ಸೈನಿಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ನಾಲ್ವರು ಕೇರಳ ಪೊಲೀಸರ ಅಮಾನತು!
ಆಗಸ್ಟ್‌ನಲ್ಲಿ ಕೊಲ್ಲಂನ ಕಿಲಿಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಹಲ್ಲೆಯ ಘಟನೆ ನಡೆದಿದ್ದು, ಅಂತಿಮವಾಗಿ ಪೊಲೀಸರನ್ನು ಗುರುವಾರ ಅಮಾನತುಗೊಳಿಸಲಾಗಿದೆ.
ಕೊಚ್ಚಿ (ಅ.21): ಕೇರಳದ ಕೊಲ್ಲಂ ಜಿಲ್ಲೆಯ ಕಿಲಿಕೊಲ್ಲೂರು ಪೊಲೀಸ್ ಠಾಣೆಯ ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಅಕ್ಟೋಬರ್ 20 ರಂದು ಗುರುವಾರ ಅಮಾನತುಗೊಳಿಸಲಾಗಿದೆ. ಸೈನಿಕ ಮತ್ತು ಅವರ ಸಹೋದರನ ಜೈಲಿನಲ್ಲಿ ಕೂಡಿಟ್ಟು ಚಿತ್ರಹಿಂಸೆಗೆ ಕಾರಣರಾಗಿದ್ದಾರೆ. ಆ.26ರಂದು ಕಿಲಿಕೊಲ್ಲೂರು ಪೊಲೀಸ್ ಠಾಣೆಯಲ್ಲಿ ವಿಷ್ಣು ಮತ್ತು ವಿಘ್ನೇಶ್ ಎಂಬ ಇಬ್ಬರು ಯುವಕರನ್ನು ಪೊಲೀಸರು ಅಮಾನುಷವಾಗಿ ಹಿಂಸಿಸಿ 12 ದಿನಗಳ ಕಾಲ ಕಸ್ಟಡಿಯಲ್ಲಿಟ್ಟಿದ್ದರು. ಕೊಲ್ಲಂ ಪೊಲೀಸ್ ಕಮಿಷನರ್ ಮೆರಿನ್ ಜೋಸೆಫ್, ಘಟನೆಯ ಆಂತರಿಕ ತನಿಖೆಯ ನಂತರ ಪ್ರಕರಣದಲ್ಲಿ ಎಲ್ಲಾ ನಾಲ್ವರು ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ವರದಿಯಾಗಿದೆ. ಯೋಧ ವಿಷ್ಣು ಮತ್ತು ಆತನ ಕಿರಿಯ ಸಹೋದರ ವಿಘ್ನೇಶ್ ಅವರಿಗೆ ಠಾಣಾಧಿಕಾರಿ ವಿನೋದ್ ಕೆ, ಸಬ್ ಇನ್ಸ್ ಪೆಕ್ಟರ್ ಅನೀಶ್ ಕೆಪಿ, ಸಹಾಯಕ ಸಬ್ ಇನ್ಸ್ ಪೆಕ್ಟರ್ ಪ್ರಕಾಶ್ ಚಂದ್ರನ್ ಮತ್ತು ಸಿವಿಲ್ ಪೊಲೀಸ್ ಅಧಿಕಾರಿ ಮಣಿಕಂಠನ್ ಪಿಳ್ಳೈ ಚಿತ್ರಹಿಂಸೆ ನೀಡಿದ್ದರು.
