ಉತ್ತರ ಭಾರತ ಅವಮಾನಿಸಿದ ಬಳಿಕ ಭಾರತೀಯ ಸಮಾಜವನ್ನೇ ಟೀಕಿಸಿದ ರಾಹುಲ್!
ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಂದೊಂದೆ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ದಕ್ಷಿಣದಲ್ಲಿ ನಿಂತು ಅಮೇಥಿ, ಉತ್ತರ ಭಾರತ ತೆಗಳಿದ ರಾಹುಲ್ ಗಾಂಧಿ ಇದೀಗ ಭಾರತೀಯ ಸಮಾಜವನ್ನ ಟೀಕಿಸಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ಕೊಚ್ಚಿ(ಮಾ.22): ಪಂಚ ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ಪ್ರಚಾರ ನಡೆಸುತ್ತಿದೆ. ಆದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿ ದಕ್ಷಿಣ ಪ್ರವಾಸ ಇದೀಗ ವಿವಾದವಾಗಿ ಮಾರ್ಪಡುತ್ತಿದೆ. ಕಳೆದ ಬಾರಿ ದಕ್ಷಿಣದಲ್ಲಿ ನಿಂತು ಗಾಂಧಿ ಪರಿವಾರವನ್ನು ಪ್ರತಿ ಬಾರಿ ಗೆಲ್ಲಿಸಿ ಕೊಟ್ಟ ಅಮೇಥಿ ಸೇರಿ ಉತ್ತರ ಭಾರತವನ್ನೇ ತೆಗಳಿದ್ದರು. ಇದೀಗ ಕೇರಳದ ಕೊಚ್ಚಿಯಲ್ಲಿ ನಿಂತು, ಭಾರತದ ಸಮಾಜವೇ ಕೆಟ್ಟದು ಎಂದಿದ್ದಾರೆ.
ಕೇರಳದಲ್ಲಿ ನಿಂತು ಅಮೇಥಿ, ಉತ್ತರ ಭಾರತ ತೆಗಳಿದ ರಾಹುಲ್ ಗಾಂಧಿಗೆ ಮಂಗಳಾರತಿ!
ಭಾರತದ ಸಮಾಜ ನಿಮ್ಮನ್ನು ತುಂಬಾ ಕೆಟ್ಟದಾಗಿ ಪರಿಗಣಿಸುತ್ತದೆ. ಅದು ಪ್ರತಿದಿನ ನಿಮ್ಮನ್ನು ಅವಮಾನಿಸುತ್ತದೆ. ಅದು ನೀವು ಏನು ಮಾಡಬೇಕು ಅನ್ನೋದನ್ನು ಮಾಡಲು ಬಿಡುವುದಿಲ್ಲ. ಸಮಾಜ ನಿಮ್ಮ ಮೇಲೆ ಆಕ್ರಮಣ ಮಾಡುತ್ತದೆ. ಹೀಗಾಗಿ ನೀವು ನಿಮ್ಮೊಳಗಿನ ಶಕ್ತಿಯನ್ನು ಊರ್ಜಿತಗೊಳಿಸಬೇಕು. ಈ ವೇಳೆ ನಿಮ್ಮನ್ನು ನೋಯಿಸುವ ಶಕ್ತಿಗಳನ್ನು ನೀವು ಅರ್ಥಮಾಡಿಕೊಳ್ಳಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಸಂವಾದ ವೇಳ ಪ್ರಶ್ನಯೊಂದಕ್ಕೆ ಉತ್ತರಿಸುತ್ತಾ ಭಾರತೀಯ ಸಮಾಜದ ಕುರಿತು ಹೇಳಿಕೆ ನೀಡಿದ್ದಾರೆ. ಕೇರಳ ವಿಧಾನಸಭಾ ಚುನಾವಣೆಗೂ ಮುನ್ನ ರಾಹುಲ್ ಗಾಂಧಿ ಹೇಳಿಕೆ ಮಾತ್ರವಲ್ಲ, ಕೇರಳ ಕಾಂಗ್ರೆಸ್‌ನಲ್ಲೂ ಬಿರುಕು ಹೆಚ್ಚಾಗಿದೆ. ಘಟಾನುಘಟಿ ನಾಯಕರೇ ಒಬ್ಬರ ಹಿಂದೊಬ್ಬರು ಪಕ್ಷ ತೊರೆದು ಹೊರಬರುತ್ತಿದ್ದಾರೆ.