Asianet Suvarna News Asianet Suvarna News

ವಿವಾದದ ನಡುವೆ ಕೇರಳದಲ್ಲಿ ಕಾಂಗ್ರೆಸ್‌ನಿಂದ ಮೋದಿ ವಿರುದ್ದ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ!

ಬಿಬಿಸಿ ಹೊರತಂದಿರುವ ಪ್ರಧಾನಿ ಮೋದಿ ಕುರಿತು ವಿವಾದಿತ ಸಾಕ್ಷ್ಯಚಿತ್ರ ಗದ್ದಲ ಮತ್ತೆ ಜೋರಾಗುತ್ತಿದೆ. ಇದೀಗ ಕೇರಳದಲ್ಲಿ ಸ್ವತಃ ಕಾಂಗ್ರೆಸ್ ಪಕ್ಷವೇ ಈ ಸಾಕ್ಷ್ಯಚಿತ್ರ ಪ್ರದರ್ಶನ ಮಾಡುತ್ತಿದೆ. 

Kerala congress set to screen controversial BBC documentary against PM Modi amid clash ckm
Author
First Published Jan 26, 2023, 6:28 PM IST

ನವದೆಹಲಿ(ಜ.26):  ಪ್ರಧಾನಿ ನರೇಂದ್ರ ಮೋದಿ ವಿರುದ್ದ ಬಿಬಿಸಿ ಹೊರತಂದಿರುವ ಸಾಕ್ಷ್ಯಚಿತ್ರ ಭಾರತದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದೆ.  ಹಲವು ವಿಶ್ವವಿದ್ಯಾಲಯ, ಕಾಲೇಜುಗಳಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಮುಂದಾದ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇತ್ತ ಕೆಲ ಕಾಲೇಜುಗಳಲ್ಲಿ ಸಾಕ್ಷ್ಯಚಿತ್ರ ಪ್ರದರ್ಶಿಸಲಾಗಿದೆ. ಇದರ ನಡುವೆ ಕೇರಳ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಎಕೆ ಆ್ಯಂಟಿನಿ ಪುತ್ರ, ಇದೇ ಸಾಕ್ಷ್ಯಚಿತ್ರ ವಿಚಾರಕ್ಕೆ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ. ಇದೀಗ ಕೇರಳದಲ್ಲಿ ಮತ್ತೊಂದು ಸುತ್ತಿನ ರಾಜಕೀಯ ಹಗ್ಗಜಗ್ಗಾಟಕ್ಕೆ ವೇದಿಕೆಯಾಗಿದೆ. ಕೇರಳ ಕಾಂಗ್ರೆಸ್ ಬಿಬಿಸಿ ಹೊರತಂದಿರುವ ಮೋದಿ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಮುಂದಾಗಿದೆ.

ತಿರುವನಂತಪುರಂನಲ್ಲಿ ಕೇರಳ ಕಾಂಗ್ರೆಸ್, ಮೋದಿ ವಿರುದ್ದ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಮುಂದಾಗಿದೆ. ಸಾಕ್ಷ್ಯಚಿತ್ರದ ಎರಡೂ ಭಾಗವನ್ನು ಪ್ರದರ್ಶಿಸಲು ಕಾಂಗ್ರೆಸ್ ಮುಂದಾಗಿದೆ. ಈ ಸಾಕ್ಷ್ಯಚಿತ್ರವನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಇದು ಬಿಬಿಸಿ ಮೋದಿ ಹಾಗೂ ಭಾರತ ವಿರುದ್ದ ಮಾಡಿರುವ ಪಿತೂರಿ, ಸತ್ಯಗಳಿಂದ ದೂರವಾಗಿರುವ ಪ್ರಚಾರದ ಸರಕು ಎಂದು ಕೇಂದ್ರ ಹೇಳಿದೆ. ಈ ಪ್ರೋಪಗಾಂಡ ಸಾಕ್ಷ್ಯಚಿತ್ರವನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.

 

