ನಾನು ನಂದಿನಿ ಡೆಲ್ಲಿಗೆ ಹೊಂಟೀನಿ; ದೆಹಲಿ ಸರ್ಕಾರದಿಂದ 1 ಲಕ್ಷ ಲೀಟರ್ ನಂದಿನಿ ಹಾಲಿಗೆ ಡಿಮ್ಯಾಂಡ್!
ದೆಹಲಿ ಸರ್ಕಾರದಿಂದ ನಂದಿನಿ ಹಾಲಿಗೆ ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ಸೆಪ್ಟಂಬರ್‌ನಿಂದ ನಿತ್ಯ 1 ಲಕ್ಷ ಲೀಟರ್ ನಂದಿನಿ ಹಾಲು ದೆಹಲಿಗೆ ಪೂರೈಸಲು ಕೆಎಂಎಫ್ ನಿರ್ಧಾರ ಮಾಡಿದೆ.
ಬೆಂಗಳೂರು (ಆ.15): ಕರ್ನಾಟಕ ಹಾಲು ಒಕ್ಕೂಟ ಮಹಾಮಂಡಳ (ಕೆಎಂಎಫ್) ಉತ್ಪಾದಿಸುವ ನಂದಿನಿ ಹಾಲನ್ನು ದೆಹಲಿಗೂ ಸರಬರಾಜು ಮಾಡುವಂತೆ ಬೇಡಿಕೆ ಬಂದಿದೆ. ಪ್ರತಿನಿತ್ಯ ದೆಹಲಿಗೆ 1 ಲಕ್ಷ ಲೀಟರ್ ಹಾಲನ್ನು ಸರಬರಾಜು ಮಾಡುವಂತೆ ದೆಹಲಿ ಸರ್ಕಾರದಿಂದ ಮನವಿ ಮಾಡಲಾಗಿದೆ.
ಹೌದು, ನಾನು ನಂದಿನಿ ಬೆಂಗಳೂರಿಗೆ ಬಂದೀನಿ... ಪಿಜಿಲಿ ಇರ್ತೀನಿ.. ಎನ್ನುವ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ, ಈ ಹಾಡನ್ನು ನಮ್ಮ ರಾಜ್ಯದ ಪ್ರತಿಷ್ಠೆಯ ಹಾಲು ಉತ್ಪಾದನಾ ಮಂಡಳಿ ಕೆಎಂಎಫ್‌ನ ನಂದಿನಿ ಹಾಲು ಬಳಕೆಗೂ ಹೋಲಿಕೆ ಮಾಡಲಾಗಿತ್ತು. ಇದರಿಂದ ನಂದಿನಿ ಬ್ರ್ಯಾಂಡ್‌ಗಳ ಮೇಲೆಯೂ ಧನಾತ್ಮಕ ಪರಿಣಾಮ ಬೀರಿತ್ತು. ಈಗಾಗಲೇ ಕರ್ನಾಟಕದ ನಂದಿನಿ ಹಾಲು ದೇಶದಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ಉತ್ತಮ ಸ್ಥಾನವನ್ನು ಹೊಂದಿದ್ದು, ನಮ್ಮ ರಾಜ್ಯ ಮಾತ್ರವಲ್ಲದೇ ನೆರೆ ಹೊರೆ ರಾಜ್ಯಗಳು, ದೇಶ ವಿದೇಶಗಳಲ್ಲಿಯೂ ಮಾರಾಟ ಆಗುತ್ತಿವೆ, ನಂದಿನಿ ಬ್ರ್ಯಾಂಡ್‌ನ ಟೆಟ್ರಾ ಪ್ಯಾಕ್ ಹಾಲನ್ನು ನಮ್ಮ ದೇಶದ ಸೈನಿಕರಿಗೂ ಸರಬರಾಜು ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಂದಿನಿ ಹಾಲನ್ನು ರಾಷ್ಟ್ರ ರಾಜಧಾನಿ ದೆಹಲಿಗೂ ಕಳುಹಿಸುವಂತೆ ದೆಹಲಿ ಸರ್ಕಾರದಿಂದ ಮನವಿ ಮಾಡಲಾಗಿದೆ.
Independence Day: ರಾಜ್ಯದ ಜನತೆಗೆ ಗ್ಯಾರಂಟಿ ಯೋಜನೆಗಳ ಅಭಯ ನೀಡಿದ ಸಿಎಂ ಸಿದ್ದರಾಮಯ್ಯ!
