Asianet Suvarna News Asianet Suvarna News

ಕೇರಳದಲ್ಲಿ ಸರಣಿ ಸ್ಫೋಟ: ದೆಹಲಿಯಲ್ಲಿ ನಡಿತೀರೋ ಪ್ಯಾಲೆಸ್ತೀನ್‌ ಪರ ಧರಣಿಯಲ್ಲಿ ಸಿಎಂ ಪಿಣರಾಯಿ ವಿಜಯನ್‌ ಭಾಗಿ!

ಪ್ಯಾಲೆಸ್ತೀನ್ ಮೇಲಿನ ಇಸ್ರೇಲ್ ದಾಳಿಯ ವಿರುದ್ಧ ರಾಷ್ಟ್ರೀಯ ಮಟ್ಟದ ಪ್ರತಿಭಟನೆಯನ್ನು ಆಯೋಜಿಸಲು  ಸಿಪಿಎಂ ದೆಹಲಿಯಲ್ಲಿ ಧರಣಿ ನಡೆಸುತ್ತಿದ್ದು, ಕೇರಳ ಸಿಎಂ ಪಿಣರಾಯಿ ವಿಜಯನ್‌ ಸಹ ಭಾಗಿಯಾಗಿದ್ದಾರೆ. 

pinarayi vijayan attends pro palestine protest in delhi amid kerala blast ash
Author
First Published Oct 29, 2023, 1:35 PM IST

ನವದೆಹಲಿ (ಅಕ್ಟೋಬರ್ 29, 2023): ಕೇರಳದ ಕಲಮಸ್ಸೆರಿಯಲ್ಲಿ ಕ್ರೈಸ್ತರ ಸಮಾವೇಶದ ಸ್ಥಳದಲ್ಲಿ ತ್ರಿವಳಿ ಸ್ಫೋಟ ಸಂಭವಿಸಿದ್ದು, ಉಗ್ರರ ಕೃತ್ಯದ ಶಂಕೆ ವ್ಯಕ್ತವಾಗಿದೆ. ಘಟನೆಯಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದು, 20 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಐಇಡಿ ಸ್ಫೋಟ ಸಂಭವಿಸಿರುವ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ಎನ್‌ಐಎ ತನಿಖೆ ನಡೆಸುತ್ತಿದೆ. ಟಿಫಿನ್‌ ಬಾಕ್ಸ್‌ನಲ್ಲಿ ಐಇಡಿ ಇಟ್ಟಿರುವ ಬಗ್ಗೆ ವರದಿಯಾಗಿದೆ.

ಈ ಮಧ್ಯೆ, ಕೇರಳದಲ್ಲಿ ಸ್ಫೋಟ ಸಂಭವಿಸಿದ್ರೂ ಅಲ್ಲಿನ ಸಿಎಂ ಪಿಣರಾಯಿ ವಿಜಯನ್‌ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿದ್ದಾರೆ. ಇದು ಪೂರ್ವ ನಿರ್ಧರಿತ ಕಾರ್ಯಕ್ರಮವಾದ್ರೂ, ಪ್ಯಾಲೆಸ್ತೀನ್‌ಗೆ ಬೆಂಬಲ ಸೂಚಿಸಿ ದೆಹಲಿಯಲ್ಲಿ ನಡೆಯುತ್ತಿರೋ ಧರಣಿ ಕಾರ್ಯಕ್ರಮದಲ್ಲಿ ಕೇರಳ ಸಿಎಂ ಭಾಗಿಯಾಗಿರುವುದಕ್ಕೆ ಆಕ್ರೋಶ ವ್ಯಕ್ತವಾಗ್ತಿದೆ. ಸಿಪಿಎಂನ ಧರಣಿಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾಗವಹಿಸಿದ್ದು, ಸಿಪಿಎಂ ಪಾಲಿಟ್‌ಬ್ಯೂರೋ ಮತ್ತು ಕೇಂದ್ರ ಸಮಿತಿ ಸದಸ್ಯರು ಸಹ ಪಾಲ್ಗೊಂಡಿದ್ದಾರೆ. 