ವಿಘ್ನೇಶ್ ಸಿಪಿಐ(ಎಂ) ಯುವ ಘಟಕವಾದ ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ (ಡಿವೈಎಫ್‌ಐ) ಕಾರ್ಯಕರ್ತ. ಕಸ್ಟಡಿ ಚಿತ್ರಹಿಂಸೆಗೆ ಕಾರಣವಾದ ಘಟನೆಯು ಆಗಸ್ಟ್‌ನಲ್ಲಿ ನಡೆದಿತ್ತು. ಸಿವಿಲ್ ಪೊಲೀಸ್ ಅಧಿಕಾರಿ ಮಣಿಕಂಠನ್ ಪಿಳ್ಳೈ ಅವರು ಕಿಲಿಕೊಲ್ಲೂರು ಪೊಲೀಸ್ ಠಾಣೆಗೆ ತನ್ನನ್ನು ಕರೆಸಿಕೊಂಡಿದ್ದರು ಎಂದು ವಿಘ್ನೇಶ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಅನಂತು ಎಂಬ ವ್ಯಕ್ತಿಗೆಜಾಮೀನು ನೀಡುವಂತೆ ಪಿಳ್ಳೆ ವಿಘ್ನೇಶ್ ಅವರನ್ನು ಕೇಳಿದರು. ಮಣಿಕಂಠನ್ ಅವರು ದೂರವಾಣಿಯಲ್ಲಿ ಪ್ರಕರಣದ ವಿವರಗಳನ್ನು ಬಹಿರಂಗಪಡಿಸಲಿಲ್ಲ ಮತ್ತು ವಿಘ್ನೇಶ್ ಠಾಣೆಗೆ ಬಂದಾಗ, ಅನಂತು ಮಾದಕವಸ್ತು ಪ್ರಕರಣದಲ್ಲಿ ಆರೋಪಿಯಾಗಿರುವುದನ್ನು ಅರಿತುಕೊಂಡರು ಮತ್ತು ಅದರಲ್ಲಿ ಭಾಗಿಯಾಗಲು ನಿರಾಕರಿಸಿದರು. ವಿಘ್ನೇಶ್ ಅವರ ಸಹೋದರ ವಿಷ್ಣು ಸೇನಾ ಸಿಬ್ಬಂದಿಯಾಗಿದ್ದ, ಹಾಗೂ ತನ್ನ ಮದುವೆಯ ಸಲುವಾಗಿ ರಜೆಯ ಮೇಲೆ ಬಂದಿದ್ದಾರೆ. ಘಟನೆ ಸಂಭವಿಸಿದಾಗ ಸಹೋದರನನ್ನು ಕರೆದುಕೊಂಡು ಹೋಗಲು ಪೊಲೀಸ್ ಠಾಣೆಗೆ ಬಮದಾಗ ಆತನಿಗೂ ಹಿಂಸೆ ನೀಡಲಾಗಿತ್ತು.
ನಿಷೇಧಿತ PFI ಸಂಘಟನೆ ವ್ಯಾಟ್ಸ್ಆ್ಯಪ್ ಗ್ರೂಪ್ ಆಡ್ಮಿನ್ ಪಾಕಿಸ್ತಾನಿ, ಸ್ಫೋಟಕ ಮಾಹಿತಿ ಬಿಚ್ಚಿಟ್ಟ ATS!
“ನಾನು ಡಿವೈಎಫ್‌ಐ ಕಾರ್ಯಕರ್ತ ಮತ್ತು ಅದನ್ನು ಕೇರಳ ಲೋಕಸೇವಾ ಆಯೋಗದ (ಪಿಎಸ್‌ಸಿ) ಪಟ್ಟಿಗೆ ಸೇರಿದ್ದೇನೆ. ಆ ವೇಳೆಗೆ ಹೆಚ್ಚುವರಿ ಸಬ್ ಇನ್ಸ್ ಪೆಕ್ಟರ್ ಪ್ರಕಾಶ್ ಚಂದ್ರನ್ ಠಾಣೆಗೆ ಆಗಮಿಸಿದ್ದರು. ಕುಡಿದ ಅಮಲಿನಲ್ಲಿದ್ದ ಆತ ಜಗಳ ಆರಂಭಿಸಿದ. ಇದು ಎಲ್ಲದರ ಆರಂಭವಾಗಿತ್ತು. ನನ್ನ ಸಹೋದರ ತಾನು ಸೈನಿಕ ಎಂದು ಹೇಳಿದ ಹಾಗಿದ್ದರೂ ಪೊಲೀಸರು ಆತನ ಕೆನ್ನೆಗೆ ಹೊಡೆದರು. ಆತ ಆಗ ಮುಫ್ತಿಯಲ್ಲಿದ್ದ. ಆ ಸಮಯದಲ್ಲಿ ಅವರು ಕರ್ತವ್ಯದಲ್ಲಿದ್ದರೆ ಎನ್ನುವುದು ಕೂಡ ತನಿಖೆಯಾಗಬೇಕು. ಪ್ರಕಾಶ್ ಚಂದ್ರನ್ ಹೊಡೆಯಲು ಮುಂದಾದಾಗ ನನ್ನ ಸಹೋದರ ಅವರನ್ನು ತಡೆಯಲು ಮುಂದಾದರು. ಆ ಬಳಿಕ ಜಗಳ ತಾರಕಕ್ಕೇರಿತು' ಎಂದು ವಿಘ್ನೇಶ್ ಹೇಳಿದ್ದಾರೆ. ವಿಷ್ಣು ಪೊಲೀಸ್ ಸ್ಟೇಷನ್‌ಗೆ ಬರುವ ಮುನ್ನವೇ, ಪ್ರಕಾಶ್ ಚಂದ್ರನ್ ಆತನನ್ನು ರಸ್ತೆಯಲ್ಲಿ ಪ್ರಶ್ನೆ ಮಾಡಿದ್ದ. ವಿಷ್ಣು ರೈಡ್ ಮಾಡುತ್ತಿದ್ದ ಸ್ಕೂಟರ್ ಇನ್ನೇನು ಆಟೋ ರಿಕ್ಷಾಕ್ಕೆ ತಾಗುವುದರಲ್ಲಿತ್ತು. ಈ ವಿಚಾರವಾಗಿ ವಾಗ್ವಾದ ನಡೆದಿತ್ತು.
