Hijab Controversy: ರಾಜಸ್ಥಾನ ಕಾಲೇಜಿನಲ್ಲೂ ಹಿಜಾಬ್ ವಿವಾದ
ಕರ್ನಾಟಕದಲ್ಲಿ ಹಿಜಾಬ್ ವಿವಾದ ಭುಗಿಲೆದ್ದ ಬೆನ್ನಲ್ಲೇ, ರಾಜಸ್ಥಾನದ ಕಾಲೇಜೊಂದರ ಕೆಲ ವಿದ್ಯಾರ್ಥಿನಿಯರು ದಿಢೀರನೆ ಕಾಲೇಜಿಗೆ ಬುರ್ಖಾ ಮತ್ತು ಹಿಜಾಬ್ ಧರಿಸಿ ಆಗಮಿಸುತ್ತಿರುವ ಘಟನೆ ನಡೆದಿದೆ.
ಜೈಪುರ (ಫೆ.12): ಕರ್ನಾಟಕದಲ್ಲಿ (Karnataka) ಹಿಜಾಬ್ ವಿವಾದ (Hijab Controversy) ಭುಗಿಲೆದ್ದ ಬೆನ್ನಲ್ಲೇ, ರಾಜಸ್ಥಾನದ (Rajasthan) ಕಾಲೇಜೊಂದರ ಕೆಲ ವಿದ್ಯಾರ್ಥಿನಿಯರು ದಿಢೀರನೆ ಕಾಲೇಜಿಗೆ ಬುರ್ಖಾ ಮತ್ತು ಹಿಜಾಬ್ ಧರಿಸಿ ಆಗಮಿಸುತ್ತಿರುವ ಘಟನೆ ನಡೆದಿದೆ. ಆದರೆ ಬುರ್ಖಾ ಧರಿಸಿಕೊಂಡು ಕಾಲೇಜು ಪ್ರವೇಶಕ್ಕೆ ಅನುಮತಿ ಖಾಸಗಿ ಕಾಲೇಜಿನ ಶಿಕ್ಷಕರು ಅನುಮತಿ ನಿರಾಕರಿಸಿದ್ದಾರೆ.
ಬಳಿಕ ವಿದ್ಯಾರ್ಥಿನಿಯರು ಪೋಷಕರನ್ನು ಕರೆತಂದು ಕಾಲೇಜಿನಲ್ಲಿ ಗದ್ದಲ ಎಬ್ಬಿಸಿದ್ದಾರೆ. ಆದರೆ ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ತಿಳಿ ಹೇಳಿದ ಬಳಿಕ ವಿದ್ಯಾರ್ಥಿನಿಯರು ಬುರ್ಖಾ ಹಿಜಾಬ್ ತೆಗೆದಿಟ್ಟು ಕಾಲೇಜು ಪ್ರವೇಶ ಮಾಡಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಕಾಲೇಜು ಆಡಳಿತ ಮಂಡಳಿ, ಕೆಲ ವಿದ್ಯಾರ್ಥಿನಿಯರು ಕಳೆದ 4-5 ದಿನಗಳಿಂದ ಇದ್ದಕ್ಕಿದ್ದಂತೆ ಬುರ್ಖಾ ಧರಿಸಿ ಆಗಮಿಸಲು ತೊಡಗಿದ್ದಾರೆ. ಇದನ್ನು ವಿರೋಧಿಸಿದ ಬಳಿಕ ಹಿಜಾಬ್ ಧರಿಸಿ ಆಗಮಿಸುತ್ತಿದ್ದಾರೆ.
ನಾವು ಕಾಲೇಜಿನಲ್ಲಿ ಶಿಸ್ತು ಮತ್ತು ಸಮಾನತೆ ಕಾರಣಕ್ಕಾಗಿ ಸಮವಸ್ತ್ರ ನೀತಿ ಹೊಂದಿದ್ದೇವೆ. ಅದನ್ನು ಉಲ್ಲಂಘಿಸಿದ್ದಕ್ಕಾಗಿ ಅವರಿಗೆ ಪ್ರವೇಶ ನಿರಾಕರಿಸಲಾಗಿದೆ ಎಂದಿದ್ದಾರೆ. ಆದರೆ ವಿದ್ಯಾರ್ಥಿನಿಯರು ಮಾತ್ರ ಕಳೆದ 3 ವರ್ಷಗಳಿಂದ ನಾವು ಬುರ್ಖಾ ಧರಿಸಿಕೊಂಡೇ ಬರುತ್ತಿದ್ದೇವೆ. ಇದೀಗ ಏಕಾಏಕಿ ನಮಗೆ ಪ್ರವೇಶ ನಿರಾಕರಿಸಲಾಗುತ್ತಿದೆ ಎಂದು ದೂರಿದ್ದಾರೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ (Congress Government) ಆಡಳಿತದಲ್ಲಿದೆ.
