ಪೊಲೀಸರ ಕಂಡರೆ ದಾಳಿ ಮಾಡುವಂತೆ ನಾಯಿಗಳಿಗೆ ಟ್ರೇನಿಂಗ್: ಕೇರಳ ಡ್ರಗ್ಸ್ ವ್ಯಾಪಾರಿಯ ಭಯಾನಕ ಕುತಂತ್ರ
ಡ್ರಗ್ಸ್ (Drug) ವ್ಯಾಪಾರ ಮಾಡುತ್ತಿದ್ದ ಆರೋಪಿಯ ಮನೆಗೆ ದಾಳಿಗೆಂದು ಹೋದ ಮಾದಕವಸ್ತು ನಿಗ್ರಹ ದಳದ ಪೊಲೀಸರು ಆರೋಪಿಯ ಕುತಂತ್ರದಿಂದ ಅಲ್ಲಿದ್ದ ತರಬೇತಿ ಪಡೆದ 13 ನಾಯಿಗಳಿಂದ ದಾಳಿಗೊಳಗಾದ ಘಟನೆ ಕೇರಳದ (Kerala) ಕೊಟ್ಟಾಯಂನಲ್ಲಿ ನಡೆದಿದೆ.

ಕೊಟ್ಟಾಯಂ: ಕೆಂಪು ಬಟ್ಟೆ ತೊಟ್ಟವರ ಮೇಲೆ ಗೂಳಿಗಳು ದಾಳಿ ಮಾಡುವುದ್ದನ್ನು ನಾವು ನೋಡಿದ್ದೇವೆ. ಆದರೆ ಕೇರಳದಲ್ಲಿ ಖಾಕಿ ತೊಟ್ಟವರ ಮೇಲೆ ದಾಳಿ ಮಾಡುವ ನಾಯಿಗಳಿವೆ..! ಹೌದು. ಡ್ರಗ್ಸ್ (Drug) ವ್ಯಾಪಾರ ಮಾಡುತ್ತಿದ್ದ ಆರೋಪಿಯ ಮನೆಗೆ ದಾಳಿಗೆಂದು ಹೋದ ಮಾದಕವಸ್ತು ನಿಗ್ರಹ ದಳದ ಪೊಲೀಸರು ಆರೋಪಿಯ ಕುತಂತ್ರದಿಂದ ಅಲ್ಲಿದ್ದ ತರಬೇತಿ ಪಡೆದ 13 ನಾಯಿಗಳಿಂದ ದಾಳಿಗೊಳಗಾದ ಘಟನೆ ಕೇರಳದ (Kerala) ಕೊಟ್ಟಾಯಂನಲ್ಲಿ ನಡೆದಿದೆ.
ಆರೋಪಿಯು ಖಾಕಿ ಬಟ್ಟೆ (Police Uniform) ತೊಟ್ಟವರ ಮೇಲೆ ದಾಳಿ ಮಾಡುವಂತೆ ನಾಯಿಗಳಿಗೆ ತರಬೇತಿ ನೀಡಿದ್ದ. ಹೀಗಾಗಿ ಖಾಕಿ ಧರಿಸಿ ಹೋಗಿದ್ದ ಎನ್‌ಸಿಬಿ (NCB) ಅಧಿಕಾರಿಗಳ ಮೇಲೆ ನಾಯಿಗಳು ದಾಳಿ ಮಾಡಿವೆ ಎಂಬ ಭಯಾನಕ ಅಂಶ ಹೊರಬಿದ್ದಿದೆ. ಆದಾಗ್ಯೂ ಪೊಲೀಸರು 17 ಕೇಜಿಗೂ ಅಧಿಕ ಗಾಂಜಾ ವಶಪಡಿಸಿಕೊಂಡಿದ್ದಾರೆ. ಆದರೆ ಪೊಲೀಸರು ನಾಯಿಗಳಿಂದ ತಪ್ಪಿಸಿಕೊಳ್ಳುವ ಯತ್ನ ಮಾಡಿದಾಗ ಆರೋಪಿ ಪರಾರಿಯಾಗಿದ್ದಾನೆ. ಅದೃಷ್ಟವವಶಾತ್ ಯಾವುದೇ ಪೊಲೀಸರಿಗೆ ನಾಯಿಗಳಿಂದ ಗಾಯಗಳಾಗಿಲ್ಲ.
