Asianet Suvarna News Asianet Suvarna News

ಭಗವಾನ್‌ಗೆ ಹೈಕೋರ್ಟ್ ಶಾಕ್, ಸರ್ಕಾರಕ್ಕೂ ಎಚ್ಚರಿಕೆ!

* 'ರಾಮಮಂದಿರ ಏಕೆ ಬೇಡ' ಭಗವಾನ್ ಕೃತಿ ಪ್ರಕರಣ
* ಸರ್ಕಾರದಕ್ಕೆ ಚಾಟಿ ಬೀಸಿದ ಹೈಕೋರ್ಟ್
* ವಿಚಾರಣೆ ವಿಳಂಬ ಮಾಡಿದರೆ ದಂಡ ಕಟ್ಟಬೇಕಾಗುತ್ತದೆ

Karnataka High Court on Writer KS Bhagavan s book on Ram Mandir mah
Author
Bengaluru, First Published Oct 28, 2021, 6:53 PM IST

ಬೆಂಗಳೂರು(ಅ.  28)  ರಾಮಮಂದಿರ ಏಕೆ ಬೇಡ ಕೃತಿ ವಿವಾದ ವಿಚಾರ ಮತ್ತೆ ಚರ್ಚೆಗೆ ಬಂದಿದೆ.  ವಿವಾದಾತ್ಮಕ ಬರಹಗಾರ ಕೆ.ಎಸ್.ಭಗವಾನ್ ಗೆ (KS Bhagavan) ಹೈಕೋರ್ಟ್( Karnataka High Court) ಶಾಕ್ ನೀಡಿದೆ.  ಧಾರ್ಮಿಕ(Hindu) ನಂಬಿಕೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಭಗವಾನ್ ವಿರುದ್ಧ ಪ್ರಕರಣ ದಾಖಲಾಗಿತ್ತು.

ಭಗವಾನ್ ವಿರುದ್ದ ವಿಚಾರಣೆಗೆ ಅನುಮತಿ ನೀಡಲು ಸರ್ಕಾರದ ವಿಳಂಬ ಮಾಡುತ್ತಿರುವುದನ್ನು ಪ್ರಶ್ನಿಸಿ ದೂರು ದಾಖಲಾಗಿತ್ತು.  ಸರ್ಕಾರದ ವಿಳಂಬ ನಡವಳಿಕೆಗೆ ಹೈಕೋರ್ಟ್ ಗರಂ ಆಗಿದ್ದು 8 ವಾರಗಳಲ್ಲಿ ವಿಚಾರಣೆಗೆ ಅನುಮತಿ ಕೋರಿದ್ದ ಅರ್ಜಿ ಪರಿಗಣಿಸಿ ಇತ್ಯರ್ಥ ಪಡಿಸಿ ಇಲ್ಲವಾದಲ್ಲಿ  ಸಿಎಸ್ ಗೆ ದಂಡ ಹಾಕುವುದಾಗಿ ಹೈಕೋರ್ಟ್ ಎಚ್ಚರಿಕೆ  ನೀಡಿದೆ. ಪ್ರತಿ ದಿನಕ್ಕೆ 2 ಸಾವಿರ ರೂ. ದಂಡ ವಿಧಿಸುವುದಾಗಿ ನ್ಯಾ.ಕೃಷ್ಣ ಎನ್.ದೀಕ್ಷಿತ್ ಅವರ ಪೀಠ ಆದೇಶ ಹೊರಡಿಸಿದೆ.

ಭಗವಾನ್ ಮುಖಕ್ಕೆ ಮಸಿ ಬಳಿದ ವಕೀಲೆ ಯಾರು

ವಿವಾದಾತ್ಮಕ ಹೇಳಿಕೆಗಳಿಂದಲೇ ಭಗವಾನ್ ಸುದ್ದಿ ಮಾಡಿಕೊಂಡು ಬಂದವರು. ಅವರ ಹೇಳಿಕೆಗಳು ಹಲವಾರು ಸಂದರ್ಭದದಲ್ಲಿ ಹಿಂದು ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದ್ದವು. 

ಕೆ. ಎಸ್. ಭಗವಾನ್ ಮುಖಕ್ಕೆ ನ್ಯಾಯಾಲಯದ ಆವರಣದಲ್ಲಿ ಮಸಿ ಬಳಿಯಲಾಗಿತ್ತು.. ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಕಾರಣಕ್ಕೆ ವಕೀಲೆಯೊಬ್ಬರು ಮಸಿ ಬಳಿದಿದ್ದು ದೊಡ್ಡ ಸುದ್ದಿಯಾಗಿತ್ತು.

 ಕಳೆದ ಫೆಬ್ರವರಿಯಲ್ಲಿ ಬೆಂಗಳೂರಿನ 2ನೇ ಎಸಿಎಂಎಂ ನ್ಯಾಯಾಲಯದ ಆವರಣದಲ್ಲಿ ಈ ಘಟನೆ ನಡೆದಿತ್ತು. ವಕೀಲೆ ಮೀರಾ ರಾಘವೇಂದ್ರ ಎಂಬುವರು ಭಗವಾನ್ ಮುಖಕ್ಕೆ ಮಸಿ ಬಳಿದಿದ್ದರು.  ಭಗವಾನ್ ಅನೇಕ ಸಂದರ್ಭದಲ್ಲಿ ಹಿಂದು ಪದ್ಧತಿಗಳನ್ನು ವಿರೋಧಿಸಿಕೊಂಡು ಬಂದಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧದ ಪ್ರತಿಕ್ರಿಯೆಗಳು ಹರಿದು ಬಂದಿದ್ದವು. 

Follow Us:
Download App:
  • android
  • ios