ಶ್ರೀನಗರ(ಅ.16): ಕಣಿವೆ ರಾಜ್ಯದ ಪ್ರಾದೇಶಿಕ ಪಕ್ಷಗಳು ಒಟ್ಟಾಗಿವೆ. ಜಮ್ಮು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆಯಲು  ಪಣತೊಟ್ಟಿವೆ. ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಡಾ. ಫರೂಕ್ ಅಬ್ದುಲ್ಲ ಅವರು ಗುರುವಾರ ಈ ಸಂಬಂಧ ಸಭೆ ನಡೆಸಿದ್ದಾರೆ.

ಸುಮಾರು 6 ಪ್ರಾದೇಶಿಕ ಪಕ್ಷಗಳು ಒಟ್ಟಾಗಿ ಸಭೆ ನಡೆಸಿದ್ದು, ಪೀಪಲ್ಸ್ ಎಲಯನ್ಸ್ ಫಾರ್ ಗುಪ್ಕಾರ್ ಡಿಕ್ಲರೇಷನ್ ಎಂಬ ಗುಂಪು ಮಾಡಿದ್ದಾರೆ. ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನಕ್ಕಾಗಿ ಹೋರಾಡಲು ಕಳೆದ ವರ್ಷ ಅಗಸ್ಟ್‌ 4ರಂದು ಗುಪ್ಕಾರ್ ಡಿಕ್ಲರೇಷನ್‌ಗೆ ಸಹಿ ಮಾಡಲಾಗಿತ್ತು.

ಪಾಕ್‌ ಅಧಿಕಾರಿಯ ಪಾಳು ಬಿದ್ದ ಸಮಾಧಿ ದುರಸ್ತಿ ಮಾಡಿದ ಭಾರತೀಯ ಸೇನೆ..!

ನಮ್ಮ ಉದ್ದೇಶ ಜಮ್ಮು ಕಾಶ್ಮೀರದ ಸ್ಥಾನಮಾನವನ್ನು ಮರಳಿ ಪಡೆಯುವುದು. ಇದೊಂದು ಸಂವಿಧಾನಿಕ ಹೋರಾಟ. ಆರ್ಟಿಕಲ್ 370 ಅನುಷ್ಠಾನಕ್ಕೂ ಮುನ್ನ ಲಡಾಖ್ ಸೇರಿ ಜಮ್ಮು ಕಾಶ್ಮೀರದ ಜನರಿಗಿದ್ದ ಹಕ್ಕುಗಳನ್ನು ಹಿಂಪಡೆಯುವುದು ನಮ್ಮ ಹೋರಾಟದ ಉದ್ದೇಶ ಎಂದು ಮೂರು ಬಾರಿ ಸಿಎಂ ಅಬ್ದುಲ್ಲ ತಿಳಿಸಿದ್ದಾರೆ.

ಡಾ. ಅಬ್ದುಲ್ಲ ಅವರ ಮನೆಯಲ್ಲಿ ನಡೆದ ಸಭೆಯಲ್ಲಿ ಪೀಪಲ್ಸ್ ಡೆಮಾಕ್ರೆಟಿಕ್ ಪಕ್ಷದ ಅಧ್ಯಕ್ಷೆ ಮೆಹಬೂಬ ಮುಫ್ತಿ, ಪೀಪಲ್ಸ್ ಕಾನ್ಫರೆನ್ಸ್ ಮುಖ್ಯಸ್ಥ ಸಜದ್ ಲೋನ್, ಸಿಪಿಐಎಂ ಮುಖ್ಯಸ್ಥ ಎಂವೈ ತರಿಗಾಮಿ ಸಭೆಯಲ್ಲಿ ಭಾಗವಹಿಸಿದ್ದರು. 14 ತಿಂಗಳ ಗೃಹ ಬಂಧನದಿಂದ ಬಿಡುಗಡೆಯಾದ ಮೆಹಬೂಬ ಮುಫ್ತಿ ಗುರುವಾರ ಅವರ ತಂದೆಯ ಸಮಾಧಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.