Asianet Suvarna News Asianet Suvarna News

ಮೂಲಭೂತವಾದಿಗಳಿಗೆ ಕೇರಳ ಸುರಕ್ಷಿತ ತಾಣವಾಗಿದೆ: ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌

ಕರ್ನಾಟಕದಲ್ಲಿ ಬಿಜೆಪಿ ಕಾರ್ಯಕರ್ತರ ಕೊಲೆಯಾಗುತ್ತಲೇ ಇದೆ. ಹಾಗೂ, ಈ ಕೊಲೆಗಳನ್ನು ಮಾಡುವ ಮೂಲಭೂತ ಅಂಶಗಳಿಗೆ ಕೇರಳ ಸುರಕ್ಷಿತ ತಾಣವಾಗಿದೆ ಎಂದು ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಹೇಳಿದ್ದಾರೆ.

kerala has become safe haven for radicals says union minister rajeev chandrasekhar ash
Author
Bangalore, First Published Jul 28, 2022, 6:24 PM IST

ಕರ್ನಾಟಕದಲ್ಲಿ ಬಿಜೆಪಿ ಕಾರ್ಯಕರ್ತರ ಕೊಲೆಯಾಗುತ್ತಲೇ ಇದೆ. ಹಾಗೂ, ಈ ಕೊಲೆಗಳನ್ನು ಮಾಡುವ ಮೂಲಭೂತ ಅಂಶಗಳಿಗೆ ಕೇರಳ ಸುರಕ್ಷಿತ ತಾಣವಾಗಿದೆ ಎಂದು ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಹೇಳಿದ್ದಾರೆ. ಕೇರಳದ ಪಿಣರಾಯಿ ವಿಜಯನ್‌ ನೇತೃತ್ವದ ಎಡಪಂಥೀಯ ಸರ್ಕಾರದ ಅವಧಿಯಲ್ಲಿ ಇತಹ ಕೊಲೆಗಳು ಹೆಚ್ಚಾಗಿ ನಡೆಯುತ್ತಿವೆ ಎಂದು ಸಹ ಆರೋಪಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್‌ ನೆಟ್ಟಾರುವಿನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಹಿನ್ನೆಲೆ ಕರ್ನಾಟಕದಲ್ಲಿ ನಡೆಯುತ್ತಿರುವ ದ್ವೇಷಪೂರಿತ ಹತ್ಯೆಗಳಿಗೆ ಕೇರಳ ಸುರಕ್ಷಿತ ತಾಣವಾಗಿದೆ ಎಂದು ಬಿಜೆಪಿ ಆರೋಪಿಸಿದೆ. 
ಪ್ರವೀಣ್‌ ನೆಟ್ಟಾರು ಕೊಲೆಗಾರರು ಕೇರಳದಲ್ಲಿ ನೋಂದಣಿ ಮಾಡಿದ ಮೋಟರ್‌ಬೈಕನ್ನು ಹತ್ಯೆಗೆ ಬಳಸಿದ್ದಾರೆ ಎಂಬುದು ಸಾಕ್ಷ್ಯದಲ್ಲಿ ಬಹಿರಂಗವಾಗಿದೆ. ಈ ಹಿನ್ನೆಲೆ ಪಿಣರಾಯಿ ವಿಜಯನ್‌ ನೇತೃತ್ವದ ಕೇರಳ ಸರ್ಕಾರ ಕರ್ನಾಟಕ ಸರ್ಕಾರದೊಂದಿಗೆ ತನಿಖೆಗೆ ಸಹಕರಿಸಬೇಕು. ಹಾಗೂ, ಆರೋಪಿಗಳನ್ನು ಪತ್ತೆಹಚ್ಚಿ ಅವರನ್ನು ಬಂಧಿಸಬೇಕೇ ಹೊರತು ಅವರನ್ನು ರಕ್ಷಿಸಬಾರದು ಎಂದು ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಹೇಳಿದ್ದಾರೆ.

