ಇನ್ನು 2 ವರ್ಷದಲ್ಲಿ ಮತ್ತೆ 4 ಸ್ಥಾನಗಳು ಖಾಲಿಯಾಗಲಿದ್ದು, ಅದನ್ನು ಪಡೆಯುವ ಅವಕಾಶ ಕಾಂಗ್ರೆಸ್‌ ಸಿಗಲಿದೆ. ಅಂದರೆ ಮುಂದಿನ 3 ವರ್ಷದಲ್ಲಿ ರಾಜ್ಯದಿಂದ ಪಕ್ಷದ ಬಲ 7 ಸ್ಥಾನಕ್ಕೆ ಹೆಚ್ಚಳವಾಗಲಿದೆ.

ನವದೆಹಲಿ (ಮೇ 16,2023): ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳನ್ನು ಗೆದ್ದಿರುವುದು, ಮುಂಬರುವ ದಿನಗಳಲ್ಲಿ ಪಕ್ಷಕ್ಕೆ ರಾಜ್ಯಸಭೆಯಲ್ಲೂ ತನ್ನ ಬಲವನ್ನು ಹೆಚ್ಚು ಮಾಡಲು ಅವಕಾಶ ಕಲ್ಪಿಸಿಕೊಡಲಿದೆ. ಮುಂದಿನ ವರ್ಷ ಕರ್ನಾಟಕದಿಂದ ಆಯ್ಕೆಯಾದ ನಾಲ್ವರ ಅವಧಿ ಮುಕ್ತಾಯಗೊಳ್ಳಲಿದೆ. ಈ ಪೈಕಿ ಮೂರು ಕಾಂಗ್ರೆಸ್‌ ಸದಸ್ಯರಾದ ಎಲ್‌.ಹನುಮಂತಯ್ಯ, ಸೈಯದ್‌ ನಾಸಿರ್‌ ಹುಸೇನ್‌ ಮತ್ತು ಜಿ.ಸಿ.ಚಂದ್ರಶೇಖರ್‌ ಅವರದ್ದು. 

ಈ ಸ್ಥಾನಗಳನ್ನು ಸಹಜವಾಗಿಯೇ ಕಾಂಗ್ರೆಸ್‌ (Congress) ಉಳಿಸಿಕೊಳ್ಳಲಿದೆ. ಜೊತೆಗೆ ಇದಾದ ನಂತರ ಇನ್ನು 2 ವರ್ಷದಲ್ಲಿ ಮತ್ತೆ 4 ಸ್ಥಾನಗಳು ಖಾಲಿಯಾಗಲಿದ್ದು (Vacant), ಅದನ್ನು ಪಡೆಯುವ ಅವಕಾಶ ಕಾಂಗ್ರೆಸ್‌ಗೆ ಸಿಗಲಿದೆ. ಅಂದರೆ ಮುಂದಿನ 3 ವರ್ಷದಲ್ಲಿ ರಾಜ್ಯದಿಂದ (State) ಪಕ್ಷದ ಬಲ 7 ಸ್ಥಾನಕ್ಕೆ ಹೆಚ್ಚಳವಾಗಲಿದೆ.

ಇದನ್ನು ಓದಿ: ರಾಹುಲ್‌ ಗಾಂಧಿ, ಅದಾನಿ ವಿಚಾರಕ್ಕೆ ಬಲಿಯಾದ ಸಂಸತ್‌ ಕಲಾಪ: ಕಪ್ಪು ಬಟ್ಟೆ ಧರಿಸಿ ಬಂದ ಕಾಂಗ್ರೆಸ್‌ ಸಂಸದರು

ಮತ್ತೊಂದೆಡೆ ಕರ್ನಾಟಕದಲ್ಲಿ (Karnataka) ಸೋತರೂ ಬಿಜೆಪಿಗೆ (BJP) ಹೆಚ್ಚಿನ ನಷ್ಟವೇನೂ ಆಗಿಲ್ಲ. ಆದರೆ ಸದ್ಯ 92 ಸ್ಥಾನ ಹೊಂದಿರುವ ಎನ್‌ಡಿಎಗೆ (NDA) ಬಹುಮತ ಪಡೆಯುವ ಆಶಯಕ್ಕೆ ಧಕ್ಕೆ ಉಂಟಾಗಲಿದೆ. ಪ್ರಸ್ತುತ ರಾಜ್ಯಸಭೆಯಲ್ಲಿ (Rajya Sabha) ಬಿಜೆಪಿ 92, ಕಾಂಗ್ರೆಸ್‌ 31, ಟಿಎಂಸಿ 13, ಡಿಎಂಕೆ ಮತ್ತು ಆಪ್‌ 10, ಬಿಜು ಜನತಾದಳ ಮತ್ತು ವೈಎಸ್‌ಆರ್‌ ಕಾಂಗ್ರೆಸ್‌ 9, ಟಿಆರ್‌ಎಸ್‌ 7 ಸ್ಥಾನಗಳನ್ನು ಹೊಂದಿವೆ. ಜೆಡಿಎಸ್‌ (JDS) ಪ್ರಸ್ತುತ 1 ಸ್ಥಾನವನ್ನು ಹೊಂದಿದ್ದು, 2026ರಲ್ಲಿ ದೇವೇಗೌಡ (Devegowda) ಅವರು ನಿವೃತ್ತಿಯಾಗುವ ಮೂಲಕ ಜೆಡಿಎಸ್‌ ಸ್ಥಾನ ಶೂನ್ಯವಾಗಲಿದೆ.

ಇದನ್ನೂ ಓದಿ: ನೆಹರೂ ಕುಟುಂಬ ಕುರಿತ ಹೇಳಿಕೆ: ಮೋದಿ ವಿರುದ್ಧ ಕಾಂಗ್ರೆಸ್‌ ಪಕ್ಷದಿಂದ ಹಕ್ಕಚ್ಯುತಿ ಅಸ್ತ್ರ