ಹವಾಮಾನ ವೈಪರೀತ್ಯಕ್ಕೆ ತುತ್ತಾಗುವ ರಾಜ್ಯಗಳಲ್ಲಿ ಕರ್ನಾಟಕ!

*ಹವಾಮಾನ ವೈಪರೀತ್ಯಕ್ಕೆ ತುತ್ತಾಗುವ ರಾಜ್ಯಗಳಲ್ಲಿ ಕರ್ನಾಟಕ 
*ದೇಶದ 27 ರಾಜ್ಯಗಳಲ್ಲಿ ಹವಾಮಾನ ವೈಪರೀತ್ಯ
*20 ಜನರಲ್ಲಿ 17 ಜನರಿಗೆ ಹವಾಮಾನ ಬಿಕ್ಕಟ್ಟಿನಿಂದ ತೊಂದರೆ!

Karnataka Maharashtra among most climate vulnerable cities says Council on Energy Environment and Water

ನವದೆಹಲಿ (ಅ. 28 ) :  ಅಸ್ಸಾಂ (Assam), ಆಂಧ್ರಪ್ರದೇಶ (Andhra Pardesh), ಬಿಹಾರ (Bihar), ಮಹಾರಾಷ್ಟ್ರ (Maharashtra) ಹಾಗೂ ಕರ್ನಾಟಕ (Karnataka) ರಾಜ್ಯಗಳು ಪ್ರವಾಹ, ಬರಗಾಲ ಮತ್ತು ಚಂಡಮಾರುತಗಳು ಸೇರಿ ಇನ್ನಿತರ ಪ್ರತಿಕೂಲ ವಾತಾವರಣಕ್ಕೆ ಅತಿಹೆಚ್ಚು ತುತ್ತಾಗುವ ಭಾರತದ ರಾಜ್ಯಗಳಾಗಿವೆ ಎಂದು ದಿಲ್ಲಿ ಮೂಲದ ತಜ್ಞರ ಕೂಟವೊಂದು ಹೇಳಿದೆ. ಜೊತೆಗೆ, ಇಂಧನ, ಪರಿಸರ ಮತ್ತು ಜಲ ಮಂಡಳಿ (Council on Energy, Environment and Water) ಬಿಡುಗಡೆ ಮಾಡಿದ ದಿ ಕ್ಲೈಮೇಟ್‌ ವಲ್ನರಬಿಲಿಟಿ ಇಂಡೆಕ್ಸ್‌ (The Climate vulnerability Index) ಪ್ರಕಾರ ಭಾರತದ ಶೇ.80ರಷ್ಟುಜಿಲ್ಲೆಗಳು ಪ್ರತಿಕೂಲ ವಾತಾವರಣಕ್ಕೆ ತುತ್ತಾಗುವ ಪ್ರದೇಶಗಳಾಗಿವೆ. ಅಲ್ಲದೆ ಶೇ.60ಕ್ಕಿಂತ ಹೆಚ್ಚು ಜಿಲ್ಲೆಗಳು ಮಧ್ಯಮದಿಂದ ಕಡಿಮೆ ಪ್ರಮಾಣದ ಹೊಂದಿಕೊಳ್ಳುವ ಸಾಮರ್ಥ್ಯ ಹೊಂದಿವೆ. ಒಟ್ಟಾರೆಯಾಗಿ, 27 ಭಾರತೀಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹವಾಮಾನ ವೈಪರೀತ್ಯಗಳಿಗೆ ಗುರಿಯಾಗಲಿವೆ, ಇದು ಸಾಮಾನ್ಯವಾಗಿ ಸ್ಥಳೀಯ ಆರ್ಥಿಕತೆಯನ್ನು ಅಡ್ಡಿಪಡಿಸುತ್ತದಲ್ಲದೇ ದುರ್ಬಲ ಸಮುದಾಯಗಳನ್ನು ಸ್ಥಳಾಂತರಕ್ಕೆ ಕಾರಣವಾಗುತ್ತದೆ ಎಂದು ವರದಿ ತಿಳಿಸಿದೆ.

