ಸಂಸತ್ ಅಧಿವೇಶನ ಮುಕ್ತಾಯ/ ಪ್ರಧಾನಿ ಮೋದಿನ ಆಗಮನದ ವೇಳೆ ಭಾರತ್ ಮಾತಾ ಕೀ ಜೈ ಘೋಷಣೆ/ ಜೈ ಶ್ರೀರಾಮ್ ಎಂದು ಪ್ರಧಾನಿ ಸ್ವಾಗತಿಸಿದ ಸಂಸದರು

ನವದೆಹಲಿ(ಸೆ. 24) ಎಂಟು ದಿನಗಳ ಸಂಸತ್ ಅಧೀವೇಶನ ಮುಕ್ತಾಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ಕೊನೆಯ ದಿನದ ಕಲಾಪದಲ್ಲಿ ಭಾಗವಹಿಸಲು ಆಗಮಿಸಿದಾಗ ಸಂಸದರು ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರಧಾನಿ ಮೋದಿ ಮಾಸ್ಕ್ ಧರಿಸಿ ಲೋಕಸಭೆಯನ್ನು ಪ್ರವೇಶ ಮಾಡುತ್ತಿದ್ದಂತೆ ಆಡಳಿತ ಪಕ್ಷದ ಸಂಸದರು ಭಾರತ್ ಮಾತಾ ಕೀ ಜೈ ಮತ್ತು ಜೈ ಸ್ರೀರಾಮ್ ಎಂದು ಘೋಷಣೆ ಕೂಗಿದ್ದಾರೆ.

ಸಂಸತ್ತಿನ ಗ್ಯಾಲರಿಯಲ್ಲಿಯೂ ಘೋಷಣೆ ಮೊಳಗಿದೆ. ಪ್ರಧಾನಿ ಮೋದಿ ಸ್ವಾಗತವನ್ನು ಸ್ವೀಕಾರ ಮಾಡಿದರು.

ಇದಾದ ಮೇಲೆ ಮೋದಿ ಎಂದಿನಂನೆ ಕಾರ್ಯ ಕಲಾಪದಲ್ಲಿ ಭಾಘಿಯಾದರು. ಈ ಬಾರಿಯ ಅಧಧಿವೇಶನದಲ್ಲಿ ಕೃಷಿ ಬಿಲ್, ಎಪಿಎಂಸಿ ಬಿಲ್ ಬಹಳ ದೊಡ್ಡ ಮಟ್ಟದ ಚರ್ಚೆ ಮಾಡಿತು. ಕೊರೋನಾ ನಿರ್ವಹಣೆಗೆ ಸಂಬಂಧಿಸಿದ ವಿಚಾರಗಳು ಪ್ರತಿಧ್ವನಿಸಿದವು.