Asianet Suvarna News Asianet Suvarna News

ಭಯೋತ್ಪಾದಕಿ ಎಂದು ಆರೋಪಿಸಿ ಕಾಶ್ಮೀರಿ ಯುವತಿ ಮೇಲೆ ಹಲ್ಲೆ

ಕಾಶ್ಮೀರದ ಯುವತಿ ಮೇಲೆ ದೆಹಲಿಯಲ್ಲಿ ದೌಜ್ಯನ್ಯ | ಭಯೋತ್ಪಾದಕಿ ಎಂದು ಹಲ್ಲೆ

Kashmiri woman alleges landlady called her terrorist removed her furniture dpl
Author
Bangalore, First Published Oct 16, 2020, 1:07 PM IST
  • Facebook
  • Twitter
  • Whatsapp

ದೆಹಲಿ(ಅ.16): ಕಾಶ್ಮೀರದವಳು ಎಂಬ ಕಾರಣದಿಂದ ಯುವತಿಯನ್ನು ಭಯೋತ್ಪಾದಕಿ ಎಂದು ಕರೆದು ಆಕೆಯ ಮೇಲೆ ದೌಜ್ಯನ್ಯ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ. ದೆಹಲಿಯ ಲಜಪತ್ ನಗರದಲ್ಲಿ ಘಟನೆ ನಡೆದಿದೆ. 

ಯುವತಿ ತಾನು ಕಾಶ್ಮೀರಿಯಾಗಿರುವುದರಿಂದ ತನ್ನನ್ನು ಟಾರ್ಗೆಟ್ ಮಾಡಲಾಗಿದೆ. ನಾನು ಮನೆಯಲ್ಲಿರದ ವೇಳೆ ಎಲ್ಲ ವಸ್ತುಗಳನ್ನು ತೆಗೆಯಲಾಗಿದೆ ಎಂದು ಆರೋಪಿಸಿದ್ದಾರೆ. ಯುವತಿ ಘಟನೆ ನಡೆದ ಮರುದಿನ ದೂರು ನೀಡಿದ್ದಾರೆ.

ಕಣಿವೆರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳ ಮೈತ್ರಿ: ಜಮ್ಮುಕಾಶ್ಮೀರ ವಿಶೇಷ ಸ್ಥಾನಮಾನ ಹಿಂಪಡೆಯಲು ಪಣ

ನನ್ನ ಮಾಲಕಿ ಫ್ಲಾಟ್‌ಗೆ ನುಗ್ಗಿ  ನಮ್ಮ ಹಣ, ವಸ್ತುಗಳನ್ನು ಕೊಂಡೊಯ್ದಿದ್ದಾರೆ. ನಮ್ಮನ್ನು ಸುಳ್ಳು ಕೇಸಿನಲ್ಲಿ ಸಿಕ್ಕಿಸಿಹಾಕಿದ್ದಾರೆ. ಮಾಲೀಕಳ ಜೊತೆಗೆ ಬಂದ ವ್ಯಕ್ತಿ ತನ್ನನ್ನು ತಳ್ಳಿ ಹಾಕಿದ, ಪೊಲೀಸರ ಎದುರೇ ಮಾಲಕಿ ದೌರ್ಜನ್ಯ ಮಾಡಿದ್ದಾಳೆ ಎಂದು ದೆಹಲಿ ಮಹಿಳಾ ಆಯೋಗ ತಿಳಿಸಿದೆ.

ಅಕ್ರಮವಾಗಿ ಮನೆಯೊಳಗೆ ನುಗ್ಗಿ ದಾಂಧಲೆ ಮಾಡಿ, ನಾನು ಮತ್ತು ನನ್ನ ಗೆಳತಿ ಕಾಶ್ಮೀರದವರಾಗಿದ್ದಕ್ಕೆ ಭಯೋತ್ಪಾದಕರೆಂದು ಕರೆದಿದ್ದಾರೆ. ಯುವತಿ ಈ ವಿಚಾರವನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾಳೆ. ಇದಕ್ಕೆ ಪ್ರತಿಕ್ರಿಯಿಸಿದ ಮಹಿಳಾ ಆಯೋಗ ಇದು ಶಾಕಿಂಗ್ ಮತ್ತು ನಾಚಿಗೆ ವಿಷಯ. ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ.

Follow Us:
Download App:
  • android
  • ios