ಮುಂಬೈ(ನ.23): ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ದೇವೇಂದ್ರ ಫಡ್ನವೀಸ್ ಪಾಕಿಸ್ತಾನದ ಕರಾಚಿ ಮುಂದೊಂದು ದಿನ ಭಾರತದ ಭಾಗವಾಗಲಿದೆ ಎಂದಿದ್ದಾರೆ. 

ಹಮೀದ್ ಅನ್ಸಾರಿಗೆ ಹಿಂದುತ್ವದ ಅರ್ಥ ತಿಳಿಸಿದ ದೇವೇಂದ್ರ ಫಡ್ನವೀಸ್!

ಶಿವಸೇನೆಯ ನಾಯಕನೊಬ್ಬ ಮುಂಬೈನ ಬಾಂದ್ರಾದಲ್ಲಿರುವ ಕರಾಚಿ ಸ್ವೀಟ್ಸ್‌ ಶಾಪ್‌ ಮಾಲೀಕರಿಗೆ, ಅಂಗಡಿಯ ಹೆಸರಿನಲ್ಲಿರುವ ಕರಾಚಿ ಎಂಬ ಪದವನ್ನು ತೆಗೆದು ಹಾಕುವಂತೆ ಸೂಚಿಸಿದ್ದರು. ಈ ಘಟನೆ ಬೆನ್ನಲ್ಲೇ ಫಡ್ನವೀಸ್ ಇಂತಹುದ್ದೊಂದು ಹೇಳಿಕೆ ನೀಡಿದ್ದಾರೆ. ಇನ್ನು ತಮ್ಮ ಪಕ್ಷದ ನಾಯಕ ಇಂತಹುದ್ದೊಂದು ಹೇಳಿಕೆ ನೀಡಿರುವುದು ಪಕ್ಷದ ಅಧಿಕೃತ ಹೇಳಿಕೆಯಲ್ಲ ಎಂದಿದೆ.

ಶನಿವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಫಡ್ನವೀಸ್, ನಾವು ಅಖಂಡ ಭಾರತದಲ್ಲಿ ವಿಶ್ವಾಸವಿರಿಸುತ್ತೇವೆ. ಮುಂದೊಂದು ದಿನ ಕರಾಚಿ ಕೂಡಾ ಭಾರತದ ಭಾಗವಾಗಲಿದೆ ಎಂಬುವುದು ನಮ್ಮ ಆಶಯ ಎಂದಿದ್ದಾರೆ.

ದೇವೇಂದ್ರ ಫಡ್ನ​ವೀಸ್‌ ಜತೆ ಜಾರ​ಕಿ​ಹೊಳಿ: ಕುತೂ​ಹಲ ಕೆರ​ಳಿ​ಸಿದ ಉಭಯ ನಾಯಕರ ಭೇಟಿ

ಕಳೆದ ವಾರ ಶಿವಸೇನೆ ನಾಯಕ ನಿತಿನ್ ನಂದಗಾಂವ್ಕರ್ ವಿಡಿಯೋ ಒಂದು ಭಾರೀ ವೈರಲ್ ಆಗಿತ್ತು. ಇದರಲ್ಲಿ ಕರಾಚಿ ಸ್ವೀಟ್ಸ್ ಮಾಲೀಕರಿಗೆ ಅಂಗಡಿ ಹೆಸರು ಬದಲಾಯಿಸುವಂತೆ ಆದೇಶಿಸಿದ್ದ ದೃಶ್ಯವಿತ್ತು.