ದೇಶದ ಜಾತ್ಯಾತೀತತೆಗೆ ಸಿಎಎ ವಿರುದ್ಧ ಎಂದ ಸಿಎಂ ಪಿಣರಾಯಿ!

ಧರ್ಮದ ಆಧಾರದ ಮೇಲೆ ಪೌರತ್ವ ನಿರ್ಣಯ ಮಾಡುವ ಅಧಿಕಾರ ಯಾರೊಬ್ಬರಿಗೂ ಇಲ್ಲ. ಸಿಎಎ ಅನ್ನುವುದು ದೇಶದ ಜಾತ್ಯಾತೀತತೆಗೆ ವಿರುದ್ಧ, ಕೇರಳದಲ್ಲಿ ಇದು ಜಾರಿಯಾಗೋದಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
 

Kerala Chief Minister Pinarayi Vijayan says CAA Against Countrys Secularism Wont Be Implemented Here san

ತಿರುವನಂತಪುರ (ಜೂ.3): ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ (Citizenship Amendment Act) ಅಥವಾ ಸಿಎಎ (CAA) ಅನ್ನು ಕೇರಳ (Kerala) ಸರ್ಕಾರ ಜಾರಿ ಮಾಡುವುದಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ಗುರುವಾರ ಹೇಳಿದ್ದಾರೆ.

ಕೇರಳದಲ್ಲಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ನಿರ್ಮಾಣವಾದ ಸರ್ಕಾರಕ್ಕೆ ಒಂದು ವರ್ಷ ಪೂರ್ಣವಾದ ಹಿನ್ನಲೆಯಲ್ಲಿ ತಿರುವನಂತಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಪೌರತ್ವ ತಿದ್ದುಪಡಿ ಕಾಯ್ದೆಯ ವಿಚಾರವಾಗಿ ಕೇರಳ ಸರ್ಕಾರ ಸ್ಪಷ್ಟತೆ ಹೊಂದಿದೆ. ಯಾವುದೇ ಕಾರಣಕ್ಕೂ ಇದು ರಾಜ್ಯದಲ್ಲಿ ಜಾರಿಯಾಗುವುದಿಲ್ಲ. ಇದು ಮುಂದೆಯೂ ಮುಂದುವರಿಯುತ್ತದೆ' ಎಂದು ಹೇಳಿದ್ದಾರೆ.

ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಗಳು ಕಾನೂನನ್ನು ಜಾರಿಗೆ ತರುವುದಾಗಿ ಆಗಾಗ್ಗೆ ಹೇಳುತ್ತಿದ್ದಾರೆ ಎಂದು ಅವರು ಹೇಳಿದರು. "ರಾಜ್ಯ ಸರ್ಕಾರವು ಈ ವಿಷಯದಲ್ಲಿ ಸ್ಪಷ್ಟ ನಿಲುವನ್ನು ಹೊಂದಿದೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ," ಎಂದು ಸಿಎಂ ವಿಜಯನ್ ಹೇಳಿದರು. ಪೌರತ್ವ (ತಿದ್ದುಪಡಿ) ಕಾಯ್ದೆಯು ದೇಶದ ಜಾತ್ಯತೀತತೆಯ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

"ಧರ್ಮದ ಆಧಾರದ ಮೇಲೆ ಪೌರತ್ವವನ್ನು ನಿರ್ಧರಿಸುವ ಅಧಿಕಾರ ಇಲ್ಲಿ ಯಾರಿಗೂ ಇಲ್ಲ" ಎಂದು ಅವರು ಮುಂದುವರಿಸಿದರು. ಇಂತಹ ವಿಷಯಗಳನ್ನು ನಿರ್ಧರಿಸುವಲ್ಲಿ ಸಂವಿಧಾನವೇ ಸರ್ವಶ್ರೇಷ್ಠವಾಗಿದೆ ಎಂದು ತಿಳಿಸಿದ ಅವರು, ರಾಜ್ಯ ಸರ್ಕಾರವು ಸಾಂವಿಧಾನಿಕ ತತ್ವಗಳ ಆಧಾರದ ಮೇಲೆ ಈ ವಿಷಯದಲ್ಲಿ ತನ್ನ ನಿಲುವನ್ನು ತೆಗೆದುಕೊಂಡಿದೆ ಎಂದು ಹೇಳಿದರು. ಕಳೆದ ತಿಂಗಳು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಕೋವಿಡ್-19 ಸಾಂಕ್ರಾಮಿಕವು ಕೊನೆಗೊಂಡ ನಂತರ ಕಾನೂನನ್ನು ಜಾರಿಗೆ ತರಲಾಗುವುದು ಎಂದು ಹೇಳಿದ್ದರು.