ಬ್ರಿಟನ್‌ ಪ್ರಧಾನಿಯನ್ನು ಭೇಟಿಯಾದ ಉದ್ಯಮಿ ಗೌತಮ್‌ ಅದಾನಿ!

ಈ ಹಿನ್ನೆಲೆಯಲ್ಲಿ ಅ.31ರಿಂದ ನ.12ರವರೆಗೆ ಭಾರತ ಸೇರಿದಂತೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಸಮಾವೇಶ ನಿಗದಿಯಾಗಿದೆ. ಈ ಸಮಾವೇಶದಲ್ಲಿ ಹವಾಮಾನ ರಕ್ಷಣೆಗಾಗಿ ಸರಿಯಾದ ಸಮಯಕ್ಕೆ ಹಣಕಾಸು ನೆರವಿಗೆ ಒತ್ತಾಯಿಸುವ ಸಾಧ್ಯತೆಯಿದೆ. ಈ ಹಣವನ್ನು ಹವಾಮಾನ ವೈಪರಿತ್ಯದಿಂದಾಗುವ ಅನಾನುಕೂಲಗಳನ್ನು ತಡೆಯುವ ಯಾಂತ್ರಿಕ ವ್ಯವಸ್ಥೆ ರಚಿಸಿಕೊಳ್ಳಲು ನೆರವಾಗಲಿದೆ ಎನ್ನಲಾಗಿದೆ. 

ಭಾರತದಲ್ಲಿ 640 ಜಿಲ್ಲೆಗಳನ್ನು ಅಧ್ಯಯನ ನಡೆಸಿ  ಇವುಗಳಲ್ಲಿ 463 ಜಿಲ್ಲೆಗಳು ತೀವ್ರ ಪ್ರವಾಹ, ಬರ ಮತ್ತು ಚಂಡಮಾರುತಗಳಿಗೆ ಗುರಿಯಾಗುತ್ತವೆ ಎಂದು ಹೇಳಲಾಗಿದೆ. India Climate Collaborative and Edelgive Foundation ಸಹಭಾಗಿತ್ವದಲ್ಲಿ ಈ ಅಧ್ಯಯನ ನಡೆದಿದ್ದು ʼMapping India’s Climate Vulnerability – A District-level Assessmentʼ (ಭಾರತದ ಹವಾಮಾನ ಬಿಕ್ಕಟ್ಟಿನ ಅಧ್ಯಯನ - ಜಿಲ್ಲಾ ಮಟ್ಟದ ಮೌಲ್ಯಮಾಪನ) ವರದಿ ನೀಡಲಾಗಿದೆ. 

8% ಮಳೆ ಕೊರತೆಯೊಂದಿಗೆ ಈ ಸಲದ ಮುಂಗಾರು ಅಂತ್ಯ

ಅಸ್ಸಾಂನ ಧೇಮಾಜಿ ಮತ್ತು ನಾಗಾನ್(Nagaon), ತೆಲಂಗಾಣದ ಖಮ್ಮಂ (Khammam), ಒಡಿಶಾದ ಗಜಪತಿ ( Gajapati), ಆಂಧ್ರಪ್ರದೇಶದ ವಿಜಯನಗರ (Vijanagara), ಮಹಾರಾಷ್ಟ್ರದ ಸಾಂಗ್ಲಿ (Sangli) ಮತ್ತು ತಮಿಳುನಾಡಿನ ಚೆನ್ನೈ (Chennai) ಭಾರತದ ಅತ್ಯಂತ ಹವಾಮಾನ ದುರ್ಬಲ ಜಿಲ್ಲೆಗಳಲ್ಲಿ ಸೇರಿವೆ ಎಂದು ಅಧ್ಯಯಯನದಿಂದ ತಿಳಿದು ಬಂದಿದೆ.

