ವೈರಸ್: ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಲು ಕೇರಳ ಆರೋಗ್ಯ ಸಚಿವರ ಸಲಹೆ
ಚೀನಾದಲ್ಲಿ ವ್ಯಾಪಕವಾಗಿ ಹರಡುತ್ತಿರುವ ವೈರಲ್ ಜ್ವರ ಮತ್ತು ಉಸಿರಾಟದ ಸೋಂಕಿನ ಕುರಿತು ರಾಜ್ಯ ಸರ್ಕಾರ ನಿಗಾ ಇಟ್ಟಿದೆ. ಈಗಲೇ ಚೀನಾ ವೈರಸ್ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.
ತಿರುವನಂತಪುರಂ (ಜ.05): ಚೀನಾದಲ್ಲಿ ವ್ಯಾಪಕವಾಗಿ ಹರಡುತ್ತಿರುವ ವೈರಲ್ ಜ್ವರ ಮತ್ತು ಉಸಿರಾಟದ ಸೋಂಕಿನ ಕುರಿತು ರಾಜ್ಯ ಸರ್ಕಾರ ನಿಗಾ ಇಟ್ಟಿದೆ. ಈಗಲೇ ಚೀನಾ ವೈರಸ್ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ. ಇದೇ ವೇಳೆ ಮಕ್ಕಳು, ವಯಸ್ಕರು, ಗರ್ಭಿಣಿಯರು ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡುವ ವೇಳೆ ಮಾಸ್ಕ್ ತೊಡುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ. ಚೀನಾದಲ್ಲಿ ಸಾಂಕ್ರಾಮಿಕ ರೂಪದಲ್ಲಿ ಅಥವಾ ತೀವ್ರವಾಗಿ ಇತರೆ ಪ್ರದೇಶಗಳಿಗೆ ಹರಡುವ ವೈರಸ್ ಪತ್ತೆಯಾಗಿದೆ ಎಂಬ ಕುರಿತು ಈವರೆಗೆ ಯಾವುದೇ ವರದಿ ಬಂದಿಲ್ಲ.
ಮಲಯಾಳಿಗಳು ಜಗತ್ತಿನಾದ್ಯಂತ ಹರಡಿರುವುದು ಹಾಗೂ ವಲಸಿಗರು ಆಗಾಗ ಚೀನಾ ಸೇರಿ ವಿವಿಧೆಡೆಯಿಂದ ರಾಜ್ಯಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಈ ಸೋಂಕಿನ ಕುರಿತು ಹೆಚ್ಚಿನ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಫೇಸ್‌ಬುಕ್‌ನಲ್ಲಿ ಮಾಡಿದ ಪೋಸ್ಟ್‌ನಲ್ಲಿ ಜಾರ್ಜ್ ತಿಳಿಸಿದ್ದಾರೆ. ನಾವು ಚೀನಾದ ಪರಿಸ್ಥಿತಿ ಮೇಲೆ ಕಣ್ಣಿಟ್ಟಿದ್ದೇವೆ. ಇತರೆ ಪ್ರದೇಶಗಳಿಗೆ ವ್ಯಾಪಕವಾಗಿ ಹರಡುವ ಸಾಂಕ್ರಾಮಿಕ ರೋಗ ಪತ್ತೆಯಾದರೆ ನಾವು ಅದನ್ನು ತೀವ್ರಗತಿಯಲ್ಲಿ ಹರಡುವುದನ್ನು ತಡೆಯಲು ಮುಂದಾಗಬೇಕಾಗುತ್ತದೆ. ಇದೇ ವೇಳೆ ಸಚಿವರು ಗರ್ಭಿಣಿಯರು, ಮಕ್ಕಳು ಮತ್ತು ಹಿರಿಯರಿಗೆ ಇಂಥ ಪರಿಸ್ಥಿತಿಯಲ್ಲಿ ಹೆಚ್ಚಿನ ಜಾಗೃತೆ ವಹಿಸುವಂತೆ ಕಿವಿಮಾತು ಹೇಳಿದ ಅವರು, ಮಾಸ್ಕ್ ಹಾಕುವಂತೆ ಸಲಹೆ ನೀಡಿದ್ದಾರೆ.
ವಿಶ್ವದಾದ್ಯಂತ ಮತ್ತೊಂದು ಎಚ್‌ಎಂಪಿವಿ ವೈರಸ್ ಆತಂಕ: ಚೀನಾದಲ್ಲಿ ಇದೀಗ ಏನಾಗ್ತಿದೆ?
ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ(ಎನ್‌ಸಿಡಿಸಿ)ವು ದೇಶದಲ್ಲಿ ಉಸಿರಾಟದ ಮತ್ತು ಚಳಿಗಾಲದ ಸಮಯದಲ್ಲಿ ಹರಡುವ ಶೀತಜ್ಞರ ಕುರಿತು ನಿಗಾ ಇಟ್ಟಿದೆ. ಚೀನಾದಲ್ಲಿ ಎಚ್‌ಎಂಪಿವಿ ಸೋಂಕು ಉಲ್ಬಣಗೊಂಡ ಬಳಿಕ ಅಂತಾರಾಷ್ಟ್ರೀಯ ಏಜೆನ್ಸಿಗಳ ಜತೆಗೂ ನಿರಂತರ ಸಂಪರ್ಕದಲ್ಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಪಾನ್‌ಗೂ ವೈರಸ್ ಲಗ್ಗೆ: ಚೀನಾದಲ್ಲಿ ಕೊರೋನಾ ವೈರಸ್ ಮಾರಿಯ ಹೆಚ್‌ಎಂಪಿವಿ (ಹ್ಯೂಮನ್ ಮೆಟಾನ್ಯುಮೋ ವೈರಸ್) ಸೋಂಕು ಹರಡಿ ಭಾರೀ ಆತಂಕ ಹುಟ್ಟುಹಾಕಿರುವಾಗಲೇ, ಅತ್ತ ಜಪಾನ್ ಮತ್ತು ಸಿಂಗಾಪುರ ದೇಶಗಳಲ್ಲೂ ಇದೇ ಸೋಂಕಿನ ವೈರಸ್ ಭಾರೀ ಪ್ರಮಾಣದಲ್ಲಿ ವ್ಯಾಪಿಸಿರುವ ಸುದ್ದಿ ಹೊರಬಿದ್ದಿದೆ. ಜಪಾನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ ಮಾಧ್ಯಮ ವರದಿ ಪ್ರಕಾರ, ಡಿ.15ರ ವರೆಗೆ ಒಂದೇ ವಾರದಲ್ಲಿ 94,259 ಜನರು ಸೋಂಕಿಗೆ ತುತ್ತಾಗಿದ್ದಾರೆ. ಇದರೊಂದಿಗೆ ಪ್ರಸ್ತುತ ಜಪಾನ್‌ನಲ್ಲಿರುವ ಸೋಂಕಿಗೆ ತುತ್ತಾದವರ ಸಂಖ್ಯೆ 718,000ಕ್ಕೆತಲುಪಿದೆ.
ಮತ್ತೊಂದು ಮಹಾಮಾರಿಗೆ ಚೀನಾ ಗಡಗಡ: ರೋಗಿಗಳಿಂದ ಕಿಕ್ಕಿರಿದ ಆಸ್ಪತ್ರೆಗಳು, ಸ್ಮಶಾನಗಳಲ್ಲೂ ಕ್ಯೂ!
ಸದ್ಯ ದೇಶದಲ್ಲಿ ಚಳಿಗಾಲ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಸೋಂಕು ಇನ್ನಷ್ಟು ವ್ಯಾಪಕವಾಗುವ ಆತಂಕವೂ ಎದುರಾಗಿದೆ. ಇನ್ನೊಂದೆಡೆ ಚೀನಾದ ನೆರೆಯ ದೇಶವಾದ ಹಾಂಕಾಂಗ್‌ನಲ್ಲೂ ಸೋಂಕು ವ್ಯಾಪಿಸಿದೆ. ಚೀನಾ ಹಾಗೂ ಜಪಾನ್‌ನಷ್ಟು ಅಲ್ಲದಿದ್ದರೂ, 1000ಕ್ಕೂ ಹೆಚ್ಚು ಹೆಚ್‌ಎಂಪಿವಿ ಪ್ರಕರಣಗಳ ದಾಖಲಾಗಿವೆ. ಈ ಹಿಂದೆ ಕೋವಿಡ್ ವೈರಸ್ ಚಳಿಗಾಲದ ವೇಳೆ ಚೀನಾದಲ್ಲಿ ವ್ಯಾಪಕವಾದಾಗ ಅತ್ತ ಜಪಾನ್ ಮತ್ತು ಹಾಂಕಾಂಗ್‌ನಲ್ಲೂ ಹೆಮ್ಮಾರಿಯಂತೆ ಹರಡಿ ಸಾವಿರಾರು ಜನರನ್ನು ಬಲಿಪಡೆದಿತ್ತು.