ಶ್ರೀನಗರ (ಸೆ.25) : ಜಮ್ಮು ಮತ್ತು ಕಾಶ್ಮೀರದ ಜನರಿಗೆ ನಾವು ಭಾರತೀಯರು ಎಂದು ಅನಿಸುವುದೇ ಇಲ್ಲ. ಏಕೆಂದರೆ ಅವರನ್ನು ಈಗಿನ ಕೇಂದ್ರಾಡಳಿತದಲ್ಲಿ ಎರಡನೇ ದರ್ಜೆ ಪ್ರಜೆಗಳಂತೆ ಕಾಣಲಾಗುತ್ತಿದೆ. 

ಹೀಗಾಗಿ ಇದಕ್ಕಿಂತ ಚೀನಿಯರ ಆಡಳಿತವೇ ಲೇಸು ಎಂಬ ಅಭಿಪ್ರಾಯ ಸ್ಥಳೀಯರಲ್ಲಿ ಮೂಡತೊಡಗಿದೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ಹೇಳಿದ್ದಾರೆ. 

ನಮ್ಮನ್ನು ದೇಶದ ಎರಡನೇ ದರ್ಜೆಯ ಪ್ರಜೆಗಳಂತೆ, ಒಂದು ರೀತಿಯಲ್ಲಿ ‘ಗುಲಾಮ’ರಂತೆ ನೋಡಲಾಗುತ್ತಿದೆ. ಹೀಗಾಗಿಯೇ ಕಾಶ್ಮೀರಕ್ಕೆ ಬಂದು ಯಾರೇ ಮಾತನಾಡಿಸಿದರೂ ಎಲ್ಲರೂ ನಾನು ಭಾರತೀಯ ಎಂದು ಯಾರೂ ಹೇಳಿಕೊಳ್ಳುವುದಿಲ್ಲ. ಹಾಗಂತ ಯಾರೂ ಪಾಕಿಸ್ತಾನಿ ಎಂದೂ ಹೇಳಿಕೊಳ್ಳುವುದಿಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಮೋದಿ ಬರ್ತಿದ್ದಂತೆ ಸಂಸತ್‌ನಲ್ಲಿ ಭಾರತ್‌ ಮಾತಾ ಕೀ ಜೈ, ಜೈ ಶ್ರೀರಾಮ್ ಘೋಷಣೆ!

ಕಾಶ್ಮೀರ ವಿಚಾರವಾಗಿ ಮೊದಲಿನಿಂದಲೂ ಸಾಕಷ್ಟು ರೀತಿಯ ವಿವಾದಗಳು ನಡೆಯುತ್ತಿದ್ದು, ಪಾಕಿಸ್ತಾನ - ಭಾರತದ ನಡುವೆ ಕಲಹಗಳು ಮುಂದುವರಿದಿವೆ. ಇಂದಿಗೂ ಇದೊಂದು ವಿವಾದದ ವಿಚಾರವೇ ಆಗಿದೆ. ಇದೀಗ ಕಾಶ್ಮೀರ ಮಾಜಿ ಸಿಎಂ ಈ ರೀತಿ ವಿವಾದಿತ ಹೇಳಿಕೆ ನೀಡಿದ್ದಾರೆ.