ನಿಷೇಧಿತ ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್‌ಎಫ್) ಮುಖ್ಯಸ್ಥ ಯಾಸಿನ್ ಮಲಿಕ್ ಕಳೆದ ತಿಂಗಳು ಉಪವಾಸ ಸತ್ಯಾಗ್ರಹವನ್ನು ಘೋಷಣೆ ಮಾಡಿದ್ದರು. 10 ದಿನಗಳ ಉಪವಾಸ ಸತ್ಯಾಗ್ರಹವನ್ನು ಅವರು ಅಂತ್ಯ ಮಾಡಿದ್ದಾರೆ ಎಂದು ಜೈಲು ಅಧಿಕಾರಿಗಳು ಘೋಷಣೆ ಮಾಡಿದ್ದಾರೆ.

ನವದೆಹಲಿ (ಆ.2): ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ತನ್ನ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದ 10 ದಿನಗಳ ನಂತರ ಸೋಮವಾರ ಈ ಹೋರಾಟವನ್ನು ನಿಲ್ಲಿಸಿದ್ದಾರೆ. ನಿಷೇಧಿತ ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್‌ಎಫ್) ಮುಖ್ಯಸ್ಥನಿಗೆ ಜಮ್ಮುವಿನಲ್ಲಿ ನಡೆದ ಭಯೋತ್ಪಾದನಾ ಪ್ರಕರಣದಲ್ಲಿ ದೈಹಿಕವಾಗಿ ಹಾಜರಾಗಲು ಅನುಮತಿ ನಿರಾಕರಿಸಿದ್ದ ಕಾರಣಕ್ಕೆ ಉಪವಾಸ ಸತ್ಯಾಗ್ರಹವನ್ನು ಘೋಷಣೆ ಮಾಡಿದ್ದುರ. ಇದರಲ್ಲಿ ಅವರು ಪ್ರಮುಖ ಆರೋಪಿಯಾಗಿದ್ದಾರೆ. ತಮ್ಮ ಬೇಡಿಕೆಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ತಿಳಿಸಿದ ನಂತರ, ಸುಮಾರು ಎರಡು ತಿಂಗಳ ಕಾಲ ಮುಷ್ಕರವನ್ನು ಮುಂದೂಡುತ್ತಿರುವುದಾಗಿ ಹೇಳಿದ್ದಾರೆ. ತಿಹಾರ್‌ ಜೈಲಿನಲ್ಲಿ ಜುಲೈ 22 ರಿಂದ ಆರೋಪಿ ಯಾಸಿನ್‌ ಮಲಿಕ್‌ ಉಪವಾಸ ಸತ್ಯಾಗ್ರಹ ಅರಂಭಿಸಿದ್ದರು. ಜೈಲು ವಿಭಾಗದ ಡಿಜಿ ಅವರ ಮನವಿಯ ಮೇರೆಗೆ ತಮ್ಮ ಉಪವಾಸ ಸತ್ಯಾಗ್ರಹವನ್ನು ಅವರು ಅಂತ್ಯ ಮಾಡಿದ್ದಾರೆ. ಯಾಸಿನ್‌ ಮಲಿಕ್‌ ಕೇಳಿದ್ದ ಬೇಡಿಕೆಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿರುವುದಾಗಿ ಡಿಜಿ, ಯಾಸಿನ್‌ ಮಲಿಕ್‌ಗೆ ಹೇಳಿದ್ದರು. ಇದರ ಬೆನ್ನಲ್ಲಿಯೇ ಉಪವಾಸ ಸತ್ಯಾಗ್ರಹವನ್ನು ಅಂತ್ಯ ಮಾಡುವಂತೆ ಮನವಿ ಮಾಡಿದ್ದರು. ಇದಕ್ಕೆ ಯಾಸಿನ್‌ ಮಲಿಕ್‌ ಕೂಡ ಒಪ್ಪಿದ್ದು ಎರಡು ತಿಂಗಳ ಕಾಲ ಸತ್ಯಾಗ್ರಹವನ್ನು ಮುಂದೂಡಿಕೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ ಎಂದು ತಿಹಾರ್‌ ಜೈಲಿನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕಳೆದ ವಾರ, ಅವರ ಉಪವಾಸ ಐದನೇ ದಿನಕ್ಕೆ ಕಾಲಿಟ್ಟಾಗ ಅವರನ್ನು ಮಧ್ಯ ದೆಹಲಿಯ ರಾಮ್ ಮನೋಹರ್ ಲೋಹಿಯಾಗೆ ದಾಖಲಿಸಲಾಗಿತ್ತು. ಜುಲೈ 29 ರಂದು ಅವರು ತಿಹಾರ್ ಜೈಲಿಗೆ ಮರಳಿದ್ದರು. ಜುಲೈ 13 ರಂದು ಜಮ್ಮುವಿನ ವಿಶೇಷ ನ್ಯಾಯಾಲಯಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾದಾಗ, ಭಯೋತ್ಪಾದಕ ಮತ್ತು ಸ್ಪೋಟಕ ಚಟುವಟಿಕೆಗಳ (ತಡೆ) ನ್ಯಾಯಾಲಯದ ಮುಂದೆ ಭೌತಿಕ ಹಾಜರಾತಿಗಾಗಿ ಸರ್ಕಾರಕ್ಕೆ ಪತ್ರ ಬರೆದಿದ್ದರು. ಡಿಸೆಂಬರ್ 1989 ರಲ್ಲಿ ಮಾಜಿ ಗೃಹ ಸಚಿವ ಮತ್ತು ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಅವರ ಪುತ್ರಿ ರುಬಯ್ಯ ಸಯೀದ್ ಅವರ ಅಪಹರಣಕ್ಕೆ ಸಂಬಂಧಪಟ್ಟಂತೆ ಅವರ ವಿಚಾರಣೆ ನಡೆಯುತ್ತಿದೆ.