ದೇಶದ ಮೆಟ್ರೋ ಪಾಲಿಟಿನ್ ಸಿಟಿಯಾಗಿರುವ ದೆಹಲಿ ಕೇಂದ್ರಾಡಳಿತ ಪ್ರದೇಶ ಆಗಿದ್ದರೂ ಪ್ರತ್ಯೇಕ ಸರ್ಕಾರದ ವ್ಯವಸ್ಥೆಯನ್ನು ಹೊಂದಿದೆ. ಇಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಇನ್ನು ದೆಹಲಿಗೆ ಹತ್ತಿರದಲ್ಲಿರುವ ಗುಜರಾತ್ ರಾಜ್ಯದ ಅಮುಲ್ ಹಾಲು, ಮದರ್ ಡೈರಿಯ ಹಾಲನ್ನು ದೆಹಲಿಗೆ ಸರಬರಾಜು ಮಾಡಲಾಗುತ್ತಿದೆ. ಈಗ ದೆಹಲಿ ಸರ್ಕಾರದಿಂದಲೂ ಕೆಎಂಎಪ್‌ನ ನಂದಿನಿ ಹಾಲಿಗೆ ಡಿಮ್ಯಾಂಡ್ ಬಂದಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಮುಲ್ ಹಾಗೂ ಮದರ್ ಡೈರಿ ಹಾಲನ್ನು ಹಿಂದಿಕ್ಕಿ ತನ್ನದೇ ದಾಖಲೆ ಬರೆಯಲು ಕರ್ನಾಟಕದ ನಂದಿನಿ ಹಾಲು ಸಿದ್ಧಗೊಂಡಿದೆ.
ದೆಹಲಿ ಸರ್ಕಾರದಿಂದ ಪ್ರಸ್ತಾವನೆ ಬಂದ ಹಿನ್ನೆಲೆಯಲ್ಲಿ ಕೆಎಂಎಫ್ ಆಡಳಿತ ಮಂಡಳಿಯಿಂದ ಮುಂದಿನ ತಿಂಗಳಿಂದ (2024ರ ಸೆಪ್ಟಂಬರ್ 1ರಿಂದ) ಪ್ರತಿದಿನ 1 ಲಕ್ಷ ಲೀಟರ್ ಹಾಲನ್ನು ದೆಹಲಿಗೆ ಕಳುಹಿಸಲು ಸಮ್ಮತಿಯನ್ನು ನೀಡಿದೆ. ಈಗಾಗಲೇ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯಕ್ಕೆ ನಂದಿನಿ ಹಾಲನ್ನು ಪೂರೈಕೆ ಮಾಡಲಾಗುತ್ತಿದೆ. ಈಗ ದೆಹಲಿ ಸರ್ಕಾರದಿಂದಲೂ ನಂದಿನಿ ಹಾಲಿಗೆ ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ಕೆಎಂಎಫ್ ಒಪ್ಪಿಕೊಂಡಿದೆ.
ನಮ್ಮ ಮೆಟ್ರೋದಲ್ಲಿ ದಾಖಲೆಯ ಪ್ರಯಾಣಿಕರ ಸಂಚಾರ; ಒಂದೇ ದಿನ 9.17 ಲಕ್ಷ ಜನ ಪ್ರಯಾಣ!
ದೇಶದಲ್ಲಿ ನಂದಿನಿ ಹಾಲಿಗೆ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿಯೇ ಕೆಎಂಎಫ್ ವತಿಯಿಂದ ನಂದಿನಿ ಹಾಲಿನ ಬೇಡಿಕೆಯ ಕುರಿತಂತೆ ಸಮೀಕ್ಷೆಯನ್ನು ಮಾಡಲಾಗಿದೆ. ಇನ್ನು ದೆಹಲಿ ಸರ್ಕಾರದಿಂದ ಪ್ರತಿನಿತ್ಯ 1 ಲಕ್ಷ ಲೀಟರ್ ಹಾಲು ಪೂರೈಸುವಂತೆ ಬೇಡಿಕೆ ಬಂದಿದ್ದರಿಂದ ಇದನ್ನು ಪೂರೈಕೆ ಮಾಡಲು ಸಾಧ್ಯವೇ ಎಂಬುದನ್ನು ಪರಿಶೀಲನೆ ಮಾಡಿದೆ. ಆದರೆ, ರಾಜ್ಯದಲ್ಲಿ ಪ್ರತಿನಿತ್ಯ 1 ಕೋಟಿ ಲೀ. ಹಾಲು ಉತ್ಪಾದನೆ ಆಗುತ್ತಿದ್ದು, ಇದರಲ್ಲಿ ದೆಹಲಿಗೆ 1 ಲಕ್ಷ ಲೀ. ಹಾಲು ಸರಬರಾಜು ಮಾಡುವುದು ಹೊರೆ ಆಗುವುದಿಲ್ಲ ಎಂದು ಒಪ್ಪಿಗೆ ಸೂಚಿಸಿದೆ. ಇನ್ನು ದೆಹಲಿಗೆ ನಂದಿನಿ ಹಾಲು ಪೂರೈಕೆ ಮಾಡಿದರೂ ರಾಜ್ಯದಲ್ಲಿ ಹಾಲಿಗೆ ಕೊರತೆ ಆಗುವುದಿಲ್ಲ. ಈ ಹಿನ್ನೆಲೆಯಲ್ಲಿ ಸೆಪ್ಟಂಬರ್‌ನಿಂದ ದೆಹಲಿಗೆ ಹಾಲು ಪೂರೈಕೆ ಮಾಡಲು ಮುಂದಾಗಿದೆ.