SDPI, PFI ಬಿಜೆಪಿ B ಟೀಂ, ಎರಡೂ ಸಂಘಟನೆಗಳಿಗೂ ಹಣ ಸಂದಾಯ: ಗಂಭೀರ ಆರೋಪ

ಪಿಎಫ್‌ಐ ಹಾಗೂ ಎಸ್‌ಡಿಪಿಐನಂತಹ ಮೂಲಭೂತವಾದಿ ಅಂಶಗಳಿಗೆ ಕೇರಳದ ಪಿಣರಾಯಿ ವಿಜಯನ್‌ ಸರ್ಕಾರ ಸುರಕ್ಷಿತ ತಾಣವಾಗಿದೆ. ಕೇರಳ ಸರ್ಕಾರದ ಕೆಲವು ಭಾಗಗಳಿಂದ ಈ ಅಂಶಗಳಿಗೆ ಸಿಗುತ್ತಿರುವ ರಾಜಕೀಯ ರಕ್ಷಣೆಯಿಂದಾಗಿ ಹೀಗಾಗಿದೆ. ಇದರಿಂದ ಜನರು ಈ ರೀತಿಯ ಹತ್ಯೆಗಳನ್ನು ಮಾಡಲು ಸುಲಭವಾಗಿಸುತ್ತದೆ, ಏಕೆಂದರೆ ನಾವು ರಕ್ಷಣೆಗೊಳಗಾಗುತ್ತೇವೆ ಎಂದು ಅವರು ನಂಬುತ್ತಾರ,” ಎಂದು ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ತಿಳಿಸಿದರು.

ಅಲ್ಲದೆ, ಕರ್ನಾಟಕ ಸರ್ಕಾರ ಆರೋಪಿಗಳನ್ನು ಬೇಟೆಯಾಡುತ್ತದೆ. ಕೇರಳ ಸರ್ಕಾರ ಕರ್ನಾಟಕದೊಂದಿಗೆ ಸಹಕರಿಸಬೇಕು. ಈ ಆರೋಪಿಗಳನ್ನು ಪತ್ತೆಹಚ್ಚಬೇಕು ಹಾಗೂ ಅವರನ್ನು ಬಂಧಿಸಬೇಕೇ ಹೊರತು ರಕ್ಷಿಸಬಾರದು ಎಂದೂ ಹೇಳಿದರು.

ಪಿಎಫ್‌ಐ ಮುಸಲ್ಮಾನ ಸಂಘಟನೆಯಾಗಿದೆ ಹಾಗೂ ಎಸ್‌ಡಿಪಿಐ ಅದರ ರಾಜಕೀಯ ವಿಭಾಗವಾಗಿದೆ. ಈ ಹಿನ್ನೆಲೆ ಪಿಎಫ್‌ಐ ಇಂತಹ ಘಟನೆಗಳಿಗೆ ಕಾರಣವಾಗಿದೆ ಹಾಗೂ ದೇಶದಲ್ಲಿ ಕೋಮು ದ್ವೇಷಗಳನ್ನು ಹರಡುತ್ತಿದೆ ಎಂದು ಬಿಜೆಪಿ ಆರೋಪ ಮಾಡುತ್ತಲೇ ಬರುತ್ತದೆ. ಇನ್ನೊಂದೆಡೆ, ದೇಶದ ವಿವಿಧ ಬಾಗಗಳಲ್ಲಿ ವಿವಿಧ ಆರೋಪಗಳಿಗೆ ಬಂಧಿತರಾದ ಪಿಎಫ್ಐ ಸದಸ್ಯರ ವಿರುದ್ಧದ ಆರೋಪಗಳನ್ನು ತಳ್ಳಿಹಾಕುತ್ತಲೇ ಇರುತ್ತದೆ.

