Asianet Suvarna News Asianet Suvarna News

Kashi Vishwanath Corridor: ಕೇವಲ 9 ಕ್ಯಾಬಿನೆಟ್ ಸಭೆ, ಮೋದಿ ಕನಸು ಸಾಕಾರಗೊಳಿಸಿದ ಸಿಎಂ ಯೋಗಿ!

* ಕಾಶಿ ವಿಶ್ವನಾಥ ಕಾರಿಡಾರ್‌ಗೆ ಮೋದಿ ಚಾಲನೆ

* ಮೋದಿ ಕನಸು ಸಾಕಾರಗೊಳಿಸಿದ ಸಿಎಂ ಯೋಗಿ ಆದಿತ್ಯನಾಥ್

* ಒಂಭತ್ತು ಕ್ಯಾಬಿನೆಟ್ ಮೀಟಿಂಗ್ ಎಲ್ಲವೂ ಸಾಧ್ಯವಾಗಿಸಿದ ಮೋದಿ

Kashi Vishwanath Corridor 9 Cabinet Meeting This is How Yogi Adityanath Fulfilled The Dream Of PM Modi pod
Author
Bangalore, First Published Dec 14, 2021, 9:47 AM IST

ನವದೆಹಲಿ(ಡಿ.14): ಪ್ರಧಾನಿ ನರೇಂದ್ರ ಮೋದಿಯವರ ಕಾಶಿ ವಿಶ್ವನಾಥ್ ಕಾರಿಡಾರ್ ಕನಸನ್ನು ನನಸು ಮಾಡುವಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಮುಖ ಪಾತ್ರ ವಹಿಸಿದ್ದಾರೆ. ಮುಖ್ಯಮಂತ್ರಿಗಳು ಒಂಬತ್ತು ಸಂಪುಟ ಸಭೆಗಳನ್ನು ನಡೆಸುವ ಮೂಲಕ ಯೋಜನೆಗೆ ರೂಪು ನೀಡಿದ್ದಾರೆ ಮತ್ತು ಕೇವಲ ನಾಲ್ಕು ವರ್ಷಗಳಲ್ಲಿ, ಯೋಗಿ ಮಹತ್ವದ ಯೋಜನೆಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಒಂಬತ್ತು ಕ್ಯಾಬಿನೆಟ್ ಸಭೆಗಳಲ್ಲಿ ದತ್ತಿ ವ್ಯವಹಾರಗಳ ಇಲಾಖೆಯಿಂದ ಕಾಶಿ ವಿಶ್ವನಾಥ ದೇವಾಲಯದ ವಿಸ್ತರಣೆ ಮತ್ತು ಅಭುವೃದ್ಧಿ ಯೋಜನೆಗೆ ಪ್ರಸ್ತಾವನೆಗಳನ್ನು ಮಂಡಿಸಲಾಯಿತು. ಇದಕ್ಕಾಗಿ ಇಲಾಖಾ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ದತ್ತಿ ಕಾರ್ಯದ ಜವಾಬ್ದಾರಿಯನ್ನು ಸಿಎಂ ಯೋಗಿ ನೀಡಿದರು. ಅವ್ನಿಶ್ ಅವಸ್ಥಿ ಅವರ ನೇತೃತ್ವದಲ್ಲಿ ಈ ಯೋಜನೆಯನ್ನು ಸಿದ್ಧಪಡಿಸಲು ವಿಶೇಷ ತಂಡವನ್ನು ರಚಿಸಿದರು. ಇದರಿಂದ ಈ ಯೋಜನೆಯನ್ನು ಆದಷ್ಟು ಬೇಗ ಪೂರ್ಣಗೊಂಡಿದೆ. ಈ ಅಧಿಕಾರಿಗಳ ತಂಡವು ಜೂನ್ 19, 2018 ರಿಂದ ಕೆಲಸವನ್ನು ಪ್ರಾರಂಭಿಸಿತು ಮತ್ತು ಕೇವಲ ನಾಲ್ಕು ವರ್ಷಗಳಲ್ಲಿ ಯೋಜನೆಯನ್ನು ಕೊನೆಗೊಳಿಸಿತು.

