Asianet Suvarna News Asianet Suvarna News

ಕೇರಳ ಸಿಎಂಗೆ ಕೊರೋನಾ ಪಾಸಿಟಿವ್: ವೈರಲ್ ಆಯ್ತು ಹಳೆಯ ಫೋಟೋ

ನೆರೆ ರಾಜ್ಯ ಕೇರಳ ಸಿಎಂಗೆ ಕೊರೋನಾ ಪಾಸಿಟಿವ್ | ವೈರಲ್ ಆಗ್ತಿದೆ ಸಿಎಂ ಸ್ಯಾನಿಟೈಸರ್ ಬೇಡ ಎಂದ ಹಳೆಯ ಫೋಟೋ

Kerala Chief Minister Pinarayi Vijayan Tests Positive For COVID-19 dpl
Author
Bangalore, First Published Apr 9, 2021, 11:49 AM IST

ತಿರುವನಂತಪುರಂ(ಎ.09): ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಕಳೆದ ತಿಂಗಳು ಕೋವಿಡ್ ಲಸಿಕೆಯ ಮೊದಲ ಡೋಸ್ ತೆಗೆದುಕೊಂಡ ಸಿಎಂ ವಿಜಯನ್ ಅವರು ಟ್ವೀಟ್ ನಲ್ಲಿ ತಮಗೆ ಪಾಸಿಟಿವ್ ಬಂದಿರುವುದನ್ನು ದೃಢಪಡಿಸಿದ್ದಾರೆ.

ನಾನು ಕೋವಿಡ್ +ve ಎಂದು ದೃಢವಾಗಿದೆ. ಕೋಝಿಕ್ಕೋಡ್‌ನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಪ್ರಸ್ತುತ ಕಣ್ಣೂರಿನಲ್ಲಿರುವ ಶ್ರೀ ವಿಜಯನ್, ಇತ್ತೀಚಿನ ದಿನಗಳಲ್ಲಿ ತಮ್ಮೊಂದಿಗೆ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಸೆಲ್ಫ್‌ ಕ್ವಾರೆಂಟೈನ್ ಆಗಬೇಕೆಂದು ವಿನಂತಿಸಿದ್ದಾರೆ.

ಕೊರೋನಾ ಲಸಿಕೆ ನೀಡಿಕೆ ಬಂದ್‌?

ಸಿಎಂನಲ್ಲಿ ಕೊರೋನಾ ಲಕ್ಷಣಗಳೇನು ಎಲ್ಲ ಎಂದು ಮುಖ್ಯಮಂತ್ರಿ ಕಚೇರಿಯ ಮೂಲಗಳು ತಿಳಿಸಿವೆ. ಸಿಎಂ ಪುತ್ರಿ ವೀಣಾ ವಿಜಯನ್ ಮತ್ತು ಅಳಿಯ ಪಿ ಎ ಮೊಹಮ್ಮದ್ ರಿಯಾಸ್ ಅವರಿಗೂ ಕೊರೋನಾ ದೃಢಪಟ್ಟಿತ್ತು.

ಕಣ್ಣೂರಿನ ಧರ್ಮದಂನಿಂದ ಸಿಪಿಐ (ಎಂ) ಅಭ್ಯರ್ಥಿಯಾಗಿರುವ ಶ್ರೀ ವಿಜಯನ್ ಅವರು ಏಪ್ರಿಲ್ 6 ರ ವಿಧಾನಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ರಾಜ್ಯಾದ್ಯಂತ ವ್ಯಾಪಕವಾಗಿ ಪ್ರಯಾಣಿಸಿದ್ದರು.

ಕೇರಳ ಸಿಎಂಗೆ ಕೊರೋನಾ ದೃಢಪಟ್ಟ ಸುದ್ದಿ ಹೊರಬಿದ್ದ ಬೆನ್ನಲ್ಲೇ ಅವರ ಹಳೆಯ ಫೋಟೋ ಒಂದು ವೈರಲ್ ಆಗಿದೆ. ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಸ್ವಯಂ ಸೇವಕಿ ಸ್ಯಾನಿಟೈಸರ್ ನೀಡುವಾಗ ಸಿಎಂ ಅದನ್ನು ತಳ್ಳಿದ್ದ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ.

Follow Us:
Download App:
  • android
  • ios