ಹೋಟೆಲ್‌ಗಳ ಮುಂದೆ ಮಾಲೀಕನ ಹೆಸರು ಕಡ್ಡಾಯ: ಯುಪಿ ಪೊಲೀಸರ ನಡೆಗೆ ಮುಸ್ಲಿಂ ವ್ಯಾಪಾರಿ, ನಾಯಕರ ಕಿಡಿ

ಶ್ರಾವಣದಲ್ಲಿ ಪವಿತ್ರ ಕಾವಾಡಿ ಯಾತ್ರೆ ಸಾಗುವ 240 ಕಿ.ಮೀ ರಸ್ತೆಯುದ್ದಕ್ಕೂ ಇರುವ ಬೀದಿ ಬದಿ ತಿಂಡಿ ವ್ಯಾಪಾರಿಗಳು ತಮ್ಮ ತಳ್ಳುವ ಗಾಡಿ/ ಅಂಗಡಿಯೆದುರು ಮಾಲೀಕರ ಹೆಸರನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಉತ್ತರ ಪ್ರದೇಶದ ಮುಜಪ್ಟರ್‌ನಗರ ಪೊಲೀಸರು ಆದೇಶ ಹೊರಡಿಸಿದ್ದಾರೆ.

kanwar yatra 2024 Up police order to Owners of hotels to put owner name mandatory in front of hotels Muslim trader, leader sparks UP police action akb

ಮೀರತ್‌: ಶ್ರಾವಣದಲ್ಲಿ ಪವಿತ್ರ ಕಾವಾಡಿ ಯಾತ್ರೆ ಸಾಗುವ 240 ಕಿ.ಮೀ ರಸ್ತೆಯುದ್ದಕ್ಕೂ ಇರುವ ಬೀದಿ ಬದಿ ತಿಂಡಿ ವ್ಯಾಪಾರಿಗಳು ತಮ್ಮ ತಳ್ಳುವ ಗಾಡಿ/ ಅಂಗಡಿಯೆದುರು ಮಾಲೀಕರ ಹೆಸರನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಉತ್ತರ ಪ್ರದೇಶದ ಮುಜಪ್ಟರ್‌ನಗರ ಪೊಲೀಸರು ಆದೇಶ ಹೊರಡಿಸಿದ್ದಾರೆ. 'ಯಾತ್ರೆಯ ವೇಳೆ ಕಾವಾಡಿಗಳು ರಸ್ತೆ ಬದಿಯಲ್ಲಿ ತಿಂಡಿ-ತಿನಿಸುಗಳನ್ನು ಖರೀದಿಸುವ ಕಾರಣ ಉಂಟಾಗಬಹುದಾದ ಗೊಂದಲಗಳಿಗೆ ಆಸ್ಪದ ಕೊಡದೆ ಕಾನೂನು ಸುವ್ಯವಸ್ಥೆ ಕಾಪಾಡಲು ಈ ಆದೇಶ ಹೊರಡಿಸಲಾಗಿದೆ ಎಂದು ಮುಜಪ್ಟರ್‌ನಗರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಸಿಂಗ್ ಹೇಳಿದ್ದಾರೆ.

ಆದರೆ, ಇದು ಮುಸ್ಲಿಂ ವ್ಯಾಪಾರಿಗಳನ್ನು ಗುರಿಯಾಗಿಸಿ ಹೊರಡಿಸಿರುವ ಆದೇಶ. ಮುಸ್ಲಿಂ ವ್ಯಾಪಾರಿಗಳಿಂದ ಕಾವಾಡಿಗಳು ಏನೂ ಖರೀದಿಸಬಾರದು ಎಂಬ ಹುನ್ನಾರ ಎಂದು ಎಐಎಂಐಎಂ ನಾಯಕ ಅಸಾದುದ್ದೀನ್ ಒವೈಸಿ ಕಿಡಿಕಾರಿದ್ದಾರೆ. ಈ ನಡೆಗೆ ಖುದ್ದು ಬಿಜೆಪಿ ನಾಯಕ ಮುಖಾರ್ ಅಬ್ಬಾಸ್ ನಖಿ ಆವರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜು.22ರಿಂದ ಆ.2ರ ವರೆಗೆ ನಡೆಯುವ ಕಾವಾಡಿ ಯಾತ್ರೆಯಲ್ಲಿ ಗಂಗೆಯ ನೀರು ಸಂಗ್ರಹಿಸುವ ಸಲುವಾಗಿ ಶಿವಭಕ್ತರು ಪಾದಯಾತ್ರೆ ಕೈಗೊಳ್ಳುತ್ತಾರೆ.

ಮುಸ್ಲಿಮರು ತಮ್ಮ ಅಂಗಡಿಗಳಿಗೆ ಹಿಂದೂ ದೇವತೆಗಳ ಹೆಸರಿಡಬೇಡಿ ಎಂದ ಬಿಜೆಪಿ ಸಚಿವ

ಮಂಗಳೂರಲ್ಲಿ ಮುಂದುವರಿದ ಧರ್ಮ ದಂಗಲ್‌ ವಿವಾದ: ಕಾಂಗ್ರೆಸ್‌ ಸರ್ಕಾರ ವಿರುದ್ಧ ಮುಸ್ಲಿಂ ವ್ಯಾಪಾರಿಗಳ ಆಕ್ರೋಶ

Latest Videos
Follow Us:
Download App:
  • android
  • ios