* 15 ನಿಮಿಷ ಫ್ಲೈಓವರ್‌ನಲ್ಲಿ ಸಿಲುಕಿದ ಪ್ರಧಾನಿ ಮೋದಿ* ಕಾರ್ಯಕ್ರಮದಲ್ಲಿ ಭಾಗಿಯಾಗದೇ ಪಂಜಾಬ್‌ನಿಂದ ದಿಲ್ಲಿಗೆ ವಾಪಸ್* ಪಂಜಾಬ್ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ ಬೊಮ್ಮಾಯಿ

ಮಂಡ್ಯ, (ಜ.05): ಪಂಜಾಬ್‌ನ (Punjab) ಫಿರೋಜ್​ಪುರ ಫ್ಲೈಓವರ್​ನ ಟ್ರಾಫಿಕ್​ನಲ್ಲಿ ಸಿಲುಕಿದ ಪ್ರಧಾನಿ ನರೇಂದ್ರ ಮೋದಿ ( ಅವರು ವಾಪಸ್ ದೆಹಲಿಗೆ ಮರಳಿದ್ದಾರೆ. ಪಂಚಾಬ್ ಸರ್ಕಾರ ಭದ್ರತೆ ನೀಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಲಾಗಿದೆ.

ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಮಂಡ್ಯದಲ್ಲಿ(Mandya) ಪ್ರಿತಿಕ್ರಿಯಿಸಿದ್ದು, ಪಂಜಾಬ್​​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭದ್ರತೆಯಲ್ಲಿ ಲೋಪವಾಗಿದೆ. ಪ್ರಧಾನಿಗೆ ಮುಕ್ತವಾಗಿ ಓಡಾಡಲು ಅವಕಾಶ ನೀಡಿಲ್ಲ. ಅವಕಾಶ ನೀಡದಿರುವುದು ಖಂಡನೀಯ ಎಂದರು.

UP Elections: ಮೋದಿ ಭದ್ರತೆಯಲ್ಲಿ ಭಾರೀ ಲೋಪ, ಆದ್ರೂ ಸಿಎಂ ಫೋನೆತ್ತಲಿಲ್ಲ: ನಡ್ಡಾ ಆರೋಪ!

ಪ್ರಧಾನಿಗೆ ಗೌರವ ಕೊಡುವುದು ಎಲ್ಲ ಸರ್ಕಾರಗಳ ಕರ್ತವ್ಯ. ಭದ್ರತೆ ಒದಗಿಸುವಲ್ಲಿ ಪಂಜಾಬ್ ಸರ್ಕಾರ ವಿಫಲವಾಗಿದೆ. ಪಂಜಾಬ್‌ ಸರ್ಕಾರವನ್ನ ವಜಾಗೊಳಿಸಬೇಕು. ಉನ್ನತ ತನಿಖೆಯಾಗಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

Scroll to load tweet…

ಪಂಜಾಬ್‌ನಲ್ಲಿ ರಸ್ತೆ ಮೂಲಕ ಪ್ರಯಾಣಿಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಕೆಲವು ಪ್ರತಿಭಟನಾಕಾರರ ದಿಗ್ಬಂಧನದಿಂದಾಗಿ 15-20 ನಿಮಿಷಗಳ ಕಾಲ ಫ್ಲೈಓವರ್‌ನಲ್ಲೆ ಸಿಲುಕಿಕೊಂಡರು. ಈ ಘಟನೆಯನ್ನು ಕೇಂದ್ರ ಗೃಹ ಸಚಿವಾಲಯವು ಪಂಜಾಬ್ ಪೊಲೀಸ್ ಹಾಗೂ ಭದ್ರತಾ ಇಲಾಖೆಯ ದೊಡ್ಡ ಲೋಪ ಎಂದಿದೆ‌.

ಪಂಜಾಬ್‌ ಸಿಎಂಗೆ ಮೋದಿ ಧನ್ಯವಾದ
ಭಟಿಂಡಾ ಏರ್​ಪೋರ್ಟ್​ಗೆ ನಾನು ಜೀವಂತವಾಗಿ ಬದುಕಿ ಬಂದೆ. ನಾನು ಬದುಕಿ ಬರಲು ಸಹಕರಿಸಿದ ಪಂಜಾಬ್​ ಸಿಎಂಗೆ ನನ್ನ ಧನ್ಯವಾದ ತಿಳಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಿಎಂ ಚನ್ನಿಗೆ ಟಾಂಗ್​ ಕೊಟ್ಟಿದ್ದಾರೆ.