Kerala Human Sacrifice Case: ಶ್ರೀದೇವಿ ಎಂದೇಳಿ ಭಗವಾಲ್‌ಗೆ ಗಾಳ ಹಾಕಿದ್ದ ಮಾಂತ್ರಿಕ ರಶೀದ್!
ಕುಟುಂಬದವರ ಪ್ರಕಾರ, ಸಹೋದರರು ಶ್ಯೂರಿಟಿಗೆ ಸಹಿ ಹಾಕಲು ನಿರಾಕರಿಸಿದ್ದರಿಂದ ಪೊಲೀಸರು ಆರಂಭದಲ್ಲಿ ಕೋಪಗೊಂಡಿದ್ದರು. ಆ ಬಳಿಕ ಪ್ರಕಾಶ್ ಚಂದ್ರನ್ ಅವರಿಗೆ ನೀವು ಕುಡಿದ್ದೀರಾ ಎಂದು ಸಹೋದರರು ಪ್ರಶ್ನೆ ಮಾಡಿದ್ದರಿಂದ ಜಗಳ ತೀವ್ರವಾಗಿತ್ತು. ಪೊಲೀಸ್ ಸಿಬ್ಬಂದಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕು ಎಂದು ಅವರು ಒತ್ತಾಯಿಸಿದರು. “ಆಗ ಕರ್ತವ್ಯದಲ್ಲಿದ್ದ ಇತರ ಮೂವರು ಪೊಲೀಸರು ನಮ್ಮನ್ನು ಸುತ್ತುವರೆದು ಪೊಲೀಸ್ ಅಧಿಕಾರಿಗೆ ಕಪಾಳಮೋಕ್ಷ ಮಾಡುವ ಧೈರ್ಯವಿದೆಯೇ ಎಂದು ಪ್ರಶ್ನೆ ಮಾಡಿದ್ದರು. ನನ್ನ ಅಣ್ಣ ತೊಟ್ಟಿದ್ದ ಪಂಚೆ ತೆಗೆದು ಕ್ಯಾಮೆರಾ ಇಲ್ಲದ ಕೋಣೆಗೆ ಎಳೆದೊಯ್ದರು. ನನ್ನನ್ನೂ ಕೋಣೆಗೆ ಕರೆದೊಯ್ದರು ಮತ್ತು ಆತನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸುವುದನ್ನು ನಾನು ನೋಡಿದೆ. ಎಸ್‌ಎಚ್‌ಒ ಅನೀಶ್ ಅವರು ಕ್ರಿಮಿನಲ್ ಆಗಿದ್ದು, ಹಲವರಿಗೆ ಚಿತ್ರಹಿಂಸೆ ನೀಡಿದ್ದಾಗಿ ಅವರು ನಮ್ಮ ಎದುರೇ ಹೇಳಿದ್ದರು. ಅವರು ನನಗೆ ನೀಡಿದ ಪೆಟ್ಟಿನಿಂದ ನಾನು ಬಹುತೇಕ ಪ್ರಜ್ಞೆ ಕಳೆದುಕೊಂಡಿದ್ದೆ. ನನಗೆ ಕೈಕೋಳ ಹಾಕಿದ್ದರು. ಹಾಗಿದ್ದರೂ, ಮುಖಕ್ಕೆ ಏನೂ ಆಗಬಾರದು ಎಂದು ಕೈಗಳನ್ನು ಬಳಸಿದ್ದೆ. ಇದರಿಂದಾಗಿ ಅವರು ಬೆರಳನ್ನು ಮುರಿಯಲು ಪ್ರಯತ್ನಿಸಿದ್ದರು ಎಂದು ವಿಘ್ನೇಶ್ ಹೇಳಿದ್ದಾರೆ.