Asianet Suvarna News Asianet Suvarna News

ಸಂಚಲನ ಸೃಷ್ಟಿಸಿದ ನಂಜನಗೂಡಿನ ಹುಲಿ, ಇದು ಭಾರತದ ಮೊದಲ ಬೆಲ್ಲದಿಂದ ತಯಾರಿಸಿದ ರಮ್!

ನಂಜನಗೂಡಿನ ಹುಲಿ ಇದೀಗ ದೇಶ ಮಾತ್ರವಲ್ಲಿ ವಿದೇಶದಲ್ಲಿ ಬಾರಿ ಸದ್ದು ಮಾಡುತ್ತಿದೆ. ಇದು ಬೆಲ್ಲದಿಂದ ತಯಾರಿಸಿದ ಭಾರತದ ಮೊದಲ ರಮ್. ಕನ್ನಡ ಹೆಸರಿನಲ್ಲೇ ಇರುವ ಈ ರಮ್ ಭಾರತದ ರಮ್ ದೃಷ್ಟಿಕೋನವನ್ನೇ ಬದಲಿಸಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

Karnataka base Indias first jaggery rum huli storm in social media ckm
Author
First Published Aug 10, 2024, 12:40 PM IST | Last Updated Aug 10, 2024, 12:40 PM IST

ಮೈಸೂರು(ಆ.10)  ಕಳೆದ ಹಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಹುಲಿ ಘರ್ಜಿಸುತ್ತಿದೆ. ಇದು ನಂಜನಗೂಡಿನ ಹುಲಿ. ಹೌದು, ಹುಲಿ ಅನ್ನೋ ಮದ್ಯ ಇದೀಗ ಕರ್ನಾಟಕ ಮಾತ್ರವಲ್ಲ, ದೇಶ ವಿದೇಶಗಳಲ್ಲೂ ಸಂಚಲನ ಸೃಷ್ಟಿಸಲು ಸಜ್ಜಾಗಿದೆ. ಹುಲಿ, ಭಾರತದ ಮೊದಲ ಜಾಗರಿ ರಮ್. ಭಾರತದಲ್ಲಿ ರಮ್ ಮದ್ಯವನ್ನು ಬಡವರ ಮದ್ಯ ಎಂದೇ ಕರೆಯುತ್ತಾರೆ. ಆದರೆ ಈ ದೃಷ್ಟಿಕೋನ ಬದಲಿಸಲು ಹಾಗೂ ಒಂದೊಂದು ಗುಟುಕಿನಲ್ಲಿ ಬೆಲ್ಲದ ರಮ್ ಸವಿ ಅನುಭವಿಸಲು ಹುಲಿ ರಮ್ ಅವಕಾಶ ಮಾಡಿಕೊಡಲಿದೆ ಅನ್ನೋದು ಹಲವರ ಅಭಿಪ್ರಾಯ.

ರಮ್ ಹುಟ್ಟಿಕೊಂಡಿದ್ದು ಕೆರಿಬಿಯನ್ ರಾಷ್ಟ್ರದಲ್ಲಾದರೂ ಭಾರತದಲ್ಲಿ ಅತೀ ಹೆಚ್ಚು ಬಳಕೆಯಾಗುತ್ತಿದೆ. ಭಾರತದಲ್ಲಿ ಹಲವು ಬ್ರ್ಯಾಂಡ್ ರಮ್‌ಗಳಿವೆ. ಇದೀಗ ಭಾರತ ತನ್ನದೇ ಆದ ವಿಶೇಷ ರಮ್ ತಯಾರಿಸಿದೆ. ಇದು ನಮ್ಮ ಮೈಸೂರಿನ ನಂಜನಗೂಡಿನಲ್ಲಿ ಉತ್ಪಾದನೆಯಾಗಿದೆ ಅನ್ನೋದು ಮತ್ತೊಂದು ವಿಶೇಷ. ಬರೋಬ್ಬರಿ 8 ವರ್ಷಗಳ ಸತತ ಪರಿಶ್ರಮದ ಮೂಲಕ ಇದೀಗ ಕನ್ನಡ ಹೆಸರಿನ ಅಂತಾರಾಷ್ಟ್ರೀಯ ಬ್ರ್ಯಾಂಡ್ ಹುಲಿ ರಮ್ ಬಿಡುಗಡೆಗೆ ಸಜ್ಜಾಗಿದೆ.

