ಒಂಟೆ ಬಾಲ ಹಿಡಿದು ಒದೆ ತಿಂದ ನಾಯಿಗೆ ಹಿಂಸೆ ಕೊಡಲು ಹೋಗಿ ಹಸುವಿನಿಂದ ಒದೆಸಿಕೊಂಡ
ಇರಲಾರದೆ ಇರುವೆ ಬಿಟ್ಕೊಳೋದು ಅಂತ ಒಂದು ಮಾತಿದೆ. ಅದರಂತೆ ರಸ್ತೆಯಲ್ಲಿ ಸುಮ್ಮನೆ ಅದರಷ್ಟಕ್ಕೆ ಹೋಗುತ್ತಿದ್ದ ಒಂಟೆಯ ಬಾಲ ಎಳೆಯಲು ಹೋಗಿ ವ್ಯಕ್ತಿಯೊಬ್ಬ ಸರಿಯಾಗಿ ಒದೆ ತಿಂದಿದ್ದಾನೆ. ಟ್ವಿಟ್ಟರ್‌ನಲ್ಲಿ ಈ ನಗು ತರಿಸುವ ವಿಡಿಯೋ ಪೋಸ್ಟ್ ಆಗಿದ್ದು ಇದನ್ನು ಸಾವಿರಾರು ಜನ ವೀಕ್ಷಿಸಿದ್ದಾರೆ. ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದ ಅವರು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದಾರೆ.
ನಮ್ಮ ಹಿರಿಯರು ಕರ್ಮಯೋಗದ ಬಗ್ಗೆ ಮಾತನಾಡುವುದನ್ನು ನೀವು ಕೇಳಿರಬಹುದು ನಾವು ಮಾಡಿದ ಕರ್ಮ ಒಳ್ಳೆಯದೇ ಆಗಿರಲಿ ಕೆಟ್ಟದೇ ಆಗಿರಲಿ ಅದರ ಫಲ ನಮ್ಮನ್ನು ಕಾಡದೇ ಬಿಡುವುದಿಲ್ಲ ಎಂಬುದು. ಮಾಡಿದ ಕರ್ಮಕ್ಕೆ ಫಲ ಅನುಭವಿಸಲೇ ಬೇಕು ಎಂಬ ಮಾತಿದೆ. ನಾವು ಮಾಡುವ ಒಳ್ಳೆಯ ಕರ್ಮಗಳು ನಮ್ಮನ್ನು ಒಳ್ಳೆಯ ದಾರಿಯಲ್ಲಿ ಕೊಂಡೊಯ್ಯಬಲ್ಲವು ಎಂಬುದು ಹಾಗೆಯೇ ನಮ್ಮ ಕೆಟ್ಟ ಕರ್ಮಗಳು ಹೇಗೆ ನಮಗೆ ಫಲ ಕೊಡುವವು ಎಂಬುದಕ್ಕೆ ಕೆಲವು ನಿದರ್ಶನಗಳು ಸಾಕ್ಷಿ ಅಂತಹ ಕೆಲವು ವಿಡಿಯೋಗಳು ಇಲ್ಲಿವೆ ನೋಡಿ.
Past Life: ಕನಸಿನ ಈ ಸೂಚನೆಗಳು ನಿಮ್ಮ ಪೂರ್ವ ಜನ್ಮದ ನೆನಪುಗಳಿರಬಹುದು..!
ಇವು ನೋಡಲು ತಮಾಷೆಯಾಗಿ ಕಂಡರು ಕೂಡ ಇದರಲ್ಲೊಂದು ಪಾಠ ಇರುವುದಂತು ನಿಜ. ಹೀಗೆ ದಾರಿಯಲ್ಲಿ ಹೋಗುತ್ತಿದ್ದ ಒಂಟೆಯ ಬಾಲ ಹಿಡಿಯಲು ಹೋದ ವ್ಯಕ್ತಿಗೆ ಒಂಟೆಯೊಂದು ಸರಿಯಾಗಿ ಒದ್ದಿದ್ದು, ನೋಡುವುದಕ್ಕೆ ಈ ವಿಡಿಯೋ ನಗು ತರಿಸುತ್ತಿದೆ.
ಹಾಗೆಯೇ ಜಿಂಕೆಯೊಂದರ ಬೇಟೆಗೆ ನಿಂತ ವ್ಯಕ್ತಿಯೊಬ್ಬನಿಗೆ ದೂರದಿಂದ ವೇಗವಾಗಿ ಓಡಿ ಬಂದ ಜಿಂಕೆ ಬೇಟೆಗಾರನಿಗೆ ಗುಂಡು ಹರಿಸಲು ಕೂಡ ಸಮಯ ನೀಡದೇ ತನ್ನ ಕೊಂಬಿನಲ್ಲೇ ಆತನನ್ನು ಕುತ್ತಿ ಕೆಳಗೆ ಬೀಳಿಸಿ ಮುಂದೆ ಹೋಗಿ ಪಾರಾಗಿದೆ. ಈ ವಿಡಿಯೋವನ್ನು 62,000ಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.
ಇನ್ನು ಎಮ್ಮೆಯೊಂದರ ಮೇಲೆ ಕುಳಿತ ಜನರ ಗುಂಪು ಅದಕ್ಕೆ ಸರಿಯಾಗಿ ಬಾರಿಸುತ್ತಾ ವೇಗವಾಗಿ ಹೋಗಲು ಯತ್ನಿಸುತ್ತಾರೆ. ಆದರೆ ಭಾರ ಹಾಗೂ ನೋವು ತಡೆಯಲಾಗದ ಎಮ್ಮೆ ಆಮೇಲೇನು ಮಾಡಿತು ನೋಡಿ..
ಹಾಗೆಯೇ ಪ್ರಾಣಿಗಳಿಗೆ ಮನುಷ್ಯರು ಮಾಡುವ ಕಿರುಕುಳ ಹೇಗಿರುತ್ತದೆ ಎಂದರೆ ಇತರ ಪ್ರಾಣಿಗಳು ಕೂಡ ಅದನ್ನು ಸಹಿಸದಷ್ಟು ಕಠೋರವಾಗಿರುತ್ತದೆ. ಹೀಗೆ ನಾಯಿಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಗೆ ಹಸುವೊಂದು ಏನು ಮಾಡಿತು ನೋಡಿ.
Navagraha And Health: ಆರೋಗ್ಯಕ್ಕೂ ನವಗ್ರಹಗಳಿಗೂ ಉಂಟು ಬಾದರಾಯಣ ಸಂಬಂಧ