ದಕ್ಷಿಣ ಕನ್ನಡದ ಬಿಜೆಪಿ ಯುವ ಮೋರ್ಚಾ ಸಮಿತಿ ಸದಸ್ಯ ಪ್ರವೀಣ್‌ ನೆಟ್ಟಾರುವನ್ನು ಮಂಗಳವಾರ ರಾತ್ರಿ ಬೈಕಿನಲ್ಲಿ ಬಂದ ಆರೋಪಿಗಳು ಬಿಜೆಪಿ ಕಾರ್ಯಕರ್ತನ ಅಂಗಡಿಯಯ ಎದುರೇ ಹತ್ಯೆ ಮಾಡಿದ್ದರು. ಬಿಜೆಪಿಯ ಹಿಂದೂ ಕಾರ್ಯಕರ್ತನನ್ನು ಟಾರ್ಗೆಟ್‌ ಮಾಡಿ ಹತ್ಯೆ ಮಾಡಲಾಗಿದೆ ಎಂದು ಕೆಲ ಬಲಪಂಥೀಯ ಸಂಘಟನೆಗಳು ಆರೋಪಿಸಿವೆ. ಏಕೆಂದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ರೀತಿ ಹತ್ಯೆ ನಡೆದಿರುವುದು ಇದೇ ಮೊದಲೇನಲ್ಲ. ಈ ಮಧ್ಯೆ, ಕರ್ನಾಟಕ ಪೊಲೀಸರು ಗುರುವಾರ ಝಾಕೀರ್‌ (29)ಹಾಗೂ ಮೊಹಮ್ಮದ್‌ ಶಫೀಕ್‌ (27) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಹತ್ಯೆ ಪ್ರಕರಣದಲ್ಲಿ ಇವರು ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ. 

ಪ್ರವೀಣ್ ಹತ್ಯೆ: ಕೇರಳದ ಮತೀಯ ಸಂಘಟನೆಗಳಿಗೆ ಸ್ಥಳೀಯರ ಸಾಥ್...?

ಕೇರಳದಲ್ಲೂ 22 ಜನರ ಹತ್ಯೆ
ಇನ್ನು, ಕೆರಳದಲ್ಲೂ ಮೂಲಭೂತವಾದಿ ಸಂಘಟನೆಗಳು ಕೊಲೆಗಳನ್ನು ಮಾಡುತ್ತಿವೆ. ಪಿಣರಾಯಿ ವಿಜಯನ್‌ ನೇತೃತ್ವದ ಈ ಸರ್ಕಾರದ ಅವಧಿಯಲ್ಲೇ 22ಕ್ಕೂ ಹೆಚ್ಚು ಹತ್ಯೆಗಳು ನಡೆದಿವೆ ಎಂದೂ ರಾಜೀವ್‌ ಚಂದ್ರಶೇಖರ್‌ ಹೇಳಿಕೊಂಡಿದ್ದಾರೆ. 

ಪಿಎಫ್‌ಐ ಸಂಘಟನೆಯನ್ನು ಕೇಂದ್ರ ಸರ್ಕಾರ ನಿಷೇಧ ಮಾಡುವ ಬಗ್ಗೆ ಪರಿಶೀಲನೆ ಮಾಡುತ್ತದಾ ಎಂದು ಕೇಳಿದ ಪ್ರಶ್ನೆಗೆ, ಈ ಬಗ್ಗೆ ಸರ್ಕಾರ ನಿರ್ಧಾರ ಮಾಡುತ್ತದೆ. ಆದರೆ ಪಿಎಫ್‌ಐ ಹಾಗೂ ಎಸ್‌ಡಿಪಿಐ ಭಾರತ ಸರ್ಕಾರವನ್ನು ಟಾರ್ಗೆಟ್‌ ಮಾಡುವ ಪ್ರತಿ ಚಳುವಳಿಯನ್ನೂ ಬೆಂಬಲಿಸುತ್ತಿದೆ ಎಂಬುದಕ್ಕೆ ಸಾಕಷ್ಟು ದಾಖಲೆಗಳಿವೆ ಎಂದೂ ಕೇಂದ್ರ ಸಚಿವ ಹಾಗೂ ಬಿಜೆಪಿ ಸಂಸದರಾದ ರಾಜೀವ್‌ ಚಂದ್ರಶೇಖರ್‌ ಹೇಳಿದ್ದಾರೆ. 

Follow Us:
Download App:
  • android
  • ios