ದೆಹಲಿಯ ಎಕೆಜಿ ಭವನದ ಮುಂದೆ ಪ್ಯಾಲೆಸ್ತೀನ್ ಬೆಂಬಲಿಸಿ ಈ ಧರಣಿ ನಡೆಯುತ್ತಿದ್ದು, ಪ್ಯಾಲೆಸ್ತೀನ್ ಮೇಲಿನ ಇಸ್ರೇಲ್ ದಾಳಿಯ ವಿರುದ್ಧ ರಾಷ್ಟ್ರೀಯ ಮಟ್ಟದ ಪ್ರತಿಭಟನೆಯನ್ನು ಆಯೋಜಿಸಲು  ಸಿಪಿಎಂ ದೆಹಲಿಯಲ್ಲಿ ಧರಣಿ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಈ ಮಧ್ಯೆ, ವಿಶ್ವಸಂಸ್ಥೆಯ ನಿರ್ದೇಶನದಂತೆ ತಕ್ಷಣವೇ ಕದನ ವಿರಾಮಕ್ಕೆ ಸಿದ್ಧರಾಗಬೇಕು ಮತ್ತು ಎರಡು ದೇಶಗಳ ಪರಿಹಾರಕ್ಕಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಆದೇಶವನ್ನು ತಕ್ಷಣವೇ ಜಾರಿಗೆ ತರಬೇಕು ಎಂದು ಎಡ ಪಕ್ಷಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ. ಪ್ಯಾಲೆಸ್ತೀನ್‌ನಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಕೊನೆಗಾಣಿಸುವಂತೆಯೂ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದನ್ನು ಓದಿ: ಕೇರಳದಲ್ಲಿ ಹಮಾಸ್‌ ಉಗ್ರ ಭಾಷಣ ಬೆನ್ನಲ್ಲೇ ತ್ರಿವಳಿ ಬಾಂಬ್‌ ಸ್ಪೋಟ: ಮಹಿಳೆ ಬಲಿ, 20ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ

ಅಲ್ಲದೆ, ವಿಶ್ವಸಂಸ್ಥೆಯ ಮತದಾನದಿಂದ ದೂರ ಉಳಿದಿರುವ ಭಾರತದ ನಿಲುವು ಆಘಾತಕಾರಿಯಾಗಿದೆ ಎಂದೂ ಎಡಪಕ್ಷಗಳು ಹೇಳಿಕೆಯಲ್ಲಿ ತಿಳಿಸಿವೆ. ಸಿಪಿಎಂ ಮತ್ತು ಸಿಪಿಐ ಜಂಟಿ ಹೇಳಿಕೆಯಲ್ಲಿ ಈ ನಿಲುವನ್ನು ಟೀಕಿಸಿವೆ. ಅಮೆರಿಕದ ಸಾಮ್ರಾಜ್ಯಶಾಹಿಯ ಅಡಿಯಲ್ಲಿ ಭಾರತದ ವಿದೇಶಾಂಗ ನೀತಿ ಬದಲಾಗುತ್ತಿದೆ ಎಂದೂ ಹೇಳಲಾಗಿದೆ.

ಇನ್ನೊಂದೆಡೆ, ಕೇರಳದಲ್ಲಿ ನಡೆದ ಸ್ಫೋಟದ ಬಗ್ಗೆ ಪಿಣರಾಯಿ ವಿಜಯನ್‌ ಆಘಾತ ವ್ಯಕ್ತಪಡಿಸಿದ್ದು, ಈ ಘಟನೆ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಹ ಕೇರಳ ಮುಖ್ಯಮಂತ್ರಿಗಳೊಂದಿಗೆ ದೂರವಾಣಿ ಮೂಲಕ ಚರ್ಚೆ ನಡೆಸಿದರು. ಸರಣಿ ಸ್ಫೋಟವು ಗಂಭೀರ ವಿಷಯವಾಗಿದೆ ಎಂದು ಅಮಿತ್ ಶಾ ಪಿಣರಾಯಿಗೆ ತಿಳಿಸಿದ್ದು, ತನಿಖೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ) ಒಳಗೊಂಡ ತಂಡವನ್ನು ಕಳುಹಿಸಿದೆ ಎಂದೂ ಹೇಳಿದ್ದಾರೆ. 

ಇದನ್ನು ಓದಿ: ಕೇರಳದ ಪ್ಯಾಲಿಸ್ತೇನ್‌ ಪರ ಸಮಾವೇಶದಲ್ಲಿ ವರ್ಚುವಲ್‌ ಆಗಿ ಮಾತನಾಡಿದ ಹಮಾಸ್‌ ಭಯೋತ್ಪಾದಕ Khaled Mashal

Follow Us:
Download App:
  • android
  • ios