Asianet Suvarna News Asianet Suvarna News

Jal Shakti Abhiyan: ಜಲಸಂರಕ್ಷಣೆಯಲ್ಲಿ ಕರ್ನಾಟಕದ ಗ್ರಾಮ ಪಂಚಾಯಿತಿ ದಕ್ಷಿಣ ಭಾರತಕ್ಕೇ ನಂ.1

*  ಅತ್ಯುತ್ತಮ ಸಿಎಸ್‌ಆರ್‌ ವಿಭಾಗದಲ್ಲಿ ಎಚ್‌ಎಎಲ್‌ ದೇಶಕ್ಕೆ ನಂಬರ್‌ 3
*  ರಾಷ್ಟ್ರಪತಿಗಳಿಂದ ಪ್ರಶಸ್ತಿ ಪ್ರದಾನ
*  ಜಲಸಂರಕ್ಷಣೆಗೆ ಕೋವಿಂದ್‌ ಕರೆ
 

Karnataka Grama Panchayat No 1 in South India in Water Conservation grg
Author
Bengaluru, First Published Mar 30, 2022, 10:26 AM IST

ನವದೆಹಲಿ(ಮಾ.30):  ಬರಡು ಭೂಮಿಯಾಗಿದ್ದ ದುರ್ಗದ ನಾಗೇನಹಳ್ಳಿ ಎಂಬ ಗ್ರಾಮವನ್ನು(Village) ಜಲಸಂರಕ್ಷಣೆ ಕ್ರಮಗಳ ಮೂಲಕ ಹಸಿರು ಭೂಮಿಯನ್ನಾಗಿಸಿದ ತುಮಕೂರು(Tumakuru) ಜಿಲ್ಲೆಯ ಕೊರಟಗೆರೆ ತಾಲೂಕಿನ ಎಲೆರಾಮಪುರ ಗ್ರಾಮ ಪಂಚಾಯಿತಿಗೆ ‘ದಕ್ಷಿಣ ಭಾರತ ವಲಯದ ಅತ್ಯುತ್ತಮ ಗ್ರಾಮ ಪಂಚಾಯತ್‌’(South India)ವಿಭಾಗದಲ್ಲಿ ಪ್ರಥಮ ಪ್ರಶಸ್ತಿ ಲಭಿಸಿದೆ. ಇದೇ ವೇಳೆ, ‘ಕಾರ್ಪೋರೆಟ್‌ ಸಾಮಾಜಿಕ ಹೊಣೆಗಾರಿಕೆಯಡಿ ಅತ್ಯುತ್ತಮ ಕೈಗಾರಿಕೆ’ (CSR) ವಿಭಾಗದಡಿ ಬೆಂಗಳೂರಿನ ಹಿಂದುಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ ಕಂಪನಿಗೆ ರಾಷ್ಟ್ರ ಮಟ್ಟದಲ್ಲಿ ತೃತೀಯ ಬಹುಮಾನ ದೊರೆತಿದೆ.

ನವದೆಹಲಿಯಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌(Ram Nath Kovind) ಅವರು ರಾಷ್ಟ್ರೀಯ ಜಲ ಪ್ರಶಸ್ತಿಗಳನ್ನು ರಾಜ್ಯ, ಜಿಲ್ಲೆ, ಸ್ಥಳೀಯ ಸಂಸ್ಥೆ ಹಾಗೂ ಶಾಲೆಗಳಿಗೆ ನೀಡಿದ್ದು, ರಾಜ್ಯದ ಈ ಎರಡೂ ಸಂಸ್ಥೆಗಳೂ ಸ್ವೀಕರಿಸಿವೆ.

Padma Shri: ಕನ್ನಡಿಗ ಮಹಾಲಿಂಗ, ರೈತರತ್ನ ನಡಕಟ್ಟಿನ್‌ಗೆ ಪದ್ಮ ಪ್ರದಾನ

ಎಲೆರಾಮಪುರದ ಸಾಧನೆ ಏನು?:

ಎಲೆರಾಮಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದುರ್ಗದ ನಾಗೇನಹಳ್ಳಿ ಬರಪೀಡಿತವಾಗಿತ್ತು. ತುಮಕೂರಿನಿಂದ 20 ಕಿ.ಮೀ. ದೂರದಲ್ಲಿರುವ ಈ ಹಳ್ಳಿಯಲ್ಲಿ ನೀರಿಗೆ ತತ್ವಾರವಿತ್ತು. ಕಲ್ಲುಗಳಿಂದ ಕೂಡಿದ್ದ ಈ ನೆಲದಲ್ಲಿ ನೀರಿಲ್ಲದೆ ವರ್ಷಕ್ಕೆ ಒಂದು ಬೆಳೆ ಬೆಳೆಯುವುದೇ ದುಸ್ತರವಾಗಿತ್ತು. 2021ರಲ್ಲಿ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್‌)ನ ಯೋಜನೆಯಾಗಿರುವ ‘ನಿಕ್ರಾ’ವನ್ನು ಈ ಗ್ರಾಮದಲ್ಲಿ ಆರಂಭಿಸಲಾಯಿತು. ಸಮುದಾಯ ಸಹಭಾಗಿತ್ವದಡಿ ಹಿರೇಹಳ್ಳಿಯ ಕೃಷಿ ಸಮುದಾಯ ಕೇಂದ್ರ ಯೋಜನೆಯನ್ನು ಅನುಷ್ಠಾನಕ್ಕೆ ತಂದಿತ್ತು. ಈಗ ದುರ್ಗದ ನಾಗೇನಳ್ಳಿಯಲ್ಲಿ ಹಸಿರು ನಳನಳಿಸುತ್ತಿದೆ. ಕೆರೆಗಳು, ಕೊಳಗಳು ಮಳೆಗಾಲದಲ್ಲಿ ತುಂಬಿ ಹರಿಯುವಂತಾಗಿದೆ.

ಪ್ರಶಸ್ತಿ ಪ್ರದಾನ ನಂತರ ಮಾತನಾಡಿದ ರಾಷ್ಟ್ರಪತಿ(President of India) ಕೋವಿಂದ್‌, ಸರ್ಕಾರದ ಜಲಸಂರಕ್ಷಣಾ ಅಭಿಯಾನದಲ್ಲಿ(Jal Shakti Abhiyan) ಸಾರ್ವಜನಿಕರೂ ಭಾಗಿಯಾಗಬೇಕು. ಈ ವಿಷಯದಲ್ಲಿ ಜಿಲ್ಲಾಡಳಿತಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ವಿಶೇಷ ಪಾತ್ರ ವಹಿಸಿ ಜನರನ್ನು ಪ್ರೇರೇಪಿಸಿ ಅಭಿಯಾನದ ಭಾಗವಾಗಿಸಬೇಕು ಎಂದು ಸಲಹೆ ಮಾಡಿದರು.

ಇದೇ ವೇಳೆ, ಮಳೆ ನೀರು ಹಿಡಿದಿಡುವ ‘ಜಲಶಕ್ತಿ ಅಭಿಯಾನ: ಕ್ಯಾಚ್‌ ದ ರೇನ್‌ ಕ್ಯಾಂಪೇನ್‌ 2022’ಕ್ಕೆ ರಾಷ್ಟ್ರಪತಿ ಚಾಲನೆ ನೀಡಿದರು. ಈ ಅಭಿಯಾನ ನ.30ರವರೆಗೆ ಜಾರಿಯಲ್ಲಿರುತ್ತದೆ.

ಇನ್ಫಿ ಸುಧಾಮೂರ್ತಿ ರಾಷ್ಟ್ರಪತಿಯಾಗಬೇಕೆಂದು ಹಂಪಿಯ ವಿರೂಪಾಕ್ಷನಿಗೆ ಪೂಜೆ

ವಿಜಯನಗರ: ಹಲವು ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳೋ ಮೂಲಕ ಸಮಾಜದಲ್ಲಿ ಸತ್ಕಾರ್ಯ ಮಾಡ್ತಿರೋ ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ (infosys Sudha Murthy) ರಾಷ್ಟ್ರಪತಿ (president ) ಆಗಬೇಕೆಂದು ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇಗುಲದಲ್ಲಿ (hampi virupaksha temple) ವಿಶೇಷ ಪೂಜೆ ಸಲ್ಲಿಸಲಾಯಿತು. ಹಂಪಿಯ (hampi) ಪ್ರವಾಸಿ ಮಾರ್ಗದರ್ಶಿಗಳಿಂದ ದಕ್ಷಿಣ ಕಾಶಿ ವಿಶ್ವ ವಿಖ್ಯಾತ ಹ‌ಂಪಿಯ ಶ್ರೀ ವಿರೂಪಾಕ್ಷನಿಗೆ ರುದ್ರಾಭಿಷೇಕ ಮಾಡೋ ಮೂಲಕ ಸುಧಾಮೂರ್ತಿ ಅವರ ಹೆಸರಿನಲ್ಲಿ ವಿಶೇಷ ಪೂಜೆ ಮಾಡಿಸಲಾಯಿತು.

