ದೇಶದ ಹಳೆಯ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೆಲಸ ಮಾಡಬೇಕಾಗಿದೆ. ಹಾಗಂತ ನಾವು ಹಿಂದೆ ಹೋಗಬೇಕಾದ ಅಗತ್ಯವಿಲ್ಲ. ಹಿಂದಿದ್ದ ಸನಾತನ ತತ್ವಗಳನ್ನು ಮರಳಿ ತರಬೇಕು ಮತ್ತು ಇದು ಶಿಕ್ಷಣವಿಲ್ಲದೆ ಸಾಧ್ಯವಿಲ್ಲ ಎಂದು ಕೇರಳ ರಾಜ್ಯಪಾಲ ಆರಿಫ್ ಖಾನ್ ಹೇಳಿದ್ದಾರೆ.

ಶಹಜಹಾನ್‌ಪುರ (ಮೇ.8): ಭಾರತದಲ್ಲಿ ಸರಿಯಾದ ಶಿಕ್ಷಣವನ್ನು (proper education) ಹರಡುವ ಮೂಲಕ ಭಾರತದ ಹಳೆಯ ಸಂಸ್ಕೃತಿಯನ್ನು (old culture ) ಪುನರುಜ್ಜೀವನಗೊಳಿಸುವ ಮತ್ತು 'ಸನಾತನ ಧರ್ಮ' ತತ್ವಗಳನ್ನು (Sanatan dharma principles) ಪುನಃಸ್ಥಾಪಿಸುವ ಅಗತ್ಯವನ್ನು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ (Kerala Governor Arif Mohammad Khan ) ಶನಿವಾರ ಒತ್ತಿ ಹೇಳಿದರು.

ಜಿಲ್ಲೆಯ ಕಲಾನ್ ಪಟ್ಟಣದಲ್ಲಿ ಶಾಲೆಯೊಂದನ್ನು ಉದ್ಘಾಟಿಸಿದ ಬಳಿಕ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, "ದೇಶದ ಹಳೆಯ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೆಲಸ ಮಾಡಬೇಕಾಗಿದೆ. ಹಾಗಂತ ನಾವು ಹಿಂದೆ ಹೋಗಬೇಕಾದ ಅಗತ್ಯವಿಲ್ಲ. ಹಿಂದಿದ್ದ ಸನಾತನ ತತ್ವಗಳನ್ನು ಮರಳಿ ತರಬೇಕು ಮತ್ತು ಇದು ಶಿಕ್ಷಣವಿಲ್ಲದೆ ಸಾಧ್ಯವಿಲ್ಲ ಎಂದುಹೇಳಿದ್ದಾರೆ. 

ಸ್ವಾಮಿ ವಿವೇಕಾನಂದರು ಮಾನವ ಜೀವನದ ಉದ್ದೇಶ ಜ್ಞಾನದ ಸಾಧನೆ, ಮತ್ತು ವಿನಯವು ಜ್ಞಾನದ ಫಲಿತಾಂಶವಾಗಿದೆ ಎಂದು ಹೇಳಿದ್ದರು ಎಂದಿದ್ದಾರೆ. ವಿನಮ್ರತೆಯನ್ನು ಹೊಂದಿರುವ ಯಾರನ್ನೂ ಕೀಳಾಗಿ ಕಾಣಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಖಾಸಗಿ ಶಾಲೆಯ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಉಮೇಶ್ ಪ್ರತಾಪ್ ಸಿಂಗ್, ಪೊಲೀಸ್ ವರಿಷ್ಠಾಧಿಕಾರಿ ಎಸ್ ಆನಂದ್ ಮತ್ತು ಶಾಸಕ ಹರಿ ಪ್ರಕಾಶ್ ವರ್ಮಾ ಉಪಸ್ಥಿತರಿದ್ದರು.