Hijab Row : ಸರ್ಕಾರದ ಸುರಕ್ಷಾತ್ಮಕ ತಂತ್ರ, ಮತ್ತೆ 3 ದಿನ ಕಾಲೇಜಿಗೆ ರಜೆ
ಕರ್ನಾಟಕವು ಧಾರ್ಮಿಕ ಮತಾಂಧತೆಗೆ ಇಳಿದಿದೆ ಎಂದ ಯುವ ಕಾಂಗ್ರೆಸ್: ರಾಜ್ಯದಲ್ಲಿ ಹಿಜಾಬ್ ಪ್ರಕರಣದ ಕುರಿತು ಹೈಕೋರ್ಟ್ ನಲ್ಲಿ ತ್ರಿಸದಸ್ಯ ಪೀಠ ವಿಚಾರಣೆ ನಡೆಸುತ್ತಿರುವಾಗಲೇ, ಹೈಕೋರ್ಟ್ (High Court) ನೀಡಿದ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಕಾಂಗ್ರೆಸ್ ಯುವ ಮುಖಂಡ ಹಾಗೂ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿವಿ ಶ್ರೀನಿವಾಸ್ ಸುಪ್ರೀಂ ಕೋರ್ಟ್ (Supreme Court) ಮೆಟ್ಟಿಲೇರಲು ತೀರ್ಮಾನಿಸಿದ್ದಾರೆ. ಮುಸ್ಲಿಂ ಹುಡುಗಿರುವ ತಲೆಗೆ ಹಿಜಾಬ್ ಧರಿಸುವುದು ಅವರ ಮೂಲಭೂತ ಹಕ್ಕು ಎಂದು ಬಿವಿ ಶ್ರೀನಿವಾಸ್ ಹೇಳಿದ್ದಾರೆ.
ಯಾವುದೇ ಹೆಣ್ಣುಮಕ್ಕಳನ್ನು ಶಿಕ್ಷಣದಿಂದ ತಡೆಯುವುದಿಲ್ಲ ಮತ್ತು ಧರ್ಮದ ಹೆಸರಿನಲ್ಲಿ ಬೆದರಿಕೆ ಹಾಕದಂತೆ ರಾಜ್ಯಗಳಿಗೆ ಸೂಚನೆ ನೀಡಬೇಕು ಎಂದು ಮನವಿಯಲ್ಲಿ ಹೇಳಲಾಗಿದೆ. ಸೋಮವಾರದ ವಿಚಾರಣೆ ಮುಂದುವರಿಯಲಿದ್ದು ಅಲ್ಲಿಯವರೆಗೂ ಶಾಲೆ ಕಾಲೇಜುಗಳಲ್ಲಿ ಧಾರ್ಮಿಕ ಉಡುಪುಗಳನ್ನು ತೊಡಬೇಡಿ ಎಂದು ಹೈಕೋರ್ಟ್ ಮಧ್ಯಂತರ ಆದೇಶ ನೀಡಿದ್ದನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂ ಕೋರ್ಟ್ ಮೊರೆ ಹೋದ ದಿನವೇ ಯುವ ಕಾಂಗ್ರೆಸ್ ಈ ನಿರ್ಧಾರ ಮಾಡಿದೆ.