ಭಾರತದಲ್ಲಿ ಮದ್ಯ ಜಾಹೀರಾತಿಗೆ ಸೆಲೆಬ್ರೆಟಿಗಳಿಗಿಲ್ಲ ಅವಕಾಶ, ಇನ್ನು ಕುಡುಕರೆ ಬ್ರಾಂಡ್ ಅಂಬಾಸಿಡರ್!

ಹುಲಿ, ಸಿಂಗಲ್ ಒರಿಜಿನ್ ಜಾಗರಿ ರಮ್. ಇದೇ ಮೊದಲ ಭಾರಿಗೆ ಭಾರತ ಬೆಲ್ಲದ ಡಿಸ್ಟಿಲ್ಲರ್ ಮೂಲಕ ಈ ಮದ್ಯ ತಯಾರಿಸಲಾಗಿದೆ. ನಂಜನಗೂಡಿನಲ್ಲಿ ಈ ವಿಶೇಷ ಮದ್ಯ ತಯಾರಾಗಿದೆ. ಆಗಸ್ಟ್ 15ರಂದು ಈ ಮದ್ಯ ದೇಶಾದ್ಯಂತ ಮಾರುಕಟ್ಟೆಗೆ ಪ್ರವೇಶಿಸಲಿದೆ. ಈ ಕುರಿತು ಅರುಣ್ ಅರಸ್ ಹಾಗೂ ಚಂದ್ರಾ ಎಸ್ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 

ಹುಲಿ ರಮ್ ಭಾರತದಲ್ಲಿ ಉತ್ಪಾದನೆಯಾದ ರಮ್. ಇದು ಹುಲಿ ಕನ್ನಡ ಪದ. ಭಾರತದಲ್ಲಿ ಮೊದಲ ಬಾರಿಗೆ ತಯಾರಾದ ಮೈಕ್ರೋ ಡಿಸ್ಟಲರಿಯಲ್ಲಿ ತಯಾರಿಸಿದ ವಿಶ್ವದರ್ಜೆಯ ಬೆಲ್ಲದ ರಮ್ ಇದಾಗಿದೆ. ನಮ್ಮ ಪೂರ್ವಜರು ಆನಂದಿಸಿ ಸವಿದ ವಿಶೇಷ ಮದ್ಯವನ್ನು ಕಳೆದ 8 ವರ್ಷಗಳ ಸತತ ಪರಿಶ್ರಮದ ಮೂಲಕ ಹೊರತರಲಾಗಿದೆ ಎಂದು ಅರುಣ್ ಅರಸ್ ಸೋಶಿಯಲ್ ಮೀಡಯಾದಲ್ಲಿ ಹಂಚಿಕೊಂಡಿದ್ದಾರೆ.  

 

 

ಹುಲಿ ರಮ್ ಒಂದು ಬಾಟಲಿ ಬೆಲೆ 2,300 ರೂಪಾಯಿ. ಬಿಡುಗಡೆಯ ಆರಂಭಿಕ ಹಂತದಲ್ಲಿ 2,000 ಬಾಟಲ್‌ಗಳು ಬೆಂಗಳೂರಿನ ಮಳಿಗೆಗಳಿಗೆ ಪೂರೈಸಲಾಗುತ್ತಿದೆ. ಬಳಿಕ ಹಂತ ಹಂತವಾಗಿ ಎಲ್ಲಾ ಭಾಗಕ್ಕೆ ವಿಸ್ತರಣೆಯಾಗಲಿದೆ. ದೇಶ ವಿದೇಶಗಳಲ್ಲೂ ಈ ಮದ್ಯ ಲಭ್ಯವಾಗಲಿದೆ. 

ವಿಶೇಷ ಸೂಚನೆ: ಮದ್ಯಪಾನ ಆರೋಗ್ಯಕ್ಕೆ ಹಾನಿಕರ

ಭಾರತದ ಯಾವ ರಾಜ್ಯದಲ್ಲಿ ಮಹಿಳಾ ಕುಡುಕರ ಸಂಖ್ಯೆ ಹೆಚ್ಚು? NFHS ಸಮೀಕ್ಷೆ ಬಹಿರಂಗ!
 

Latest Videos
Follow Us:
Download App:
  • android
  • ios