ತಿರುವನಂತಪುರಂ (ಅ. 30): ದೇಶ ಸಣ್ಣ ರಾಜ್ಯಗಳಲ್ಲಿ ಒಂದಾದ ಕೇರಳದಲ್ಲಿ ಕಳೆದ ಮೂರೂವರೆ ವರ್ಷಗಳಲ್ಲಿ ಬರೋಬ್ಬರಿ 45 ಸಾವಿರ ಕೋಟಿ ಮೌಲ್ಯದಷ್ಟುಮದ್ಯ ಮಾರಾಟವಾಗಿದೆ ಎಂದು ವರದಿಯೊಂದು ತಿಳಿಸಿದೆ. ಎಲ್‌ಡಿಎಫ್‌ ಸರ್ಕಾರ, ಕಡಿಮೆ ಮದ್ಯ ಪ್ರಮಾಣ ಇರುವ ಫ್ರೂಟ್ ವೈನ್‌ ತಯಾರಿಕೆಗೆ ಅನುಮತಿ ನೀಡಿದ ಬಳಿಕ ಮದ್ಯ ಮಾರಾಟದಲ್ಲಿ ಗಣನೀಯ ಏರಿಕೆಯಾಗಿದೆ ಎಂದು ಸರಕಾರೇತರ ಸಂಸ್ಥೆ ‘ದಿ ಪ್ರಾಪರ್‌ ಚಾನೆಲ್‌’ ಆರ್‌ಟಿಐ ನಡಿ ಪಡೆದುಕೊಂಡ ಮಾಹಿತಿಯಿಂದ ಗೊತ್ತಾಗಿದೆ.

ಕೊಳೆತ ತರಕಾರಿ: ತಾಜ್ ವೆಸ್ಟ್ ಎಂಡ್ ಗೆ ದಂಡ

ತಲಾ ಮದ್ಯ ಸೇವನೆ ಪ್ರಮಾಣದಲ್ಲಿ ಕೇರಳ ಮೊದಲ ಸ್ಥಾನದಲ್ಲಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಓಣಂನಲ್ಲಿ ಮದ್ಯ ಸೇವನೆ ಪ್ರಮಾಣ 457 ಕೋಟಿಯಿಂದ 487 ಕೋಟಿಗೆ ಏರಿಕೆಯಾಗಿದೆ. ಬಾರ್‌ಗಳ ಸಂಖ್ಯೆಯಲ್ಲಿ 20 ಪಟ್ಟು ಹೆಚ್ಚಳವಾಗಿದ್ದು, ಉಮ್ಮನ್‌ ಚಾಂಡಿ ಇದ್ದಾಗ 29 ಇದ್ದ ಬಾರ್‌ಗಳ ಸಂಖ್ಯೆ ಪಿಣರಾಯಿ ಅವಧಿಯಲ್ಲಿ 540ಕ್ಕೇರಿದೆ. ಪ್ರತೀ ವರ್ಷ ಮದ್ಯ ಮಾರಾಟದಲ್ಲಿ ಶೇ.10 ರಷ್ಟುಏರಿಕೆಯಾಗುತ್ತಿದ್ದು, 2017ರಲ್ಲಿ ಬಾರ್‌ ಹೊಟೆಲ್‌ಗಳ ಮರು ಆರಂಭಕ್ಕೆ ಸರ್ಕಾರ ಅಸ್ತು ನೀಡಿದ ಬಳಿಕ. 2019-19ನೇ ಸಾಲಿನಲ್ಲಿ ಮದ್ಯ ಮಾರಾಟ ಶೇ. 14.5ರಷ್ಟುಏರಿಕೆಯಾಗಿದೆ.

ಮದ್ಯದಿಂದ ಸರ್ಕಾರಕ್ಕೆ ಬಂದ ಆದಾಯ (ಕೋಟಿಗಳಲ್ಲಿ)

2015-16 11,557.64

2016-17 12,142.68

2017-18 12,937.20

2019-19 14,508.10