ಇನ್ನೊಂದೆಡೆ ಸುಪ್ರೀಂ ಕೋರ್ಟ್ ಕೂಡ, ಪರೀಕ್ಷೆಗಳಿಗೆ ಇದರಿಂದ ಅಡ್ಡಿಯಾಗುತ್ತಿದೆ ಎನ್ನುವ ಸಂದರ್ಭಗಳಿದ್ದರೆ ಮಾತ್ರವೇ ಈ ವಿಷಯದ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಾಗಿ ಹೇಳಿದೆ. ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಮತ್ತು ಪತ್ರಿಕೋದ್ಯಮ ವಿದ್ಯಾರ್ಥಿ ಸಲ್ಲಿಸಿದ ಮನವಿಯಲ್ಲಿ ಮೂಲಭೂತ ಹಕ್ಕುಗಳ ನೇರ ಉಲ್ಲಂಘನೆಯಾಗುತ್ತಿದೆ ಮತ್ತು ಹಲವಾರು ರಾಜ್ಯಗಳಲ್ಲಿ ಘಟನೆಗಳು ನಡೆಯುತ್ತಿವೆ ಮತ್ತು ಮತ್ತಷ್ಟು ಹರಡುವ ಸಾಧ್ಯತೆಯಿರುವುದರಿಂದ ಈ ಸಮಸ್ಯೆಯ ಕುರಿತು ಸುಪ್ರೀಂ ಕೋರ್ಟ್ ಗಮನ ಹರಿಸುವುದು ಉತ್ತಮ ಹಾಗೂ ಸರಿಯಾದುದಾಗಿರುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
“ದೇಶದಲ್ಲಿ ಅತಿ ಹೆಚ್ಚು ಯುನಿಕಾರ್ನ್‌ಗಳನ್ನು ಹುಟ್ಟುಹಾಕುವ ಮತ್ತು ದೇಶದ ಐಟಿ ಹಬ್ ಎಂದು ಕರೆಯಲ್ಪಡುವ ಕರ್ನಾಟಕ ರಾಜ್ಯವು ಅತ್ಯಂತ ದುಃಖಕರವಾಗಿ ಧಾರ್ಮಿಕ ಮತಾಂಧತೆಗೆ ಇಳಿದಿದೆ, ಅಲ್ಲಿ ಮುಸ್ಲಿಂ ಯುವತಿಯರ ಸಂವಿಧಾನದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ. ಕರ್ನಾಟಕದ ಉಡುಪಿಯಂತಹ ಸೇರಿದಂತೆ ಇತರ ಸ್ಥಳಗಳಲ್ಲಿ ಎಲ್ಲಾ ಧರ್ಮದ ಜನರು ಶಾಂತಿ ಮತ್ತು ಸೌಹಾರ್ದತೆಯಿಂದ ಒಟ್ಟಿಗೆ ವಾಸಿಸುವ ಅತ್ಯಂತ ಶ್ರೀಮಂತ ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸವನ್ನು ಹೊಂದಿವೆ.
Hijab Row: ಮುಸ್ಲಿಂ ಮಹಿಳೆಯರಿಗೆ ಹಿಜಾಬ್ ಬಂದಿದ್ದಾರೂ ಎಲ್ಲಿಂದ?
ಆ ಸಂಸ್ಕೃತಿ ಮತ್ತು ಸಾಮಾಜಿಕ ರಚನೆಯೇ ಈಗ ಕದಡುತ್ತಿದೆ. ಎಷ್ಟರಮಟ್ಟಿಗೆ ಎಂದರೆ ಶಾಲಾ-ಕಾಲೇಜುಗಳಂತಹ ಕಲಿಕಾ ಮಂದಿರಗಳನ್ನೂ ಇದರ ಕೇಂದ್ರವನ್ನಾಗಿ ಮಾಡಿಕೊಳ್ಳಲಾಗುತ್ತಿದೆ. ಶಿಕ್ಷಣ ಸಂಸ್ಥೆಗಳು ಈ ಸಮಸ್ಯೆಗಳಲ್ಲಿ ಭಾಗಿಯಾಗಬಾರದು. ನಮ್ಮ ಸಂವಿಧಾನವನ್ನು ಉಳಿಸಲು ಮತ್ತು ನಮ್ಮ ದೇಶದ ಜಾತ್ಯತೀತ ಫ್ಯಾಬ್ರಿಕ್ ಅನ್ನು ಉಳಿಸಲು ನಾವು ಈ ಹೋರಾಟವನ್ನು ಕೈಗೆತ್ತಿಕೊಳ್ಳುತ್ತೇವೆ ಮತ್ತು ಈ ಸಮಸ್ಯೆಯನ್ನು ಭಾರತದ ಗೌರವಾನ್ವಿತ ಸುಪ್ರೀಂ ಕೋರ್ಟ್‌ನಲ್ಲಿ ಮುಂದುವರಿಸುತ್ತೇವೆ" ಎಂದು ಬಿವಿ ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.