ಪೂಜೆ ನಂತರ ಭಾರತೀಯ ವಾಯುಪಡೆಗೆ ಸೇರ್ಪಡೆಯಾದ ಸಿ 295 ವಿಮಾನ
ಈ ಬಗ್ಗೆ ಮಾತನಾಡಿದ ಕೊಟ್ಟಾಯಂ ಎಸ್‌ಪಿ (Kottayam SP) ಕೆ ಕಾರ್ತಿಕ್ (K.Karthik), ‘ಇಲ್ಲಿ ಇಷ್ಟೊಂದು ನಾಯಿಗಳು ಇರುತ್ತವೆ ಎಂದು ನಾವು ಊಹಿಸಿರಲಿಲ್ಲ. ಕಾರ್ಯಾಚರಣೆಯ ಪ್ರಾರಂಭದಲ್ಲಿ ನಮಗೆ ಅವುಗಳಿಂದ ತೊಂದರೆಯಾಯಿತು. ಖಾಕಿಗಳಿಗೆ ಕಚ್ಚುವಂತೆ ಆರೋಪಿ ನಾಯಿಗಳಿಗೆ ತರಬೇತಿ ನೀಡಿದ್ದಾನೆ’ ಎಂದಿದ್ದಾರೆ.
ಭಾರತದ ಬಗ್ಗೆ ಹೆಮ್ಮೆ ಇದೆ: ಕೆನಡಾ ವಿಚಾರದಲ್ಲಿ ಭಾರತದ ಬೆಂಬಲಕ್ಕೆ ನಿಂತ ಬಾಂಗ್ಲಾದೇಶ
ತರಬೇತಿಗೆ ದಿನಕ್ಕೆ 1000 ರು.!
ಈತ ತಾನು ನಾಯಿಯ ತರಬೇತುದಾರ ಎಂದು ಹೇಳಿಕೊಳ್ಳುತ್ತಿದ್ದ. ಹೀಗಾಗಿ ಕೆಲವು ಶ್ರೀಮಂತರು ದಿನಕ್ಕೆ 1000 ರು. ಕೊಟ್ಟು ಈತನ ಮನೆಗೆ ತರಬೇತಿಗೆ ಎಂದು ನಾಯಿ ಬಿಟ್ಟು ಹೋಗುತ್ತಿದ್ದರು. ಈ ವೇಳೆ ಸುತ್ತಮುತ್ತಲಿನ ಮನೆಯ ನಾಯಿಗಳಿಗೆ ಖಾಕಿ ಕಂಡರೆ ದಾಳಿ ಮಾಡುವ ತರಬೇತಿ ನೀಡಿದ್ದಾನೆ ಪ್ರಕರಣದ ತನಿಖೆಗಾಗಿ ವಿಶೇಷ ತಂಡ ರಚಿಸಲಾಗಿದ್ದು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.
ವಿದೇಶದ ಅತಿ ದೊಡ್ಡ ಹಿಂದೂ ದೇಗುಲ ಅಮೆರಿಕದಲ್ಲಿ: 183 ಎಕರೆಯಲ್ಲಿರುವ ಸ್ವಾಮಿನಾರಾಯಣ ದೇಗುಲ
ಈಗ ಇಲ್ಲಿ 13 ನಾಯಿಗಳು ಇದ್ದು ಮಾಲೀಕರನ್ನು ಗುರುತಿಸಿ ವಾಪಸು ನೀಡಲಾಗುತ್ತದೆ ಎಂದು ಹೇಳಿದ್ದಾರೆ.