ಸೆಕ್ಸ್‌ ಹಗರಣದ ಆರೋಪಿ ಪರ ಕೇಂದ್ರ ಸಚಿವ ಗೋಪಿ ಬ್ಯಾಟಿಂಗ್‌: ಇದು ಅವರ ವೈಯಕ್ತಿಕ ಹೇಳಿಕೆ ಎಂದ ಬಿಜೆಪಿ

ಮಲಯಾಳಂ ಚಿತ್ರರಂಗದಲ್ಲಿ ನಡೆದ ಸೆಕ್ಸ್‌ ಹಗರಣ ಇದೀಗ ಕೇರಳದ ಬಿಜೆಪಿ ಲೋಕಸಭಾ ಸದಸ್ಯ, ಕೇಂದ್ರ ಸಚಿವ ಸುರೇಶ್‌ ಗೋಪಿ ಮತ್ತು ಕೇರಳ ಬಿಜೆಪಿ ಘಟಕದ ನಡುವೆ ಜಟಾಪಟಿಗೆ ಕಾರಣವಾಗಿದೆ. ಪ್ರಕರಣದಲ್ಲಿ ಆರೋಪಿ ಆಗಿರುವ ಸಿಪಿಎಂ ಶಾಸಕ, ನಟ ಮುಕೇಶ್‌ ಪರ ಗೋಪಿ ಮಾತನಾಡಿರುವುದು ಇದಕ್ಕೆ ಕಾರಣ.

Kerala Film Industry Sex Scandal Union Minister suresh Gopi Batting for Accused: its his personal opinion Clarification from Kerala BJP akb

ತಿರುವನಂತಪುರ: ಮಲಯಾಳಂ ಚಿತ್ರರಂಗದಲ್ಲಿ ನಡೆದ ಸೆಕ್ಸ್‌ ಹಗರಣ ಇದೀಗ ಕೇರಳದ ಬಿಜೆಪಿ ಲೋಕಸಭಾ ಸದಸ್ಯ, ಕೇಂದ್ರ ಸಚಿವ ಸುರೇಶ್‌ ಗೋಪಿ ಮತ್ತು ಕೇರಳ ಬಿಜೆಪಿ ಘಟಕದ ನಡುವೆ ಜಟಾಪಟಿಗೆ ಕಾರಣವಾಗಿದೆ. ಪ್ರಕರಣದಲ್ಲಿ ಆರೋಪಿ ಆಗಿರುವ ಸಿಪಿಎಂ ಶಾಸಕ, ನಟ ಮುಕೇಶ್‌ ಪರ ಗೋಪಿ ಮಾತನಾಡಿರುವುದು ಇದಕ್ಕೆ ಕಾರಣ.

ಮುಕೇಶ್‌ ಮೇಲಿನ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಗೋಪಿ, ‘ಚಲನಚಿತ್ರ ಉದ್ಯಮದ ಕುರಿತ ಜನಾಭಿಪ್ರಾಯದ ಬಗ್ಗೆ ಮಾಧ್ಯಮಗಳು ದಿಕ್ಕು ತಪ್ಪಿಸುತ್ತಿವೆ. ಈಗ ಹೊರಿಸಲಾಗಿರುವುದು ಆರೋಪ. ಈ ಬಗ್ಗೆ ನ್ಯಾಯಾಲಯ ಕ್ರಮ ಕೈಗೊಳ್ಳುತ್ತದೆ. ಆದರೆ ನಿಮ್ಮ ಲಾಭಕ್ಕಾಗಿ ನೀವು ಜನರ ನಡುವೆ ಜಗಳ ತಂದಿಡುತ್ತಿದ್ದೀರಿ. ನೀವೇನು ನ್ಯಾಯಾಲಯವಾ?’ ಎಂದು ಮಾಧ್ಯಮಗಳ ವಿರುದ್ಧವೇ ಹರಿಹಾಯ್ದರು.

ಇದು ಸಕ್ಕರೆ ಲೇಪಿತ ವೇಶ್ಯಾಗೃಹ: ಬೆಂಗಾಲಿ ಸಿನಿಮೋದ್ಯಮದ ಬಗ್ಗೆ ನಟಿಯ ಶಾಕಿಂಗ್ ಹೇಳಿಕೆ

ಆದರೆ ಸುರೇಶ್‌ ಹೇಳಿಕೆಯನ್ನು ತಳ್ಳಿಹಾಕಿರುವ ಬಿಜೆಪಿ ರಾಜ್ಯಾಧ್ಯಕ್ಷ ಸುರೇಂದ್ರನ್‌, ಗೋಪಿ ಓರ್ವ ನಟನಾಗಿ, ಕೇಂದ್ರ ಸಚಿವರಾಗಿ ವೈಯಕ್ತಿಕ ಹೇಳಿಕೆ ನೀಡಲು ಹಕ್ಕು ಹೊಂದಿದ್ದಾರೆ. ಆದರೆ ಲೈಂಗಿಕ ಕಿರುಕುಳದ ಆರೋಪ ಹೊತ್ತ ಮುಕೇಶ್‌ ರಾಜೀನಾಮೆ ನೀಡಬೇಕು ಎಂಬುದು ಪಕ್ಷದ ನಿಲುವು ಎಂದು ಸ್ಪಷ್ಟಪಡಿಸಿದರು.

ಮಲಯಾಳಂ ಚಿತ್ರರಂಗದಲ್ಲಿ ಇನ್ನೂ ಐವರ ಮೇಲೆ ಲೈಂಗಿಕ ಕಿರುಕುಳ ದೂರು! : ನಟಿ ಮೀನು ಮುನೀರ್‌ ಗಂಭೀರ ಆರೋಪ

 

Latest Videos
Follow Us:
Download App:
  • android
  • ios