ಸಿಎಎ ಕುರಿತಾಗಿ ಮಾತನಾಡಿರುವ ತೃಣಮೂಲ ಕಾಂಗ್ರೆಸ್ ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (Trinamool Congress’s national General Secretary Abhishek Banerjee) , ಇದು ಬಿಜೆಪಿಯ ಜುಮ್ಲಾ (ಬಿಜೆಪಿಯ ಸುಳ್ಳು) ಎಂದು ಹೇಳಿದ್ದಾರೆ. ಸಿಎಎ ಜಾರಿಗೊಳಿಸಿ ಎರಡೂವರೆ ವರ್ಷಗಳ ನಂತರವೂ ಕೇಂದ್ರ ಸರ್ಕಾರವು ಕಾನೂನನ್ನು ಕಾರ್ಯಗತಗೊಳಿಸಲು ಇನ್ನೂ ನಿಯಮಗಳನ್ನು ರೂಪಿಸಿಲ್ಲ ಎಂದು ಬ್ಯಾನರ್ಜಿ ಹೇಳಿದರು. 2014ರ ಡಿಸೆಂಬರ್ 31ರವರೆಗೆ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ವಲಸೆ ಬಂದಿರುವ ಮುಸ್ಲಿಮೇತರ ಅಲ್ಪಸಂಖ್ಯಾತರಾದ ಹಿಂದೂಗಳು, ಸಿಖ್‌ಗಳು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರಿಗೆ ಭಾರತೀಯ ಪೌರತ್ವವನ್ನು ನೀಡಲು ಸಿಎಎ ಪ್ರಯತ್ನಿಸುತ್ತದೆ.

CAA Implemention ಕೋವಿಡ್ ಅಂತ್ಯಗೊಂಡ ಬೆನ್ನಲ್ಲೇ ಪೌರತ್ವ ಕಾಯ್ದೆ ಜಾರಿ, ಅಮಿತ್ ಶಾ ಘೋಷಣೆ!

ಸಾಂಕ್ರಾಮಿಕ ರೋಗವು ಕೊನೆಗೊಂಡ ತಕ್ಷಣ ಸರ್ಕಾರವು ಸಿಎಎಯನ್ನು ಜಾರಿಗೆ ತರಲಿದೆ ಎಂದು ಗೃಹ ಸಚಿವ ಅಮಿತ್ ಷಾ (Union Home Minister Amit Shah ) ಪಶ್ಚಿಮ ಬಂಗಾಳದಲ್ಲಿ (West Bengal ) ಘೋಷಿಸಿದ್ದರು. ಆದರೆ ಅಸ್ಸಾಂಗೆ ( Assam ) ಅವರ 3 ದಿನಗಳ ಭೇಟಿಯಲ್ಲಿ ಅವರು ಮೌನವಾಗಿದ್ದರು ಎಂದು ಆರೋಪಿಸಿದ್ದಾರೆ. ಅವರು ಕಾನೂನಿನ ನಿಯಮಗಳನ್ನು ರೂಪಿಸಲು ತುಂಬಾ ಸಮಯ ತೆಗೆದುಕೊಳ್ಳುತ್ತಿದ್ದಾರೆ ಆದರೆ ನಾವು ಸಿಎಎ ಬಗ್ಗೆ ನಮ್ಮ ನಿಲುವನ್ನು ಮೊದಲ ದಿನದಿಂದಲೇ ಸ್ಪಷ್ಟಪಡಿಸಿದ್ದೇವೆ, ನಾವು ಕಠಿಣ ಕಾಯ್ದೆಯನ್ನು ವಿರೋಧಿಸುತ್ತೇವೆ ಎಂದು ಬ್ಯಾನರ್ಜಿ ಹೇಳಿದರು.

Yogi Warns 'Abba Jaan': ಸಿಎಎ ವಿರುದ್ಧ ದಂಗೆ ಏಳಿಸುವವರ ಮೇಲೆ ಬುಲ್ಡೋಜರ್‌ ಹತ್ತಿಸಲು ಯೋಚಿಸಲ್ಲ

ಸಿಲ್ಗುರಿಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಮಿತ್ ಶಾ, ಸಿಎಎ ಜಾರಿ ಮಾಡುವುದಾಗಿ ಹೇಳಿದ್ದಾರೆ. ಮಮತಾ ಬ್ಯಾನರ್ಜಿ ಸರ್ಕಾರ ಅಕ್ರಮವಾಗಿ ಒಳನುಸಳಲು ಅವಕಾಶ ಮಾಡಿಕೊಡುತ್ತಿದ್ದಾರೆ. ಈ ಮೂಲಕ ಮತಬ್ಯಾಂಕ್ ಗಟ್ಟಿ ಮಾಡಿಕೊಳ್ಳುತ್ತಿದ್ದಾರೆ. ಭಾರತದ ಭದ್ರತೆ ವಿಚಾರದಲ್ಲಿ ರಾಜಿ ಇಲ್ಲ. ಮತ್ತೆ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಮಾಡುತ್ತೇವೆ ಎಂದು ಅಮಿತ್ ಶಾ ಹೇಳಿದ್ದರು.

Latest Videos
Follow Us:
Download App:
  • android
  • ios