1990 ರಲ್ಲಿ ನಾಲ್ವರು ಭಾರತೀಯ ವಾಯುಪಡೆ (ಐಎಎಫ್) ಅಧಿಕಾರಿಗಳ ಹತ್ಯೆಗೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಹಾಜರಾಗಿದ್ದರು. ಭಯೋತ್ಪಾದನೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ನಂತರ ಜೆಕೆಎಲ್‌ಎಫ್‌ ಮುಖ್ಯಸ್ಥನನ್ನು ತಿಹಾರ್‌ನ ಜೈಲು ಸಂಖ್ಯೆ 7 ರಲ್ಲಿನ ಹೈ-ರಿಸ್ಕ್ ಸೆಲ್‌ನಲ್ಲಿ ಏಕಾಂಗಿಯಾಗಿ ಇರಿಸಲಾಗಿತ್ತು.

ತಿಹಾರ್‌ ಜೈಲಿನಲ್ಲಿ ಯಾಸಿನ್‌ ಮಲಿಕ್ ಆಮರಣಾಂತ ಉಪವಾಸ ಸತ್ಯಾಗ್ರಹ!

ನಿಷೇಧಿತ ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್‌ಎಫ್) ನ (Jammu and Kashmir Liberation Front) 56 ವರ್ಷದ ಮುಖ್ಯಸ್ಥ ಭಯೋತ್ಪಾದನೆ-ಧನಸಹಾಯ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ( life sentence) ಅನುಭವಿಸುತ್ತಿದ್ದಾರೆ."ನನ್ನ ಕೋರಿಕೆಯ ಮೇರೆಗೆ, ಜುಲೈ 22 ರಿಂದ ತಿಹಾರ್ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಅಪರಾಧಿ ಯಾಸಿನ್ ಮಲಿಕ್ ಇಂದು (ಸೋಮವಾರ) ಸಂಜೆ ತನ್ನ ಉಪವಾಸವನ್ನು ನಿಲ್ಲಿಸಿದ್ದಾರೆ" ಎಂದು ಜೈಲ್‌ ಡಿಜಿ ಗೋಯೆಲ್ (Jail DG Goel ) ಹೇಳಿದ್ದಾರೆ.

ಉಗ್ರ ಯಾಸಿನ್‌ಗೆ ಶಿಕ್ಷೆಯಾದರೆ ಭಾರತದ ವಿರುದ್ಧ ಘೋಷಣೆ, ಭಯೋತ್ಪಾದಕರಿಗೆ ಬಹುಪರಾಕ್

ಐವಿ ದ್ರವ ನೀಡಲಾಗಿದೆ: ಪ್ರತ್ಯೇಕತಾವಾದಿ ನಾಯಕನನ್ನು ತಿಹಾರ್‌ನ ಜೈಲು ಸಂಖ್ಯೆ 7 ರಲ್ಲಿ ಹೆಚ್ಚಿನ ಹೈ ರಿಸ್ಕ್‌ ಸೆಲ್‌ನಲ್ಲಿ ಏಕಾಂಗಿಯಾಗಿ ಇರಿಸಲಾಗಿದ್ದು, ಜೈಲಿನ ವೈದ್ಯಕೀಯ ತನಿಖಾ (ಎಂಐ) ಕೋಣೆಗೆ ಸ್ಥಳಾಂತರ ಮಾಡಲಾಗುತ್ತದೆ, ಅಲ್ಲಿ ಅವರಿಗೆ ಐವಿ ದ್ರವಗಳನ್ನು ನೀಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಲಿಕ್ ಆಸ್ಪತ್ರೆಯ ವೈದ್ಯರಿಗೆ ಪತ್ರ ಸಲ್ಲಿಕೆ ಮಾಡಿದ್ದು, ತಾವು ಚಿಕಿತ್ಸೆ ಪಡೆಯಲು ಬಯಸುತ್ತಿಲ್ಲ ಎಂದು ಅವರು ಹೇಳಿದ್ದರು.