ಬೆಂಗಳೂರು(ಏ. 30)  ಕರ್ನಾಟಕದಲ್ಲಿ ಸಿಲುಕಿರುವ ಬೇರೆ ರಾಜ್ಯಗಳ ಕಾರ್ಮಿಕರನ್ನು ಅವರ ತವರಿಗೆ ಕಳುಹಿಸಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ.  ಮೂರು ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚನೆಗೆ ತೀರ್ಮಾನ ಮಾಡಲಾಗಿದೆ.

ಗೃಹ, ಕಂದಾಯ ಮತ್ತು ಸಾರಿಗೆ ಇಲಾಖೆಗಳ ಉನ್ನತ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಲಾಘುತ್ತಿದೆ.  ಸಮಿತಿಗೆ ಸಂಪೂರ್ಣ ಅಧಿಕಾರ ಮತ್ತು ಜವಾಬ್ದಾರಿ ನೀಡಲಿದೆ. ಕಾರ್ಮಿಕರನ್ನು ಗುರುತಿಸಿ ಕಳುಹಿಸುವ ಜವಾಬ್ದಾರಿ ಮಾತ್ರ ಕರ್ನಾಟಕ ಸರ್ಕಾರದ್ದಾಗಿರುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.

ಬೇರೆ ಊರಿನಿಂದ ಕಾರ್ಮಿಕರು ತವರಿಗೆ ಮರಳಿದರೆ ಏನಾಗುತ್ತದೆ?

ಕಾರ್ಮಿಕರ ಪ್ರಯಾಣದ ವೆಚ್ಚ ಅಯಾ ರಾಜ್ಯಗಳು ವಹಿಸಿಕೊಳ್ಳಬೇಕು.  ಇತರ ರಾಜ್ಯಗಳಲ್ಲಿ‌ ಸಿಲುಕಿಕೊಂಡಿರುವ ರಾಜ್ಯದ ಕಾರ್ಮಿಕರನ್ನು ಕರೆತರುವ ಜವಾಬ್ದಾರಿಯನ್ನು ಇದರಂತೆ ರಾಜ್ಯ ಸರ್ಕಾರ ತೆಗೆದುಕೊಳ್ಳಲಿದೆ.  ಕೆಎಸ್ ಆರ್ ಟಿಸಿ ಎಂಡಿ ಶಿವಯೋಗಿ ಕಳಸದ್ ನೇತೃತ್ವದಲ್ಲಿ ಕಾರ್ಮಿಕರನ್ನು ಕಳುಹಿಸುವ ಮತ್ತು ಕರೆತರುವ ಪ್ರಕ್ರಿಯೆ ನಡೆಯಲಿದೆ.  ಮೇ 1 ರಿಂದಲೇ ಪ್ರಕ್ರಿಯೆ ಆರಂಭವಾಗಲಿದೆ. ಈ ಬಗ್ಗೆ ಸಚಿವ ಸಂಪುಟ ಸಭೆ ತೀರ್ಮಾನ ತೆಗೆದುಕೊಂಡಿದೆ.

ಕೊರೋನಾ ಕಾಣಿಸಿಕೊಂಡ ಆರಂಭದಲ್ಲಿ ಕರ್ನಾಟಕದ ಕಾರ್ಮಿಕರು ಮಹಾರಾಷ್ಟ್ರ ಮತ್ತು ಗೋವಾಧಲ್ಲಿ ಸಿಲುಕಿಕೊಂಡಿದ್ದರು.  ರಾಜ್ಯದ ಕಾರ್ಮಿಕರಿಗೆ ಅವರ ಸ್ವಸ್ಥಾನಕ್ಕೆ ತೆರಳಲು ಅವಕಾಶ ಮಾಡಿಕೊಟ್ಟ ಸರ್ಕಾರ ಇದೀಗ ಅನ್ಯ ರಾಜ್ಯದ  ಕಾರ್ಮಿಕರನ್ನು ಕಳುಹಿಸಲು ಸಿದ್ಧತೆ ಮಾಡಿಕೊಂಡಿದೆ.