Asianet Suvarna News Asianet Suvarna News

ಎಸ್‌ಎಮ್ ಕೃಷ್ಣ ಸೇರಿ ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರಧಾನ ಮಾಡಿದ ರಾಷ್ಟ್ರಪತಿ ಮುರ್ಮು!

2023ನೇ ಸಾಲಿನಲ್ಲಿ ಪದ್ಮ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗಿದೆ. ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿ ಪ್ರಧಾನ ಮಾಡಿದ್ದಾರೆ.
 

Karnataka sudha murthy to sm krishna president draupadi murmu conferred padma awards in rashtrapati bhavan delhi ckm
Author
First Published Mar 22, 2023, 6:55 PM IST

ನವದೆಹಲಿ(ಮಾ.22) 2023ನೇ ಸಾಲಿನಲ್ಲಿ ಪದ್ಮ ಪ್ರಶಸ್ತಿಗೆ ಭಾಜನರಾದ ಸಾಧಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿ ಪ್ರಧಾನ ಮಾಡಿದ್ದಾರೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ, ಸಾಹಿತಿ ಎಸ್‌.ಎಲ್‌.ಭೈರಪ್ಪ ಸೇರಿದಂತೆ ಒಟ್ಟು 106 ಮಂದಿಗೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಗಿದೆ. ಈ ಬಾರಿ ಕರ್ನಾಟಕದ 8 ಸಾಧಕರಿಗೆ ಪದ್ಮ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 

2023ನೇ ಸಾಲಿನಲ್ಲಿ 6 ಪದ್ಮವಿಭೂಷಣ, 9 ಪದ್ಮಭೂಷಣ ಮತ್ತು 91 ಪದ್ಮ ಪ್ರಶಸ್ತಿಗಳನ್ನು ಘೋಷಿಸಲಾಗಿತ್ತು. ರಾಷ್ಟ್ರಪತಿ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುರ್ಮು ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರು ಪದ್ಮವಿಭೂಷಣ ಪ್ರಶಸ್ತಿಪ್ರಧಾನ ಮಾಡಲಾಗಿದೆ. ಇನ್ನು ಸಾಹಿತಿ ಭೈರಪ್ಪ ಹಾಗೂ ಸುಧಾಮೂರ್ತಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಉಳಿದಂತೆ ಕರ್ನಾಟಕದಿಂದ ವಿಜ್ಞಾನಿ ಖಾದರ್‌ವಲ್ಲಿ ದುಡೇಕುಲ, ಉಮ್ಮತ್ತಾಟ್‌ ನೃತ್ಯ ಕಲಾವಿದೆ ರಾಣಿ ಮಾಚಯ್ಯ, ತಮಟೆ ವಾದಕ ಮುನಿವೆಂಕಟಪ್ಪ, ರಶೀದ್‌ ಅಹಮದ್‌ ಖಾದ್ರಿ, ಎಸ್‌.ಸುಬ್ಬರಾಮನ್‌ ಅವರಿಗೂ ಪ್ರಶಸ್ತಿ ಪ್ರಧಾನ ಮಾಡಲಾಗಿದೆ. ಇವರಲ್ಲದೇ ಖ್ಯಾತ ಗಾಯಕಿ ವಾಣಿ ಜಯರಾಂ ಹಾಗೂ ಆಸ್ಕರ್‌ ಪ್ರಶಸ್ತಿ ಗೆದ್ದ ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ಅವರು ಸಹ ಪ್ರಶಸ್ತಿ ಸ್ವೀಕರಿಸಿದ್ದಾರೆ.

ಷೇರು ಮಾರುಕಟ್ಟೆಯಲ್ಲಿ ಅಪ್ರತಿಮ ಸಾಧನೆ ಮೂಲಕ ದೇಶದ ಹೂಡಿಕೆ ಕ್ಷೇತ್ರದಲ್ಲಿ ಹೊಸ ಸಂಚಲನ ಸೃಷ್ಟಿಸಿದ ರಾಕೇಶ್ ಜುಂಜುನವಾಲ ಇತ್ತೀಚೆಗೆ ನಿಧನರಾಗಿದ್ದಾರೆ. ರಾಕೇಶ್ ಜುಂಜುನುವಾಲ ಅವರಿಗೆ ಮರಣೋತ್ತರವಾಗಿ ಪದ್ಮಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಗಿದೆ. ರಾಕೇಶ್ ಜುಂಜುನವಾಲ್ ಪರವಾಗಿ ಅವರ ಪತ್ನಿ ರೇಖಾ ಜುಂಜುನವಾಲ ಪ್ರಶಸ್ತಿ ಸ್ವೀಕರಿಸಿದರು. ಈ ವೇಳೆ ಜುಂಜುನವಾಲ ಕುಟುಂಬಸ್ಥರು ಉಪಸ್ಥಿತರಿದ್ದರು.

ವಾಸ್ತುಶಿಲ್ವ ಸಾಧನೆಯಲ್ಲಿ ಗುಜರಾತ್‌ನ ಬಾಲಕೃಷ್ಣ ದೋಶಿ(ಮರಣೋತ್ತರ), ಕಲಾ ಸಾಧನೆಗೈದ ಮಹಾರಾಷ್ಟ್ರದ ಝಾಕೀರ್ ಹುಸೈನ್, ಸಾರ್ವಜನಿಕ ವ್ಯವಹಾರ ಕ್ಷೇತ್ರದಲ್ಲಿ ಕರ್ನಾಟಕ ಮಾಜಿ ಸಿಎಂ ಎಂಎಸ್ ಕೃಷ್ಣ, ಮೆಡಿಸಿನ್ ಕ್ಷೇತ್ರದಲ್ಲಿನ ಸಾಧನೆಗೆ ಪಶ್ಚಿಮ ಬಂಗಾಳದ ದಿಲೀಪ್ ಮಹಾಲಾನಬಿಸ್ (ಮರಣೋತ್ತರ), ವಿಜ್ಞಾನ ಹಾಗೂ ಎಂಜಿನೀಯರ್, ಅಮೆರಿಕದ ಶ್ರೀನಿವಾಸ್ ವರ್ಧನ್, ಸಾರ್ವಜನಿಕ ವ್ಯವಹಾರ ಕ್ಷೇತ್ರದಲ್ಲಿ ಮುಲಾಯಂ ಸಿಂಗ್ ಯಾದವ್(ಮರಣೋತ್ತರ) ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಪ್ರಧಾನ ಮಾಡಲಾಗಿದೆ.

ಸಾಹಿತ್ಯ ಕ್ಷೇತ್ರದಲ್ಲಿ ಸಾಧನಗೈದಿರುವ ಕರ್ನಾಟಕದ ಎಸ್‌ಎಲ್ ಭ್ಯರಪ್ಪ , ಟ್ರೇಡ್ ಹಾಗೂ ಇಂಡಸ್ಟ್ರಿ ವಿಭಾಗದಲ್ಲಿ ಮಹಾರಾಷ್ಟ್ರದ ಕುಮಾರ್ ಮಂಗಲಂ, ವಿಜ್ಞಾನ ಮತ್ತು ಇಂಜಿನಿಯರಿಂಗ್‌ನಲ್ಲಿ ಮಹಾರಾಷ್ಟ್ರದಲ್ಲಿ ದೀಪಕ್ ಧರ್,  ಕಲಾ ಕ್ಷೇತ್ರದಲ್ಲಿನ ಸಾಧಕಿ ತಮಿಳುನಾಡಿನ ವಾಣಿ ಜಯರಾಂ ಸೇರಿದಂತೆ ಪ್ರಮುಖ ಗಣ್ಯರಿಗೆ ಪದ್ಮ ಭೂಷಣ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
 

Follow Us:
Download App:
  • android
  • ios