Padma Shri ಪ್ರಧಾನಿ, ರಾಷ್ಟ್ರಪತಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಪದ್ಮಶ್ರೀ ಸ್ವೀಕರಿಸಿದ 125 ವರ್ಷದ ಯೋಗ ಗುರು!

ಸಮಾಜದಲ್ಲಿ ಉತ್ತಮ ಕೆಲಸದ ಜೊತೆಗೆ ಮಹಿಳೆ ಮತ್ತು‌ ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು: ಹೌದು, ಕಳೆದ ಹಲವು ದಶಕಗಳಿಂದ ಶಾಲೆಗಳ ದುರಸ್ತೆ ಮತ್ತು ದತ್ತು ಪ್ರಕ್ರಿಯೆ ಸೇರಿದಂತೆ ಹಲವು ರೀತಿಯಲ್ಲಿ ಸಮಾಜ ಮುಖಿ ಕೆಲಸ ಮಾಡಿರೋ ಸುಧಾಮೂರ್ತಿಯವರು ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಹಲವು ರೀತಿಯಲ್ಲಿ ಸಹಾಯ ಸಹಕಾರ ಮಾಡಿದ್ದಾರೆ. ಇನ್ನೂ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅತಿಹೆಚ್ಚು ದೇಣಿಗೆ ನೀಡೋ ಮೂಲಕ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ.‌ ಇಂತಹ ವ್ಯಕ್ತಿಗಳು ರಾಷ್ಟ್ರದ ಉನ್ನತ ಹುದ್ದೇಗೇರೋದು ಹುದ್ದೇಗೂ ಒಂದು ಗೌರವ ಎನ್ನುವುದಾಗಿದೆ.

ಕೊರೋನಾ ವೇಳೆಯೂ ಸಹಾಯ: 

ಕೊರೋನಾ ಸಮಯದಲ್ಲಿ ಸಾಕಷ್ಟು ಕಂಪನಿಗಳು‌ ಮುಚ್ಚಿದವು. ಹಲವರು ‌ನೌಕರಿ‌ ಕಳೆದುಕೊಂಡು ಬೀದಿಗೆ ಬಿದ್ರೂ, ತಮ್ಮ ಸಂಸ್ಥೆಯ ಯಾವೊಬ್ಬ ನೌರರನ್ನು ತೆಗೆಯದೇ ಮತ್ತು ವೇತನ ಕಡಿತಗೊಳಿಸದಂತೆ ಕೆಲಸ ಮಾಡಿಸಿಕೊಂಡಿದ್ದಾರೆ. ಇಷ್ಟೇ ಅಲ್ಲದೇ ಹಲವು ಕಡೆಗಳಲ್ಲಿ ಸಹಾಯ ಹಸ್ತಚಾಚೋ  ಮೂಲಕ ಆಹಾರ ಕಿಟ್ ಸೇರಿದಂತೆ ಇನ್ನಿತೆ ಗೃಹೋಪಯೋಗಿ ವಸ್ತುಗಳನ್ನು ನೀಡಿ ಸಮಾಜ ಸೇವೆ ಮಾಡಿದ್ದಾರೆ. ಕೊರೊನಾ ವೇಳೆ  ಹಲವು ರಂಗದವರಿಗೆ ಸಹಾಯ ಮಾಡಿದಂತೆ ಹಂಪಿಯ ಪ್ರವಾಸಿ ಗೌಡ್ ಗಳಿಗೂ ಸಾಕಷ್ಟು ಸಹಾಯ ಸಹಕಾರ ಮಾಡಿದ ಹಿನ್ನೆಲೆ ಇಲ್ಲಿಯ ಜನರು ಅವರಿಗೆ ಸದಾ ಋಣಿಯಾಗಿದ್ದಾರೆ. ಹೀಗಾಗಿ ಇಂತಹ ಸರಕ ವ್ಯಕ್ತಿತ್ವ ಇರೋ ಸುಧಾಮೂರ್ತಿಯವರು ರಾಷ್ಟ್ರಪತಿ ಸ್ಥಾನ ಸಿಗಲೆಂದು ಪೂಜೆ ಸಲ್ಲಿಸಲಾಯಿತು.
 

Follow Us:
Download App:
  • android
  • ios