ಬ್ರಿಟನ್‌ ಸಂಸತ್ತಲ್ಲಿ ಪ್ರಧಾನಿ ಮೋದಿ ಸಮರ್ಥಿಸಿದ ಪ್ರಧಾನಿ ರಿಷಿ ಸುನಕ್‌

ಕೇಂದ್ರದ ನಿಷೇಧ ಕ್ರಮವನ್ನು ಕಾಂಗ್ರೆಸ್ ಸೇರಿದಂತೆ ಹಲವು ವಿಪಕ್ಷಗಳು ಪ್ರಶ್ನಿಸಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತಿದೆ ಎಂದು ಕೇಂದ್ರದ ವಿರುದ್ದ ಆರೋಪ ಮಾಡಿದೆ. ಇದೀಗ ಕೇರಳ ಕಾಂಗ್ರೆಸ್ ಈ ನಡೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಕಾಂಗ್ರೆಸ್‌ನ ಪ್ರಮುಖ ಹುದ್ದೆಗಳಿಗೆ ಆ್ಯಂಟನಿ ಪುತ್ರ ಅನಿಲ್‌ ರಾಜೀನಾಮೆ!
ಗುಜರಾತ್‌ ಗಲಭೆಗೆ ನರೇಂದ್ರ ಮೋದಿ ಸೂತ್ರಧಾರಿ ಎನ್ನುವ ಅಂಶಗಳನ್ನು ಒಳಗೊಂಡಿರುವ ಬಿಬಿಸಿಯ ಸಾಕ್ಷ್ಯಚಿತ್ರವನ್ನು ಭಾರತದಲ್ಲಿ ಪ್ರಸಾರ ಮಾಡುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಕಾಂಗ್ರೆಸ್‌ನ ಹಿರಿಯ ನಾಯಕ ಎ.ಕೆ.ಆ್ಯಂಟನಿ ಅವರ ಪುತ್ರ ಅನಿಲ್‌, ಬುಧವಾರ ಕಾಂಗ್ರೆಸ್‌ನಲ್ಲಿ ತಾವು ಹೊಂದಿದ್ದ ಎಲ್ಲಾ ಸ್ಥಾನಗಳಿಗೂ ರಾಜೀನಾಮೆ ನೀಡಿದ್ದಾರೆ. ಸಾಕ್ಷ್ಯಚಿತ್ರದ ಕುರಿತು ಅನಿಲ್‌ ಬಹಿರಂಗ ಅಭಿಪ್ರಾಯ ವ್ಯಕ್ತಪಡಿಸುತ್ತಲೇ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸ್ವಪಕ್ಷೀಯರಿಂದಲೇ ಕಟು ಟೀಕೆ ವ್ಯಕ್ತವಾಗಿತ್ತು. ಅದಕ್ಕೆ ಬೇಸತ್ತಿರುವ ಅವರು ರಾಜೀನಾಮೆ ಪ್ರಕಟಿಸಿದ್ದಾರೆ. ಆದರೆ ಸದ್ಯಕ್ಕೆ ಕಾಂಗ್ರೆಸ್‌ನಲ್ಲೇ ಮುಂದುವರೆಯುವುದಾಗಿ ಸ್ಪಷ್ಟಪಡಿಸಿದ್ದಾರೆ.

 

ಪ್ರಧಾನಿ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರಕ್ಕೆ ಭಾರತದಲ್ಲಿ ‘ನಿಷೇಧ’

ಜಾಮಿಯಾ ವಿವಿ​ಯಲ್ಲೂ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಯತ್ನ
ದೆಹಲಿ ಜೆಎನ್‌ಯು, ಹೈದ್ರಾಬಾದ್‌ ಕೇಂದ್ರೀಯ ವಿವಿ ಬಳಿಕ ಇದೀಗ ದೆಹಲಿಯ ಜಾಮೀಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲೂ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಯತ್ನ ನಡೆಸಲಾಗಿದೆ. ಆದರೆ ಎಡ​ಪಕ್ಷ ಬೆಂಬ​ಲಿತ ಸ್ಟೂಡೆಂಟ್‌ ಫೆಡ​ರೇ​ಶನ್‌ ಆಫ್‌ ಇಂಡಿಯಾ (ಎಸ್‌​ಎಫ್‌ಐ) ಬುಧವಾರ ನಡೆಸಿದ ಈ ಯತ್ನಕ್ಕೆ ವಿವಿ ಆಡಳಿತ ಮಂಡಳಿ ತಡೆಯೊಡ್ಡಿದೆ. ಈ ವೇಳೆ ಪ್ರತಿಭಟನೆ ನಡೆಸಿದ 70 ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದ್ದಾರೆ.

ಬುಧವಾರ ಸಂಜೆ 6 ಗಂಟೆಯಿಂದ ಸಾಕ್ಷ್ಯಚಿತ್ರ ಪ್ರದರ್ಶನ ಮಾಡುವುದಾಗಿ ಎಸ್‌ಎಫ್‌ಐ ಮೊದಲೇ ಹೇಳಿಕೆ ಬಿಡುಗಡೆ ಮಾಡಿತ್ತು. ಆದರೆ ವಿವಿ ಆಡಳಿತ ಮಂಡಳಿ ಇದಕ್ಕೆ ಅವಕಾಶ ನಿರಾಕರಿಸಿತ್ತು ವಿವಿಯಲ್ಲಿ ಶೈಕ್ಷಣಿಕ ವಾತಾವರಣನ್ನು ಹಾಳುಗೆಡವಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಯತ್ನಿಸುತ್ತಿದ್ದು, ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಲ್ಲ ಎಂದು ಸ್ಪಷ್ಟಪಡಿಸಿತ್ತು.

Follow Us:
Download App:
  • android
  • ios