20 ಜನರಲ್ಲಿ 17 ಜನರಿಗೆ ಹವಾಮಾನ ಬಿಕ್ಕಟ್ಟಿನಿಂದ ತೊಂದರೆ!

80% ಕ್ಕಿಂತ ಹೆಚ್ಚು ಭಾರತೀಯರು ಹವಾಮಾನ ಅಪಾಯಗಳಿಗೆ ಗುರಿಯಾಗುವ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ, ಅಂದರೆ, ದೇಶದ 20 ಜನರಲ್ಲಿ 17 ಜನರು ಹವಾಮಾನ ಅಪಾಯಗಳಿಗೆ ಗುರಿಯಾಗುತ್ತಾರೆ, ಅದರಲ್ಲಿ ಪ್ರತಿ ಐದು ಭಾರತೀಯರು ಹವಾಮಾನ ಬಿಕ್ಕಟ್ಟು ಹೆಚ್ಚಿರುವ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ.  45 ಪ್ರತಿಶತಕ್ಕಿಂತಲೂ ಹೆಚ್ಚು ಜಿಲ್ಲೆಗಳಲ್ಲಿ ಸ್ಥಳೀಯ ಪರಿಸರಕ್ಕೆ ಹೊಂದಿಕೊಳ್ಳದ ರೀತಿಯಲ್ಲಿ ಭೂಮಿ ಮತ್ತು ಮೂಲಸೌಕರ್ಯಗಳಲ್ಲಿ ಬದಲಾವಣೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.

ಹವಾಮಾನ, ಅಪೌಷ್ಠಿಕತೆ ನಿವಾರಣೆಗೆ ವಿಶೇಷ ಲಕ್ಷಣದ 35 ಬೆಳೆ ತಳಿ ಬಿಡುಗಡೆ ಮಾಡಿದ ಮೋದಿ!

ಇದಲ್ಲದೆ, 183  ಜಿಲ್ಲೆಗಳು  ತೀವ್ರವಾದ ಹವಾಮಾನ ಬಿಕ್ಕಟ್ಟಿಗೆ ಗುರಿಯಾಗಲಿವೆ. CEEW ಅಧ್ಯಯನವು 60 ಪ್ರತಿಶತಕ್ಕಿಂತಲೂ ಹೆಚ್ಚಿನ ಜಿಲ್ಲೆಗಳು ಹವಾಮಾನ ವೈಪರೀತ್ಯಗಳನ್ನು ನಿಭಾಯಿಸುವಲ್ಲಿ ಮಧ್ಯಮ ಮತ್ತು ಕಡಿಮೆ ಹೊಂದಾಣಿಕೆಯ ಸಾಮರ್ಥ್ಯವನ್ನು ಹೊಂದಿವೆ ಎಂದು ತಿಳಿದು ಬಂದಿದೆ.  ಭಾರತದ ಈಶಾನ್ಯ ರಾಜ್ಯಗಳು ಪ್ರವಾಹಕ್ಕೆ ಹೆಚ್ಚು ಗುರಿಯಾಗಲಿವೆ, ಆದರೆ ದಕ್ಷಿಣ ಮತ್ತು ಮಧ್ಯದಲ್ಲಿರುವ ರಾಜ್ಯಗಳು ತೀವ್ರ ಬರಗಾಲಕ್ಕೆ  ಗುರಿಯಾಗುತ್ತವೆ ಎಂದು ಅಧ್ಯಯನವು ತಿಳಿಸಿದೆ. ಇದಲ್ಲದೆ, ಪೂರ್ವ ಮತ್ತು ಪಶ್ಚಿಮ ರಾಜ್ಯಗಳಲ್ಲಿ ಕ್ರಮವಾಗಿ 59 ಮತ್ತು 41 ಪ್ರತಿಶತದಷ್ಟು ತೀವ್ರ ಚಂಡಮಾರುತಗಳಿಗೆ ಗುರಿಯಾಗಲಿವೆ.

Latest Videos
Follow Us:
Download App:
  • android
  • ios