ಕಾಶ್ಮೀರ(ಡಿ.18): 91 ಲಕ್ಷ ರೂ.ಗಳ ಸಾಲವನ್ನು ಮರುಪಾವತಿಸಲು ಸಾಧ್ಯವಾಗದೆ ಕುಲ್ಗಾಂ ಮೂಲದ ವ್ಯಕ್ತಿಯೊಬ್ಬರು ತಮ್ಮ ಸ್ವಂತ ಕಿಡ್ನಿ ಮಾರಾಟ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಈ ವ್ಯಕ್ತಿ ತನ್ನ ಕಿಡ್ನಿ ಮಾರಾಟ ಮಾಡುವ ಜಾಹೀರಾತನ್ನು ಶ್ರೀನಗರ ಮೂಲದ ಕಾಶ್ಮೀರ ರೀಡರ್ ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ.

ವ್ಯಕ್ತಿಯನ್ನು ಸಬ್ಜರ್ ಅಹ್ಮದ್ ಖಾನ್ ಎಂದು ಗುರುತಿಸಲಾಗಿದೆ. ಖಾನ್ ಕುಲ್ಗಂ ಜಿಲ್ಲೆಯ ಖಾಜಿಗುಂಡ್‌ನ ನುಸು ಗ್ರಾಮದ ನಿವಾಸಿ. 28 ವರ್ಷದ ವ್ಯಕ್ತಿ ಕಾರು ಮಾರಾಟಗಾರನಾಗಿ ಕೆಲಸ ಮಾಡುತ್ತಿದ್ದಾರೆ.

ಉಲ್ಟಾ ಹೊಡೆದ ದಿಲ್ಲಿ ಸಿಎಂ ಕೇಜ್ರಿವಾಲ್‌ !

ಉದ್ಯಮದಲ್ಲಿ ಭಾರೀ ನಷ್ಟ ಅನುಭವಿಸಿದ ಇವರು ಮೈತುಂಬಾ ಸಾಲವನ್ನೂ ಇಟ್ಟುಕೊಂಡಿದ್ದಾರೆ. ನಾನು ನನ್ನ ಕಿಡ್ನಿಯನ್ನು ಮಾರುತ್ತಿದ್ದೇನೆ. ಉದ್ಯಮದಲ್ಲಿ ನಾನೆಲ್ಲವನ್ನೂ ಕಳೆದುಕೊಂಡೆ. 90 ಲಕ್ಷ ಸಾಲವಿದೆ. ಯಾರಿಗಾದರೂ ಕಿಡ್ನಿ ಬೇಕಿದ್ದರೆ ನನ್ನನ್ನು ಸಂಪರ್ಕಿಸಿ ಎಂದು ಅವರು ಜಾಹೀರಾತು ಕೊಟ್ಟಿದ್ದಾರೆ.

ಸರ್ಕಾರಿ ನೋಂದಣಿ ಮಾಡಿದ ಕಾಂಟ್ರಾಕ್ಟರ್‌ ಆಗಿ ಕೆಲಸ ಮಾಡುತ್ತಿರುವ ಖಾನ್ ಲಾಕ್‌ಡೌನ್‌ನಿಂದಾಗಿ ಭಾರೀ ನಷ್ಟ ಅನುಭವಿಸಿದ್ದರು. ಕೊರೋನಾದಿಂದಾಗಿ ಲಾಕ್‌ಡೌನ್ ಘೋಷಣೆಯಾದಾಗಾ ಕೆಲಸ ಕಾರ್ಯವಿಲ್ಲದೆ ಸಿಕ್ಕಾಪಟ್ಟೆ ನಷ್ಟ ಅನುಭವಿಸಿದ್ದರು ಖಾನ್.

ಹೆದ್ದಾರಿಗಳು ಟೋಲ್‌ನಿಂದ ಮುಕ್ತ : ಯಾವಾಗಿಂದ ..?

ಮನೆಗೆ ತಾನೊಬ್ಬನೇ ದುಡಿದಾಗಬೇಕಿರುವುದರಿಂದ ಕಿಡ್ನಿ ಮಾರುವ ಅನಿವಾರ್ಯತೆಗೊಳಗಾಗಿದ್ದಾರೆ ಖಾನ್. 60 ಲಕ್ಷ ಬ್ಯಾಂಕ್‌ಗೆ ಮತ್ತು 30 ಲಕ್ಷ ಹಲವಾರು ಜನರಿಗೆ ನೀಡಬೇಕಿದೆ.

ತನ್ನ ಕಿಡ್ನಿ ಮಾರುವ ನಿರ್ಧಾರವನ್ನು ಮನೆಯವರಿಗೆ ತಿಳಿಸಿದ್ದಾರೆ ಖಾನ್ ಹೇಳಿದ್ದಾರೆ. ಜಾಹೀರಾತಿನ ನಂತರ ಒಂದಷ್ಟು ಜನ ಕರೆ ಮಾಡಿದ್ದಾಗಿ ಖಾನ್ ತಿಳಿಸಿದ್ದಾರೆ. 20 ಲಕ್ಷದಿಂದ 25 ಲಕ್ಷದ ತನಕ ನೀಡುವುದಾಗಿ ಬಹಳಷ್ಟು ಜನರು ಕರೆ ಮಾಡಿದ್ದು ಇನ್ನಷ್ಟು ಹೆಚ್ಚಿನ ಆಫರ್‌ಗಾಗಿ ಕಾಯುತ್ತಿದ್ದಾರಂತೆ ಖಾನ್.