ಭಾರತ - ಪಾಕ್‌ ನಡುವೆ ಮಾತುಕತೆ ನಡೆಯದಿದ್ರೆ ಕಾಶ್ಮೀರ ಗಾಜಾ ಆಗಲಿದೆ: ಫಾರೂಕ್ ಅಬ್ದುಲ್ಲಾ

ನವಾಜ್ ಷರೀಫ್ (ಪಾಕಿಸ್ತಾನದ) ಪ್ರಧಾನಿಯಾಗಲಿದ್ದಾರೆ ಮತ್ತು ನಾವು (ಭಾರತದೊಂದಿಗೆ) ಮಾತನಾಡಲು ಸಿದ್ಧ ಎಂದು ಅವರು ಹೇಳುತ್ತಿದ್ದಾರೆ, ಆದರೆ ನಾವು ಮಾತನಾಡಲು ಸಿದ್ಧವಾಗಿಲ್ಲದ್ದಕ್ಕೆ ಕಾರಣವೇನು? ಎಂದೂ ಫಾರೂಕ್ ಅಬ್ದುಲ್ಲಾ ಕೇಳಿದ್ದಾರೆ.

kashmir will turn into gaza palestine if there is no dialogue between india and pakistan farooq abdullah ash

ಹೊಸದಿಲ್ಲಿ (ಡಿಸೆಂಬರ್ 26, 2023): ಕಾಶ್ಮೀರ ಸಮಸ್ಯೆಗೆ ಭಾರತ ಮತ್ತು ಪಾಕಿಸ್ತಾನ ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳದಿದ್ದರೆ, ಗಾಜಾ ಮತ್ತು ಪ್ಯಾಲೆಸ್ತೀನ್‌ನಂತೆಯೇ ಈ ಪ್ರದೇಶವೂ ಆಗಲಿದೆ ಬಾಂಬ್ ದಾಳಿ ಎದುರಿಸಬಹುದು ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಮಂಗಳವಾರ ಹೇಳಿದ್ದಾರೆ. ನಾವು [ಭಾರತ] ನಮ್ಮ ನೆರೆಹೊರೆಯವರೊಂದಿಗೆ ಸ್ನೇಹದಿಂದ ಇದ್ದರೆ, ಎರಡೂ ದೇಶಗಳು ಪ್ರಗತಿ ಹೊಂದುತ್ತವೆ ಎಂದೂ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. 

ನಾವು ನಮ್ಮ ಸ್ನೇಹಿತರನ್ನು ಬದಲಾಯಿಸಬಹುದು ಆದರೆ ನಮ್ಮ ನೆರೆಹೊರೆಯವರನ್ನಲ್ಲ ಎಂದು ಅಟಲ್ ಬಿಹಾರಿ ವಾಜಪೇಯಿ ಹೇಳಿದ್ದರು. ಹಾಗೆ, ನಾವು ನಮ್ಮ ನೆರೆಹೊರೆಯವರೊಂದಿಗೆ ಸ್ನೇಹದಿಂದ ಇದ್ದರೆ, ಎರಡೂ ದೇಶಗಳು ಪ್ರಗತಿ ಹೊಂದುತ್ತವೆ. ಯುದ್ಧವು ಈಗ ಆಯ್ಕೆಯಾಗಿಲ್ಲ ಮತ್ತು ಮಾತುಕತೆಯ ಮೂಲಕ ವಿಷಯಗಳನ್ನು ಪರಿಹರಿಸಬೇಕು ಎಂದು ಪ್ರಧಾನಿ ಮೋದಿ ಸಹ ಹೇಳಿದ್ದಾರೆ. ಈ ಹೇಳಿಕೆಗಳ ಹೊರತಾಗಿಯೂ ಉಭಯ ದೇಶಗಳ ನಡುವೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಫಾರೂಕ್ ಅಬ್ದುಲ್ಲಾ ಬೇಸರ ವ್ಯಕ್ತಪಡಿಸಿದರು.

ಇದನ್ನು ಓದಿ: ಜಮ್ಮು - ಕಾಶ್ಮೀರದಲ್ಲಿ ಸೇನೆ ಮೇಲೆ ದಾಳಿ: ಚೀನಾ ನಿರ್ಮಿತ ಶಸ್ತ್ರಾಸ್ತ್ರ ಬಳಸ್ತಿರೋ ಭಯೋತ್ಪಾದಕರು

ಸಂಭಾಷಣೆ ಎಲ್ಲಿದೆ? ನವಾಜ್ ಷರೀಫ್ (ಪಾಕಿಸ್ತಾನದ) ಪ್ರಧಾನಿಯಾಗಲಿದ್ದಾರೆ ಮತ್ತು ನಾವು (ಭಾರತದೊಂದಿಗೆ) ಮಾತನಾಡಲು ಸಿದ್ಧ ಎಂದು ಅವರು ಹೇಳುತ್ತಿದ್ದಾರೆ, ಆದರೆ ನಾವು ಮಾತನಾಡಲು ಸಿದ್ಧವಾಗಿಲ್ಲದ್ದಕ್ಕೆ ಕಾರಣವೇನು? ಎಂದೂ ಫಾರೂಕ್ ಅಬ್ದುಲ್ಲಾ ಕೇಳಿದರು. ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಇಸ್ರೇಲ್ ಗಾಜಾ, ಪ್ಯಾಲೆಸ್ತೀನ್ ಮೇಲೆ ಬಾಂಬ್ ದಾಳಿ ನಡೆಸುತ್ತಿರುವಂತೆಯೇ ಕಾಶ್ಮೀರಕ್ಕೂ ಪರಿಸ್ಥಿತಿ ಬರಲಿದೆ ಎಂದು ಎಚ್ಚರಿಸಿದರು.

ಕಾಶ್ಮೀರ ಸಮಸ್ಯೆ ಮತ್ತು ಪಾಕಿಸ್ತಾನದಿಂದ ಹೊರಹೊಮ್ಮುತ್ತಿರುವ ಗಡಿಯಾಚೆಗಿನ ಭಯೋತ್ಪಾದನೆಯಿಂದಾಗಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಗಳು ಆಗಾಗ್ಗೆ ಹದಗೆಡುತ್ತವೆ. ಇನ್ನೊಂದೆಡೆ, ಭಾರತವು ಆರ್ಟಿಕಲ್ 370 ಅನ್ನು ರದ್ದುಗೊಳಿಸಿದ ನಂತರ ಪಾಕಿಸ್ತಾನವು ಭಾರತೀಯ ರಾಯಭಾರಿಯನ್ನು ಹೊರಹಾಕಿತ್ತು. ಈ ಬಳಿಕ ಭಾರತ - ಪಾಕ್‌ ನಡುವಣ ವ್ಯಾಪಾರ ಸಂಬಂಧವೂ ಮತ್ತಷ್ಟು ಹದಗೆಟ್ಟಿದೆ.

ಪಾಕಿಸ್ತಾನಿ ಸೇನೆಗೆ ಸವಾಲಾಗಿರೋ ಬಲೂಚಿಸ್ತಾನದ ಯುವ ಕಾರ್ಯಕರ್ತೆ ಮಹರಂಗ್ ಬಲೋಚ್

ಆದರೆ, ಕಾಶ್ಮೀರವು ಆಂತರಿಕ ವಿಷಯವಾಗಿದೆ ಎಂದು ಭಾರತವು ಪದೇ ಪದೇ ಹೇಳುತ್ತಿದೆ ಮತ್ತು ಭಯೋತ್ಪಾದನೆ, ಹಿಂಸಾಚಾರ ಮತ್ತು ಹಗೆತನ ಮುಕ್ತ ವಾತಾವರಣದಲ್ಲಿ ಮಾತ್ರ ಪಾಕಿಸ್ತಾನದೊಂದಿಗೆ ಸಾಮಾನ್ಯ, ಸ್ನೇಹ ಸಂಬಂಧವನ್ನು ಬಯಸುತ್ತದೆ ಎಂದೂ ಹೇಳಿದೆ. 

Latest Videos
Follow Us:
Download App:
  • android
  • ios