ಕಾಶಿ ವಿಶ್ವನಾಥ್ ಕಾರಿಡಾರ್ ಉದ್ಘಾಟನೆಯೊಂದಿಗೆ ಯೋಗಿ ಸರ್ಕಾರ 2022ರ ವಿಧಾನಸಭಾ ಚುನಾವಣೆಯ ರಾಜಕೀಯ ಮಾಡಿದ್ದು ಮಾತ್ರವಲ್ಲದೆ 2024ರ ಲೋಕಸಭೆ ಚುನಾವಣೆಗೂ ವೇದಿಕೆ ಸಿದ್ಧಪಡಿಸಿದೆ. ವಾಸ್ತವವಾಗಿ, ಪ್ರಧಾನಿ ಮೋದಿ ಅವರ ಸಂಸದೀಯ ಕ್ಷೇತ್ರವಾಗಿರುವುದರಿಂದ, ಬನಾರಸ್‌ನಲ್ಲಿ ಧಾರ್ಮಿಕ ಬೆಳವಣಿಗೆಯ ಹೊಸ ಅಧ್ಯಾಯವನ್ನು ಬರೆಯಲಾಗಿದೆ. ಅಷ್ಟೇ ಅಲ್ಲ, ಈ ಯೋಜನೆಯ ಮೂಲಕ ಪೂರ್ವಾಂಚಲ್‌ನ ರಾಜಕೀಯವನ್ನು ಆಧ್ಯಾತ್ಮಿಕ ರಾಷ್ಟ್ರೀಯತೆಯೊಂದಿಗೆ ಜೋಡಿಸಲಾಗಿದೆ.

ಯಾವ ಸಭೆಯಲ್ಲಿ ಏನಾಯ್ತು?

1. ಜೂನ್ 19, 2018 ರಂದು, ಕ್ಯಾಬಿನೆಟ್ ಸಭೆಯಲ್ಲಿ, ಸಿಎಂ ಯೋಗಿ ಕಾಶಿ ವಿಶಿಷ್ಟ ಕ್ಷೇತ್ರ ವಿಕಾಸ ಪರಿಷತ್ ಅನ್ನು ರಚಿಸಿದರು.

2- ಸೆಪ್ಟಂಬರ್ 4, 2018 ರಂದು ನಡೆದ ಸಭೆಯಲ್ಲಿ, ಯಾವುದೇ ವಿವಾದವಿಲ್ಲದೆ ಸರಿಯಾದ ದರದಲ್ಲಿ ಯೋಜನೆಗಾಗಿ ಆಸ್ತಿಯನ್ನು ಖರೀದಿಸಬಹುದು ಎಂದು ಸಿಎಂ ಅವರು ಆಸ್ತಿಗಳ ಖರೀದಿಗೆ ನಿಯಮಗಳನ್ನು ಮಾಡಿದರು.

3- ನವೆಂಬರ್ 13, 2018 ರಂದು ಗುರುತಿಸಲಾದ ಜಮೀನು ಖರೀದಿಸಲು ನಿರ್ಧರಿಸಲಾಯಿತು. ಇದರಿಂದ ಯೋಜನೆಯ ಉತ್ತಮ ಅಭಿವೃದ್ಧಿ ಮಾಡಬಹುದು.

4- 1 ಅಕ್ಟೋಬರ್ 2019 ರಂದು, ಯೋಜನೆಯಲ್ಲಿ ಖರ್ಚು ಮಾಡಬೇಕಾದ ಹಣದ ಪ್ರಸ್ತಾಪವನ್ನು ಮುದ್ರೆ ಹಾಕಲಾಯಿತು.

5- 22 ಅಕ್ಟೋಬರ್ 2019 ರಂದು, ನಿರ್ಮಲ್ ಮಠದ ಸ್ವೀಕಾರಕ್ಕೆ ಮುದ್ರೆ ಹಾಕಲಾಯಿತು. ಅದರ ಅದ್ಭುತವಾದ ಯೋಜನೆ ರೂಪಿಸಲಾಯ್ತು.

6-19 ನವೆಂಬರ್ 2019 ರಂದು 296 ಕಟ್ಟಡಗಳನ್ನು ಖರೀದಿಸಲು ನಿರ್ಧರಿಸಲಾಯಿತು. ಈ ಕಟ್ಟಡಗಳ ಅಲಂಕಾರದಲ್ಲಿ ಮಂಥನ ನಡೆದಿದೆ.

7-21 ಜನವರಿ 2020 ರಂದು, ಯೋಜನೆಗೆ 345 ಕೋಟಿ ರೂಪಾಯಿಗೆ ಅನುಮೋದನೆ ನೀಡಲಾಯ್ತು. 

8- 29 ಜೂನ್ 2020 ರಂದು, ಸಿಎಂ ಯೋಗಿ ಅವರು ಆಧ್ಯಾತ್ಮಿಕ ದೃಷ್ಟಿಕೋನದಿಂದ ಯೋಜನೆಯ ವಿನ್ಯಾಸವನ್ನು ಸುಧಾರಿಸಲು ಶಿಫಾರಸು ಮಾಡಿದರು.

9. ಜೂನ್ 9- 25, 2021 ರಂದು, ಯೋಜನೆಗಾಗಿ ಹೆಚ್ಚುವರಿ ಭೂಮಿಯನ್ನು ತೆಗೆದುಕೊಳ್ಳಲಾಗಿದೆ. ಆದ್ದರಿಂದ ಕಾರಿಡಾರ್‌ನ ಪ್ರದೇಶವನ್ನು ಹೆಚ್ಚಿಸಬಹುದು ಮತ್ತು ಅಲಂಕರಿಸಬಹುದು.

Follow Us:
Download App:
  • android
  • ios