ಬಾಂಬ್ ಸ್ಫೋಟದಿಂದ ಅಲ್ಲ, ಬೆಂಕಿಯಿಂದ ಮಹಿಳೆ ಸಾವು: ಸಣ್ಣ ಘಟನೆ ಎಂದು ಬಿಂಬಿಸಲು ಹೊರಟಿತಾ ಕೇರಳ?
ಕೇರಳದಲ್ಲಿ ಐಇಡಿ ಸ್ಫೋಟದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಭಯೋತ್ಪಾದಕ ಕೃತ್ಯವನ್ನು ಖಂಡಿಸಿ ತನಿಖೆಗೆ ವ್ಯವಸ್ಥೆ ಮಾಡಬೇಕಾದ ಕೇರಳ ಸರ್ಕಾರ ಇದೊಂದು ಸಣ್ಣ ಘಟನೆ ಎಂದು ಬಿಂಬಿಸು ಹುನ್ನಾರ ನಡೆಯುತ್ತಿದೆಯಾ ಅನ್ನೋ ಅನುಮಾನ ಕಾಡತೊಡಗಿದೆ.
ಕೊಚ್ಚಿ(ಅ.29)ಹಮಾಸ್ ಉಗ್ರ ಕೇರಳದ ಕಾರ್ಯಕ್ರಮದಲ್ಲಿ ಹಿಂದೂಗಳು, ಇಸ್ರೇಲ್ ವಿರುದ್ಧ ದ್ವೇಷ ಭಾಷಣ ಮಾಡಿದ ಮರುದಿನವೇ ಸ್ಫೋಟ ಸಂಭವಿಸಿ ಮಹಿಳೆ ಮೃತಪಟ್ಟಿದ್ದರೆ, 50ಕ್ಕೂ ಹೆಚ್ಚುು ಮಂದಿ ಗಾಯಗೊಂಡಿದ್ದಾರೆ. ಆದರೆ ಮಹಿಳೆ ಮೃತಪಟ್ಟಿರುವುದು ಬಾಂಬ್ ಸ್ಫೋಟದಿಂದ ಅಲ್ಲ, ಸ್ಫೋಟದಿಂದ ಆವರಿಸಿದ ಬೆಂಕಿಯಿಂದ ಎಂದು ಕೇರಳ ಸಚಿವ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಮೂಲಕ ತನಿಖೆಗೂ ಮೊದಲೇ ಉಗ್ರರ ಪರ ವಾಲೀತಾ ಕೇರಳ ಸರ್ಕಾರ ಅನ್ನೋ ಅನುಮಾನ ಶುರುವಾಗಿದೆ.
ಕಮ್ಯೂನಿಸ್ಟ್ ಪಾರ್ಟಿ ನಾಯಕ, ಪಿಣರಾಯಿ ಸರ್ಕಾರದಲ್ಲಿ ಸಹಕಾರ ಸಚಿವರಾಗಿರುವ ವಿಎನ್ ವಾಸವನ್ ನೀಡಿರುವ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.ಕೇರಳದ ಕನ್ವೆನ್ಷನ್ ಹಾಲ್‌ನಲ್ಲಿ ಟಿಫಿನ್ ಬಾಕ್ಸ್‌ನಲ್ಲಿ ಐಇಡಿ ಸ್ಫೋಟಕ ಇಟ್ಟು ಬಾಂಬ್ ಸ್ಫೋಟಿಸಲಾಗಿದೆ. ಸ್ಫೋಟದ ತೀವ್ರತೆಗೆ ಕಾರ್ಯಕ್ರಮದ ಹಾಲ್‌ನಲ್ಲಿ ಬೆಂಕಿ ಆವರಿಸಿಕೊಂಡಿದೆ. ಸ್ಥಳದಲ್ಲೇ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಇತ್ತ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ.
ಕೇರಳದಲ್ಲಿ ಸರಣಿ ಸ್ಫೋಟ: ದೆಹಲಿಯಲ್ಲಿ ನಡಿತೀರೋ ಪ್ಯಾಲೆಸ್ತೀನ್ ಪರ ಧರಣಿಯಲ್ಲಿ ಸಿಎಂ ಪಿಣರಾಯಿ ವಿಜಯನ್ ಭಾಗಿ!
ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ವಿಎನ್ ವಾಸವನ್, ಕೇರಳ ಬಾಂಬ್ ಸ್ಫೋಟದಿಂದ ಯಾರೂ ಮೃತಪಟ್ಟಿಲ್ಲ. ಇನ್ನು ಘಟನೆ ನಡೆದ ಸ್ಥಳದಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂದು ವಿಎನ್ ವಾಸವನ್ ಹೇಳಿದ್ದಾರೆ. ಇಲ್ಲಿ ಎರಡು ಸ್ಫೋಟ ಸಂಭವಿಸಿದೆ ಎಂದು ಪ್ರಾಥಮಿಕ ತನಿಖಾ ವರದಿ ಹೇಳುತ್ತಿದೆ. ಘಟನೆ ಕುರಿತು ಸಂಪೂರ್ಣ ತನಿಖೆ ನಡೆಯಲಿದೆ ಎಂದು ವಿಎನ್ ವಾಸವನ್ ಹೇಳಿದ್ದಾರೆ.
ಕೇರಳ ಸರ್ಕಾರ ಸಚಿವರ ಮೂಲಕ ಕೇರಳದಲ್ಲಿ ನಡೆದ ಬಾಂಬ್ ಸ್ಫೋಟ ಸಣ್ಣ ಘಟನೆ, ಬಾಂಬ್ ಸ್ಫೋಟದಿಂದ ಯಾರೂ ಮೃತಪಟ್ಟಿಲ್ಲ. ಹೀಗಾಗಿ ಇದೊಂದು ಸಣ್ಣ ಘಟನೆ ಎಂದು ಬಿಂಬಿಸಲು ಹೊರಟಿದೆಯಾ ಅನ್ನೋ ಅನುಮಾನವನ್ನು ಹಲವರು ವ್ಯಕ್ತಪಡಿಸಿದ್ದಾರೆ.ಕೇರಳ ಸರ್ಕಾರ ಈಗಾಗಲೇ ಹಮಾಸ್ ಉಗ್ರರಿಗೆ ವೇದಿಕೆ ಒದಗಿಸಿಕೊಟ್ಟು ದೇಶಾದ್ಯಂತ ಭಾರಿ ಆಕ್ರೋಶಕ್ಕೆ ತುತ್ತಾಗಿದೆ.
ಪ್ಯಾಲೆಸ್ತಿನ್ ಜನರ ಪರ ಕೇರಳದಲ್ಲಿ ಆಯೋಜನೆಗೊಂಡ ಕಾರ್ಯಕ್ರಮದಲ್ಲಿ ಹಮಾಸ್ ಉಗ್ರ ಖಲೀದ್ ವರ್ಚುವಲ್ ಮೂಲಕ ಭಾಗಿಯಾಗಿದ್ದರು. ಈ ವೇಳೆ ಇಸ್ರೇಲ್ ಹಾಗೂ ಹಿಂದುತ್ವದ ವಿರುದ್ಧ ದ್ವೇಷ ಭಾಷಣ ಮಾಡಿದ್ದರು. ಈ ಕಾರ್ಯಕ್ರಮ ನಡೆದ ಮರುದಿನವೇ ಈ ಸ್ಪೋಟ ಸಂಭವಿಸಿದೆ. ಮತ್ತೊಂದು ಪ್ರಮುಖ ವಿಚಾರ ಎಂದರೆ ಹಮಾಸ್ ಭಯೋತ್ಪಾದಕರು ಹಾಗೂ ಮುಂಬೈ ಮೇಲೆ ದಾಳಿ ಮಾಡಿದ ಪಾಕಿಸ್ತಾನದ ಉಗ್ರ ಹಫೀಜ್ ಸೈಯದ್ ಅತ್ಯಂತ ಆತ್ಮೀಯರಾಗಿದ್ದಾರೆ. ಹೀಗಾಗಿ ಇಂದು ಕೇರಳದಲ್ಲಿ ನಡೆದ ದಾಳಿ ಭಾರತಕ್ಕೆ ನೀಡಿದ ಎಚ್ಚರಿಕೆ ಸಂದೇಶ ಅನ್ನೋ ಮಾತುಗಳನ್ನು ತಜ್ಞರು ಹೇಳುತ್ತಿದ್ದಾರೆ.
ಭಯೋತ್ಪಾದಕ ಕೃತ್ಯ ಅನ್ನೋದು ಮೇಲ್ನೋಟಕ್ಕೆ ಸಾಬೀತಾಗಿದೆ. ಸ್ಫೋಟದಲ್ಲಿ ಐಇಡಿ ಬಳಕೆ ಮಾಡಿರುವುದನ್ನು ಪೊಲೀಸರು ಖಚಿತಪಡಿಸಿದ್ದಾರೆ. ಆದರೆ ಕೇರಳ ಸಚಿವರ ಇಲ್ಲ ಸಲ್ಲದ ಹೇಳಿಕೆ ನೀಡುತ್ತಿರುವುದು ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ.