Asianet Suvarna News Asianet Suvarna News

ಕಮ​ಲ ಪಕ್ಷ​ದಿಂದ ಎಲೆ​ಕ್ಷ​ನ್‌ ಸ್ಪರ್ಧಿ​ಸ​ಲ್ಲ: ಕೇರಳದ ಬಿಜೆ​ಪಿ ಅಚ್ಚ​ರಿ ಅಭ್ಯರ್ಥಿ ಘೋಷ​ಣೆ!

ಕೇರಳ ವಿಧಾ​ನ​ಸಭೆ ಚುನಾ​ವಣೆ ಹಿನ್ನೆ​ಲೆ​ಯಲ್ಲಿ ಹಿಂದು​ಳಿದ ‘ಪಣಿಯಾ’ ಬುಡ​ಕಟ್ಟು ಸಮು​ದಾ​ಯದ ಮೊದಲ ಎಂಬಿಎ ಪದ​ವೀ​ಧದರ| ಕಮ​ಲ ಪಕ್ಷ​ದಿಂದ ಎಲೆ​ಕ್ಷ​ನ್‌ ಸ್ಪರ್ಧಿ​ಸ​ಲ್ಲ: ಕೇರಳದ ಬಿಜೆ​ಪಿ ಅಚ್ಚ​ರಿ ಅಭ್ಯರ್ಥಿ ಘೋಷ​ಣೆ!

Kerala Elections Candidate rejects ticket leaves BJP red faced pod
Author
Bangalore, First Published Mar 17, 2021, 5:18 PM IST

ಕಲ್ಲಿ​ಕೋ​ಟೆ(ಮಾ.17): ಕೇರಳ ವಿಧಾ​ನ​ಸಭೆ ಚುನಾ​ವಣೆ ಹಿನ್ನೆ​ಲೆ​ಯಲ್ಲಿ ಹಿಂದು​ಳಿದ ‘ಪಣಿಯಾ’ ಬುಡ​ಕಟ್ಟು ಸಮು​ದಾ​ಯದ ಮೊದಲ ಎಂಬಿಎ ಪದ​ವೀ​ಧ​ರ​ನಾದ ಸಿ. ಮಣಿ​ಕಂಠನ್‌ ಅಲಿ​ಯಾಸ್‌ ಮಣಿ​ಕು​ಟ್ಟನ್‌ ಅವ​ರಿಗೆ ಬಿಜೆಪಿ ಟಿಕೆಟ್‌ ನೀಡಿದೆ.

ಆದರೆ ಇದರ ಬೆನ್ನಲ್ಲೇ, ತಾವು ಬಿಜೆಪಿ ಕಾರ್ಯ​ಕ​ರ್ತನೂ ಅಲ್ಲ. ಬಿಜೆ​ಪಿಯ ಬೆಂಬ​ಲಿ​ಗನೂ ಅಲ್ಲ. ಹೀಗಾಗಿ ಬಿಜೆ​ಪಿಯ ಟಿಕೆ​ಟ್‌​ನಿಂದ ಚುನಾ​ವಣಾ ಕಣ​ಕ್ಕಿ​ಳಿ​ಯು​ವು​ದಿಲ್ಲ ಎಂದು ಸಾಮಾಜಿಕ ಜಾಲ​ತಾ​ಣದ ಮೂಲಕ ಘೋಷಿ​ಸಿ​ದ್ದಾರೆ.

ಒಂದು ದೇಶ, ಒಂದು ಎಲೆಕ್ಷನ್‌ಗೆ ಮತ್ತಷ್ಟು ಬಲ!

ಕೇರ​ಳ​ದಲ್ಲಿ ಇದು ಬಿಜೆ​ಪಿಗೆ ದೊಡ್ಡ ಮುಜು​ಗ​ರ​ವಾ​ಗಿ ಪರಿ​ಣ​ಮಿ​ಸಿದೆ. ಈ ಬಗ್ಗೆ ಮಾತ​ನಾ​ಡಿದ ಮಣಿ​ಕು​ಟ್ಟನ್‌ ಅವರು, ‘ವಯ​ನಾಡು ವ್ಯಾಪ್ತಿಗೆ ಬರುವ ಮನಂಥ​ವಾಡಿ ವಿಧಾ​ನ​ಸಭೆ ಚುನಾ​ವಣಾ ಕಣಕ್ಕೆ ಕೇಂದ್ರ ಬಿಜೆಪಿ ನಾಯ​ಕತ್ವ ನನ್ನ ಹೆಸ​ರನ್ನು ಪ್ರಕ​ಟಿ​ಸಿ​ರು​ವುದು ಟೀವಿ​ಗ​ಳಿಂದ ಗೊತ್ತಾ​ಯಿತು. ಈ ವಿಚಾ​ರ​ದಿಂದ ನನಗೆ ಆಶ್ಚರ್ಯ​ವಾ​ಗಿದೆ. ಈ ಬಗ್ಗೆ ಚರ್ಚಿ​ಸಲು ಬಿಜೆಪಿ ನಾಯ​ಕರು ನನಗೆ ಕರೆ ಮಾಡಿ​ದಾ​ಗಲೂ, ನಾನು ಪಕ್ಷ ರಾಜ​ಕೀಯ ಮತ್ತು ಚುನಾ​ವಣೆ ರಾಜ​ಕೀ​ಯಕ್ಕೆ ಬರಲ್ಲ ಎಂಬ ನಿರ್ಧಾ​ರ​ವನ್ನೇ ತಿಳಿ​ಸಿ​ದ್ದೇ​ನೆ’ ಎಂದಿ​ದ್ದಾರೆ.

ಯಾವಾಗ ಚುನಾವಣೆ: 

ಕೇರಳ (140 ಕ್ಷೇತ್ರ)| ಮಲ್ಲಪುರಂ ಉಪ-ಚುನಾವಣೆ| ಒಂದು-ಹಂತ|

ಚುನಾವಣೆ ದಿನಾಂಕ: ಏಪ್ರಿಲ್ 6

ಮತ ಎಣಿಕೆ ದಿನಾಂಕ: ಮೇ 2

Follow Us:
Download App:
  • android
  • ios