ಏಕರೂಪ ನಾಗರಿಕ ಸಂಹಿತೆಗೆ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ವಿರೋಧದ ಬಗ್ಗೆಯೂ ಮಾತನಾಡಿದ ಅವರು, ನಾವು ಸ್ವತಂತ್ರ ದೇಶ ಮತ್ತು ಪ್ರಜಾಪ್ರಭುತ್ವ ಸಮಾಜದಿಂದ ಬಂದವರು ಎಂದು ಹೇಳಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ ಎಂದರು. ನಾನೀಗ ಸಾಂವಿಧಾನಿಕ ಹುದ್ದೆಯಲ್ಲಿದ್ದೇನೆ. ಆದ್ದರಿಂದ ಪ್ರಸ್ತುತ ವಿಷಯಗಳ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಕಯಂಗಂಜ್‌ನ ಕುಬೇರ್‌ಪುರ ಗ್ರಾಮದಲ್ಲಿರುವ ತನ್ನ ಸ್ನೇಹಿತ ಇರ್ಫಾನ್ ಖಾನ್ ಅವರ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇರಳ ರಾಜ್ಯಪಾಲರು, ಸಾಮಾನ್ಯವಾಗಿ ಹೆಚ್ಚಿನ ವಿಷಯಗಳ ಬಗ್ಗೆ ತಮ್ಮ ನಿಷ್ಠುರ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ, ಈ ಬಾರಿ ಪ್ರತಿ ವಿಷಯದ ಬಗ್ಗೆ ಪ್ರತಿಕ್ರಿಯಿಸುವುದನ್ನು ತಪ್ಪಿಸಿದರು. "ಜ್ಞಾನವಾಪಿ ಮಸೀದಿಯಲ್ಲಿ ಸಮೀಕ್ಷೆಗೆ ವಿರೋಧ ವ್ಯಕ್ತವಾದ ಮೇಲೂ, ಅದರ ಬಗ್ಗೆ ನನಗೆ ಗೊತ್ತಿಲ್ಲ" ಎಂದು ಹೇಳಿದರು. ಧ್ವನಿವರ್ಧಕದಲ್ಲಿ ಅಜಾನ್ ಗೆ ವಿರೋಧ ವ್ಯಕ್ತವಾಗುತ್ತಿರುವ ಬಗ್ಗೆ ಮಾತನಾಡಿದ ಅವರು, ಅಜಾನ್ ಹೇಳುವುದನ್ನಿ ನಿಲ್ಲಿ ಎಂದು ಯಾರು ಹೇಳಿದ್ದಾರೆ. ಧ್ವನಿವರ್ಧಕಗಳನ್ನು ಮಾತ್ರವೇ ತೆಗೆದುಹಾಕಿ ಎಂದು ಹೇಳಿದ್ದಾರೆ ಎಂದರು. ಅದಲ್ಲದೆ, ಇದು ನ್ಯಾಯಾಲಯದ ವಿಚಾರವಾಗಿದೆ. ಈ ದೇಶವು ಇಲ್ಲಿನ ಕಾನೂನು ಹಾಗೂ ಸಂವಿಧಾನದಿಂದ ನಡೆಸಲ್ಪಡುತ್ತದೆ ಎನ್ನುವುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು ಎಂದರು. . ಹೊಸ ಶಿಕ್ಷಣ ನೀತಿಯಿಂದ ಮದರಸಾಗಳಲ್ಲಿ ಸಿಬಿಎಸ್‌ಇ ಪಠ್ಯಕ್ರಮವನ್ನು ಪರಿಚಯಿಸುವ ಸಾಧ್ಯತೆಯ ಕುರಿತು ಮಾತನಾಡಿದ ಅವರು, ಅದರಲ್ಲೇನು ತಪ್ಪಿದೆ ಎಂದರು. ಅದಲ್ಲದೆ, ದೇಶದ ಆಗುಹೋಗುತ್ತಿರುವ ಪ್ರತಿ ವಿಚಾರಗಳಿಗೂ ನಾನು ಪ್ರತಿಕ್ರಿಯೆ ನೀಡುವುದು ನನ್ನ ಹುದ್ದೆಗೆ ಘನತೆ ತರವುದಿಲ್ಲ ಎಂದೂ ಹೇಳಿದರು.ಮುಂದಿನ 10-15 ವರ್ಷಗಳಲ್ಲಿ ಭಾರತ ವಿಶ್ವದಲ್ಲೇ ದೊಡ್ಡ ಶಕ್ತಿಯಾಗಲಿದೆ ಎಂಬುದನ್ನು ಜಗತ್ತು ಅರಿತುಕೊಳ್ಳುತ್ತಿದೆ ಎಂದು ಹೇಳಿದರು.

Boycott Muslim Jewellery Shop ಕೇರಳಕ್ಕೆ ಹೋಗಿ ಹೋರಾಡುತ್ತೇನೆಂದ ಮುತಾಲಿಕ್

ಈ ನಡುವೆ, ಇಸ್ಲಾಮಿಕ್‌ ಮೂಲಭೂತವಾತದ ವಿರುದ್ಧ ಗಟ್ಟಿದನಿಯಲ್ಲಿ ಮಾತನಾಡುವ ಛಾತಿ ಹೊಂದಿರುವ ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ಅವರನ್ನು ರಾಷ್ಟ್ರಪತಿ ಅಭ್ಯರ್ಥಿ ಮಾಡಲು ಬಿಜೆಪಿ ಚಿಂತನೆ ನಡೆಸುತ್ತಿದೆ ಎಂದೂ ವರದಿಯಾಗಿದೆ.

ಕೇರಳ ರಾಜ್ಯಪಾಲ ಖಾನ್‌ ಬಿಜೆಪಿ ರಾಷ್ಟ್ರಪತಿ ಅಭ್ಯರ್ಥಿ?

2002ರಲ್ಲಿ ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ವಿಜ್ಞಾನಿ ಅಬ್ದುಲ್‌ ಕಲಾಂರನ್ನು ರಾಷ್ಟ್ರಪತಿ ಮಾಡಿದ್ದರು. ಈಗ ಅಟಲ್‌ರಂಥದ್ದೇ ನಡೆಯನ್ನು ಮೋದಿ ಅನುಸರಿಸಬಹುದು. ಮುಸ್ಲಿಂ ನಾಯಕನನ್ನು ರಾಷ್ಟ್ರಪತಿ ಅಭ್ಯರ್ಥಿ ಮಾಡಬಹುದು. ಆದರೆ ಪಕ್ಷದ ಒಳಗೆ ಹಾಗೂ ಮಿತ್ರಪಕ್ಷಗಳ ಜತೆ ಚರ್ಚಿಸಿದ ನಂತರ ಅಂತಿಮ ನಿರ್ಧಾರ ಹೊರಬೀಳಲಿದೆ ಎಂದು ಮೂಲಗಳು ಹೇಳಿವೆ. ಜುಲೈನಲ್ಲಿ ರಾಷ್ಟ್ರಪತಿ ಚುನಾನಣೆ ನಡೆಯಲಿದೆ.