 ಪಂಜಾಬ್​ಗೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭದ್ರತೆ ಕಲ್ಪಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿತ್ತು. ಪರಿಣಾಮ ಫಿರೋಜ್​ಪುರ ಫ್ಲೈಓವರ್​ನಲ್ಲಿ 20 ನಿಮಿಷ ಟ್ರಾಫಿಕ್​ನಲ್ಲಿ ಸಿಲುಕಿದ್ದ ಪ್ರಧಾನಿ, ಅಲ್ಲಿಂದ ವಾಪಸ್​ ಆಗಿದ್ದು, ಫಿರೋಜ್​ಪುರದಲ್ಲಿ ನಡೆಯಬೇಕಿದ್ದ ಬಿಜೆಪಿ ರ‍್ಯಾಲಿ ರದ್ದಾಗಿದೆ. ಈ ಭದ್ರತಾ ವೈಫಲ್ಯ ಕುರಿತು ಭಟಿಂಡಾ ಏರ್​ಪೋರ್ಟ್​ನ ಅಧಿಕಾರಿಗಳಿಗೆ ಮೊದಲ ಪ್ರತಿಕ್ರಿಯೆ ಕೊಟ್ಟ ಪ್ರಧಾನಿ, ನನ್ನನ್ನು ಜೀವಂತವಾಗಿ ಕಳಿಸಿದ್ದಕ್ಕೆ ಪಂಜಾಬ್​ ಸಿಎಂಗೆ ಧನ್ಯವಾದ ಎಂದಿದ್ದಾರೆ.

42,750 ಕೋಟಿಗೂ ಹೆಚ್ಚು ಮೊತ್ತದ ಬಹು ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆಗಾಗಿ ಪ್ರಧಾನಿ ನರೇಂದ್ರ ಮೋದಿ ಇಂದು(ಬುಧವಾರ) ಪಂಜಾಬ್‌ಗೆ ಆಗಮಿಸಿದ್ದರು. ಫಿರೋಜ್‌ಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಹೋಗಬೇಕಿತ್ತು. ಆದರೆ, ಮಾರ್ಗದಲ್ಲೇ ಟ್ರಾಫಿಕ್​ ಉಂಟಾಗಿತ್ತು. ಅಷ್ಟೇ ಅಲ್ಲ ಪೊಲೀಸ್​ ಭದ್ರತಾ ವೈಫಲ್ಯ ಎದ್ದು ಕಾಣುತ್ತಿತ್ತು. ರ‍್ಯಾಲಿ ತಡೆಯಲು ಉದ್ದೇಶಪೂರ್ವಕವಾಗಿಯೇ ಪಂಜಾಬ್​ ಸರ್ಕಾರ ಪೊಲೀಸರಿಗೆ ಸೂಚನೆ ಕೊಟ್ಟಿದ್ದರು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಆರೋಪಿಸಿದ್ದಾರೆ.

ಆಗಿದ್ದೇನು?
ಪಂಜಾಬ್‌ನ ಫ್ಲೈವರ್‌ನಲ್ಲಿ ಸುಮಾರು 15-20 ನಿಮಿಷಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಸಿಲುಕಿದ್ದಾರೆ. ಭದ್ರತಾ ಲೋಪ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‌ನ ಫಿರೋಜ್‌ಪುರದಲ್ಲಿ ಸಮಾವೇಶ ರದ್ದು ಮಾಡಿದ್ದಾರೆ ಎಂದು ಗೃಹ ಸಚಿವಾಲಯ ಮಾಹಿತಿ ನೀಡಿದೆ.

ಹುಸೇನಿವಾಲಾದಲ್ಲಿನ ರಾಷ್ಟ್ರೀಯ ಹುತಾತ್ಮರ ಸ್ಮಾರಕದಿಂದ ಸುಮಾರು 30-ಕಿಮೀ ದೂರದಲ್ಲಿ, ಪ್ರಧಾನ ಮಂತ್ರಿಯ ಬೆಂಗಾವಲು ಪಡೆ ಫ್ಲೈಓವರ್ ಅನ್ನು ತಲುಪಿದಾಗ, ಕೆಲವು ಪ್ರತಿಭಟನಾಕಾರರು ರಸ್ತೆಯನ್ನು ನಿರ್ಬಂಧಿಸಿರುವುದು ಕಂಡುಬಂದಿದೆ. ಪ್ರಧಾನಿ 15-20 ನಿಮಿಷಗಳ ಕಾಲ ಫ್ಲೈಓವರ್ ಮೇಲೆ ಸಿಲುಕಿಕೊಂಡರು. ಇದು ಪ್ರಧಾನಿಯವರ ಭದ್ರತೆಯಲ್ಲಿ ದೊಡ್ಡ ಲೋಪವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪ್ರತಿಭಟನೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಫ್ಲೈಓವರ್‌ನಲ್ಲಿ ಸಿಲುಕಿದ್ದರು, ಬಳಿಕ ಬತಿಂಡಾದಲ್ಲಿ ನಡೆಯಬೇಕಿದ್ದ ಕಾರ್ಯಕ್ರಮವನ್ನು ರದ್ದುಗೊಳಿಸಿ ಏರ್‌ಪೋರ್ಟ್‌ಗೆ ತೆರಳಿದರು. ಪಂಜಾಬ್‌ನಲ್ಲಿ ಕಾಂಗ್ರೆಸ್ ಸರ್ಕಾರ ಇರುವುದೇ ಈ ವೈಫಲ್ಯಕ್ಕೆ ಕಾರಣ ಎಂದು ಗೃಹ ಸಚಿವಾಲಯ ತಿಳಿಸಿದೆ.